ಸುಳ್ಯ: 2020ರಲ್ಲಿ ಕೊನೆಗೊಳ್ಳಬೇಕಾದ ದೇಶದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ಕ್ಯಾಬಿನೆಟ್‌ನಲ್ಲಿ ನಿರ್ಧರಿಸಿ 10 ವರ್ಷಗಳ ಕಾಲ ಅದೇ ರೀತಿಯಲ್ಲಿ ಮುಂದುವರಿಸುವ ನಿರ್ಧಾರ ಸರಿಯಲ್ಲ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ಮೀಸಲಾತಿ ಮುಕ್ತಿ ಸಮಿತಿಯ ಸಂಚಾಲಕ ಪ್ರದೀಪ್‌ಕುಮಾರ್ ಕೆ.ಎಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಮೀಸಲಾತಿ ನೀಡುವುದಕ್ಕೆ ನಾವು ವಿರೋಧವಿಲ್ಲ. ಅದರೆ ಮೀಸಲಾತಿ ಕಾಲ ಕಾಲಕ್ಕೆ ಬದಲಾವಣೆಯಾಗಬೇಕು, ಎಲ್ಲಾ ಕ್ಷೇತ್ರದ ಜನರಿಗೂ ಮೀಸಲಾತಿಯ ಅವಕಾಶ ದೊರೆಯುವಂತಾಗಬೇಕು. ಒಂದೊಂದೇ ಕ್ಷೇತ್ರದಲ್ಲಿ 60-70 ವರ್ಷಗಳ ಕಾಲ ಮೀಸಲಾತಿ ನೀಡಿದರೆ ಉಳಿದ ಕ್ಷೇತ್ರದ ಜನರು ಅವಕಾಶದಿಂದ ವಂಚಿತರಾಗುತ್ತಾರೆ ಮತ್ತು ಮೀಸಲಾತಿ ನೀಡುವ ಉದ್ದೆಶ ಈಡೇರುವುದಿಲ್ಲ. ಮೀಸಲಾತಿ ಬದಲಿಸಲು ಅಥವಾ ಮುಂದುವರಿಸಲು ಅದಕ್ಕೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಅವರು ನೀಡಿದ ತೀರ್ಮಾನದ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಈ ಹಿಂದೆ ಮೂರು ಬಾರಿ ನಿಯೋಜಿತ ಸಮಿತಿಯ ವರದಿಯ ಆಧಾರದಲ್ಲಿಯೇ ದೇಶದಲ್ಲಿ ಶೇ.20ರಷ್ಟು ಬದಲಾವಣೆಯನ್ನು ಮಾಡುತ್ತಿದ್ದರು. ಆದರೆ ಚುನಾವಣಾ ಸಮಿತಿಯ ತೀರ್ಮಾನದಂತೆ 2020ರಲ್ಲಿ ಕೊನೆಗೊಳ್ಳಬೇಕಾದ 20 ವರ್ಷದ ಮೀಸಲಾತಿಯ ಅವಧಿಯನ್ನು 10 ವರ್ಷಗಳ ಕಾಲ ಅದೇ ರೀತಿ ವಿಸ್ತರಿಸುವುದು ಎಂಬ ನಿರ್ಧಾರ ಸರಿಯಲ್ಲ ಎಂದರು.
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಳ್ಯದಲ್ಲಿ ಮೀಸಲಾತಿ ಮುಕ್ತಿ ಅಭಿಯಾನವನ್ನು ಮಾಡಿ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮೀಸಲಾತಿ ಮುಕ್ತಿ ಸಮಿತಿಯ ವತಿಯಿಂದ ನಡೆಸಲಾಗಿತ್ತು. ಮೀಸಲಾತಿ ಮುಕ್ತಿಗಾಗಿ ಅಭಿಯಾನ ಮತ್ತು ಕಾನೂನು ರೀತಿಯ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಶೋಕ್ ಎಡಮಲೆ, ಪ್ರವೀಣ್ ಮುಂಡೋಡಿ, ಚೆನ್ನಕೇಶವ ನಾಯಕ್ ಉಪಸ್ಥಿತರಿದ್ದರು.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…