ಸುಳ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಏರ್ಪಡಿಸಲಾಯಿತು. ಮನೆಯ ಮುಂಭಾಗದಲ್ಲಿ ಬಲಿಯೇಂದ್ರ ಹಾಕಿ ಪೂಜೆ ನಡೆಸುವುದು ದೀಪಾವಳಿ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಮನೆಯ ಮುಂಭಾಗದಲ್ಲಿ ಹಾಕುವ ಬಲಿಯೇಂದ್ರವನ್ನು ಹೂವು, ಕಾಯಿ, ಬಳ್ಳಿ ಮತ್ತಿತರ ವಸ್ತುಗಳಿಂದ ಮನಮೋಹಕವಾಗಿ ಅಲಂಕರಿಸಲಾಗುತ್ತದೆ. ಅತ್ಯಂತ ಆಕರ್ಷಕವಾಗಿ ಅಲಂಕರಿಸಿದ ಬಲಿಯೇಂದ್ರಕ್ಕೆ ಬಹುಮಾನ ನೀಡಲಾಗುತ್ತದೆ.
ಮಿತ್ರ ಬಳಗದ ಸದಸ್ಯರು ಮನೆ ಮನೆ ತೆರಳಿ ಬಲಿಯೇಂದ್ರಕ್ಕೆ ಅಂಕ ನೀಡುತ್ತಾರೆ. ಅತೀ ಹೆಚ್ಚು ಅಂಕ ಗಳಿಸಿದ ಬಲಿಯೇಂದ್ರವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಕರ್ಷಕವಾಗಿ ಅಲಂಕರಿಸಿದ ಗೋವಿಂದ ನಾಯ್ಕ ದುಗಲಡ್ಕ ಇವರ ಮನೆಯ ಬಲಿಯೇಂದ್ರ ಪ್ರಥಮ ಬಹುಮಾನ ಪಡೆದುಕೊಂಡಿತು.
ಪುಷ್ಪಾವತಿ ಆಚಾರ್ಯ ಮತ್ತು ಮನೆಯವರ ಬಲಿಯೇಂದ್ರ ಎರಡನೇ ಬಹುಮಾನ ಮತ್ತು ಶಿವರಾಮ ನಾಯ್ಕ ನೆಲ್ಲಿಬಂಗಾರಡ್ಕ ಕೇರ್ಪಳ ಇವರ ಮನೆಯ ಬಲಿಯೇಂದ್ರ ತೃತೀಯ ಸ್ಥಾನ ಪಡೆದಿದೆ ಎಂದು ಮಿತ್ರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಿತ್ರ ಬಳಗದ ವತಿಯಿಂದ ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ, ಗೂಡು ದೀಪ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…