ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ಈ ಬಾರಿ ಗಾಳಿ ಮಳೆಗೆ ವಿಪತ್ತು ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಇಲಾಖೆ ಸಜ್ಜುಗೊಂಡಿದೆ. ಇದಕ್ಕಾಗಿ 500 ಸಿಬಂದಿಗಳನ್ನು ನಿಯೋಜನೆ ಮಾಡಿದೆ.
ಅಗತ್ಯ ಸಿಬ್ಬಂದಿಗಳು ಮತ್ತು ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಚೆಸ್ಕಾಂ ಮುಂದಾಗಿದೆ. ಜಿಲ್ಲೆಯ ಕಾಫಿ ತೋಟ ಮತ್ತು ಅರಣ್ಯಗಳ ಒಳಗೆ ವಿದ್ಯುತ್ ಮಾರ್ಗಗಳು ಹಾದು ಹೋಗಿದ್ದು, ಮಳೆಗಾಲದಲ್ಲಿ ಗಾಳಿ ಮಳೆಗೆ ಮರಗಳು ಬಿದ್ದು, ಭೂ ಕುಸಿತ ಉಂಟಾಗಿ ವಿದ್ಯುತ್ ಮಾರ್ಗಕ್ಕೆ ಮೊದಲು ಹಾನಿಯುಂಟಾಗುತ್ತದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಲೈನ್‍ಗಳನ್ನು ದುರಸ್ಥಿಪಡಿಸಲು ಸಿಬ್ಬಂದಿಗಳಿಗೆ ಕಷ್ಟ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಚೆಸ್ಕಾಂ ಕಾರ್ಯಪ್ರವೃತ್ತವಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಳೆಯ ಆರ್ಭಟದಿಂದ ಸಂಭವಿಸಿದ ಜಲ ಪ್ರಳಯ ಮತ್ತು ಭೂಕುಸಿತದ ಸಂದರ್ಭ ಕೊಡಗು ಚೆಸ್ಕಾಂಗೆ ಕೋಟ್ಯಾಂತರ ರೂ. ಹಾನಿ ಸಂಭವಿಸಿತ್ತು. ಪರಿಸ್ಥಿತಿ ತೀರಾ ವಿಷಮಕ್ಕೆ ತಿರುಗಿದರೂ ಕೂಡ ಕೊಡಗು ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಸಲು ಚೆಸ್ಕಾಂ ಸಿಬ್ಬಂದಿಗಳು ಶಕ್ತಿ ಮೀರಿ ಪ್ರಯತ್ನಿಸಿದರು. ಹೀಗಾಗಿ ಗ್ರಾಮೀಣ ಭಾಗಗಳನ್ನು ಹೊರತುಪಡಿಸಿದರೆ ನಗರ ಮತ್ತು ಪಟ್ಟಣಗಳಿಗೆ ಕರೆಂಟ್ ಕಟ್‍ನ ದೊಡ್ಡ ತೊಂದರೆ ಎದುರಾಗಿರಲಿಲ್ಲ. ಪರಿಸ್ಥಿತಿ ಸಹಜತೆಯ ಕಡೆ ಮರುಳಿದಾಗ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಸಿದ ಚೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕ್ರಮಕ್ಕೆ ರಾಜ್ಯ ಸರಕಾರ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿತ್ತು.
ಈ ಬಾರಿಯ ಮಳೆಗಾಲದ ಸವಾಲುಗಳನ್ನು ಎದುರಿಸಲು ಚೆಸ್ಕಾಂನ 350 ಸಿಬ್ಬಂದಿಗಳು, 150 ಗ್ಯಾಂಗ್‍ಮೆನ್‍ಗಳು ಸಹಿತ 14 ವಾಹನಗಳ ಸಹಿತ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈಗಾಗಲೇ ಕೊಡಗು ಚೆಸ್ಕಾಂನಲ್ಲಿ 350 ಮಂದಿ ಮಾರ್ಗದಾಳುಗಳಿದ್ದು, ಹೆಚ್ಚುವರಿಯಾಗಿ 150 ಗ್ಯಾಂಗ್‍ಮೆನ್‍ಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಎಲ್ಲಾ ಸೆಕ್ಷನ್ ವ್ಯಾಪ್ತಿಯಲ್ಲಿ ಇಲಾಖೆಯ ಲಾರಿ ಹಾಗೂ ವಾಹನಗಳಿದ್ದು, ತೀರಾ ಹದಗೆಟ್ಟ ರಸ್ತೆಯಲ್ಲೂ ಓಡಾಡಲು ಸೌಲಭ್ಯ ಇರುವ 14 ಪಿಕ್‍ಅಪ್ ವಾಹನಗಳನ್ನು ಬಳಸಿಕೊಳ್ಳಲು ಚೆಸ್ಕಾಂ ಮುಂದಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…