ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್-19 (ಕೊರೋನಾ 19 ರೋಗಾಣು) ವಿರುದ್ಧ ಹೋರಾಡಲು ಮಾರ್ಚ್ 22 ರಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಈ ಕರೆಗೆ ಬೆಂಬಲಿಸಿ ಇಡೀ ಜಗತ್ತಿನಾದ್ಯಂತ ಇದೇ ಮೊದಲ ಬಾರಿ ಜನತೆಯು ರಾಷ್ಟ್ರಹಿತಕ್ಕಾಗಿ ತೆಗೆದುಕೊಂಡಿರುವ ಬಂದ್ ಆಗಿರಬಹುದು. ಹೀಗಾಗಿ ನಾಗರಿಕರೆಲ್ಲರು ಬೆಂಬಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಕೊರೋನಾದಂತಹ ರಾಷ್ಟ್ರೀಯ ಆಪತ್ತಿನ ಸಮಯದಲ್ಲಿ ಜನಜಾಗೃತಿಯನ್ನು ಮಾಡಲು ಹಿಂದೂ ಜನಜಾಗೃತಿ ಸಮಿತಿ ಕಾರ್ಯಪ್ರವೃತ್ತವಾಗಿದೆ . ಮಂಗಳೂರು ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ ಅಸುಪಾಸಿನಲ್ಲಿ ಹಾಗೂ ಜ್ಯೋತಿ ಸರ್ಕಲ್ ನ ಆಸುಪಾಸಿನಲ್ಲಿ ಅದೇ ರೀತಿ ಪುತ್ತೂರಿನ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ , ಬೆಳ್ತಗಂಡಿ ಕೆ.ಎಸ.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್ ಹತ್ತಿರವೂ ಸಹ ಸಮಿತಿಯ ಕಾರ್ಯಕರ್ತರು ಕೈಯಲ್ಲಿ ಪ್ರಬೋಧನಾ ಫಲಕವನ್ನು ಹಿಡಿದು ನಿಂತಿದ್ದರು. ಈ ಮೂಲಕ ನಾಗರಿಕರಿಗೆ ‘ಕರೋನಾ 19’ ರೋಗಾಣು ವಿರುದ್ಧ ಹೋರಾಡಲು ಸರಕಾರ ಹಾಗೂ ಅದಕ್ಕೆ ಸಂಬಂಧಪಟ್ಟ ಖಾತೆಯು ಹೇಳಿದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅದೇ ರೀತಿ ಸಂಘಟಿತವಾಗಿ ಈ ಮಹಾಮಾರಿಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿರಬೇಕು ಎಂದು ಕರೆ ನೀಡಲಾಯಿತು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…