ಮುಕ್ಕೂರು-ಕುಂಡಡ್ಕ ಶ್ರೀ ಗಣೇಶೋತ್ಸವದ ‘ಹತ್ತರ ಹುತ್ತರಿ’ ಕಾರ್ಯಕ್ರಮ

September 1, 2019
10:24 PM

ಮುಕ್ಕೂರು:ತುಳುನಾಡಿನ ಸಂಪ್ರದಾಯ ಹಾಗೂ ಗಣಪತಿಗೆ ಹತ್ತಿರದ ಸಂಬಂಧವಿದೆ. ರೈತ ತನ್ನ ನೆಲದ ಹುಟ್ಟುವಳಿಯನ್ನು ಕಟ್ಟುವುದೇ ಗಣಪತಿ ಇಡುವುದರಿಂದ. ಗಣಪತಿಯ ಸೃಷ್ಠಿ ಬೆವರು ಮತ್ತು ಮಣ್ಣಿನಿಂದ ಇದು ಕೃಷಿಯ ಸಂಕೇತವೂ ಆಗಿದೆ. ಹಳ್ಳಿಯ ಸಮುದಾಯವೊಂದು ಒಟ್ಟಾಗಿ ಊರನ್ನು ಸಂಸ್ಕರಿಸಿದ ಶಾಲೆಯಲ್ಲಿ ಸಾಮರಸ್ಯದಿಂದ ನಡೆಸುವ ಹಬ್ಬವೇ ನಿಜವಾದ ಗಣೇಶೋತ್ಸವ ಎಂದು ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ನರೆಂದ್ರ ರೈ ದೇರ್ಲ ಹೇಳಿದರು.

Advertisement
Advertisement

ಅವರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಂಡಡ್ಕ-ಮುಕ್ಕೂರು ಇದರ ದಶಮಾನೋತ್ಸವದ ಪ್ರಯುಕ್ತ ನಡೆದ ‘ಹತ್ತರ ಹುತ್ತರಿ’ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗೈದರು. ಸೃಜಶೀಲತೆಯ ನೇತಾರರಿಗೆ ಗಣಪತಿ ಆರಾಧ್ಯ ದೇವರು. ಸಾರ್ವಜನಿಕವಾಗಿ ಆಚರಿಸಲ್ಪಡುವ ಗಣಪತಿ ಜನಪ್ರಿಯತೆಯ ಶಕ್ತಿ. ಸಮಷ್ಠಿಯ ಬಹುತ್ವದ ರೂಪವೇ ಗಣಪತಿ. ಜನರ ನಡುವಿನ ಸಂಬಂಧದ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಬಹುತ್ವ ಮರೆಯಾಗುತ್ತಿದೆ ಎಂದು  ನರೆಂದ್ರ ರೈ ದೇರ್ಲ ಹೇಳಿದರು.

Advertisement

ಹತ್ತರ ಹುತ್ತರಿ ಸಭಾ ಕಾರ್ಯಕ್ರಮವನ್ನು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿ , ಸ್ವಾತಂತ್ರ್ಯ ಹೊರಾಟಕ್ಕೆ ಯುವಕರನ್ನು ಒಗ್ಗೂಡಿಸಲು ತಿಲಕರು ಆರಂಭಿಸಿದ ಗಣೇಶೋತ್ಸವ ಸಾಮರಸ್ಯದ ಸಂಕೇತವಾಗಿದ್ದು, ಪ್ರಸ್ತುತ ದಿನಗಳಲ್ಲಿ ಸಾಮರಸ್ಯದ ಅಗತ್ಯತೆ ಇದ್ದು, ಸಾಮರಸ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.

Advertisement

ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಭಾರತದ ಪವಿತ್ರವಾದ ಮಣ್ಣಿನಲ್ಲಿ ಆಚಾರ,ವಿಚಾರ, ಸಂಸ್ಕೃತಿ  ಅಡಕವಾಗಿದೆ. ಇಂತಹ ಮಣ್ಣಿನಲ್ಲಿ ಜಾತಿ, ಮತ,ಧರ್ಮ ಮೀರಿ ಉತ್ಸವಗಳಾಗಬೇಕು. ಕೃಷಿಕನ ನೇಗಿಲ ಜೀವನವನ್ನು ನೆನಪಿಸುವ ಗಣೇಶನ ಹಬ್ಬ ವೈಶಿಷ್ಟ್ಯಪೂರ್ಣವಾಗಿದೆ ಎಂದರು.

ವೈದ್ಯ ಡಾ.ನರಸಿಂಹ ಶರ್ಮಾ ಕಾನಾವು, ಭೂ ವಿಜ್ಞಾನಿ ಸಂಧ್ಯಾ ಕುಮಾರಿ, ಹೈನುಗಾರಿಕಾ ಸಾಧಕ ಜಗನ್ನಾಥ ಪೂಜಾರಿ ಮುಕ್ಕೂರು, ಪ್ರಗತಿಪರ ಕೃಷಿಕ ಇಸ್ಮಾಯಿಲ್ ಕುಂಡಡ್ಕ, ಸಾಹಿತ್ಯ ಸಾಧಕಿ ಅಶ್ವಿನಿ ಕೋಡಿಬೈಲು, ನಾಟಿ ವೈದ್ಯೆ ಯಶೋಧಾ ಬೀರುಸಾಗು, ದೈವ ಪರಿಚಾರಕ ಕೊರಗ್ಗು ಅನೋವುಗುಂಡಿ, ಹಿರಿಯ ನಾಗರಿಕ ಕಂಜೋಲಿ ಇವರುಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಸಾಧಕರ ಅಭಿನಂದನಾ ಮಾತುಗಳನ್ನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಾಧಕ 12 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿಡಿ ಗೌರವಿಸಲಾಯಿತು. ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯನ್ನು ಮನ್ನಡೆಸಿದ 10 ಮಂದಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

Advertisement

Advertisement

ದಶಮಾನೋತ್ಸವ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಠಾಣಾ ಸಬ್ ಇನ್ಸ್ ಪೆಕ್ಟರ್ ಈರಯ್ಯ ಡಿ.ಎನ್, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪೊಡಿಯಾ, ಡಿಸಿಸಿ ಬ್ಯಾಂಕ್ ಮಾರಾಟಾಧಿಕಾರಿ ಸಂತೋಷ್ ಕುಮಾರ್ ಮರಕ್ಕಡ, ಪೆರುವಾಜೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಲಲಿತಾ, ಮುಕ್ಕೂರು ಶಾಲಾ ಮುಖ್ಯಗುರು ವಸಂತಿ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ತಿರುಮಲೇಶ್ವರ ಭಟ್ ಕಾನಾವು, ಕಾರ್ಯಾಧ್ಯಕ್ಷ ಉಮೇಶ್ ಕೆ.ಎಂಬಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಎನ್.ಕೆ, ಕೋಶಾದಿಕಾರಿ ರಾಮಚಂದ್ರ ಚೆನ್ನಾವರ ಉಪಸ್ಥಿತರಿದ್ದರು.

ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸ್ವಾಗತಿ ಸಿದರು. ಉಮೇಶ್ ಕೆ.ಎಂ.ಬಿ ವಂದಿಸಿದರು. ರಕ್ಷಿತ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮ: ಮುಕ್ಕೂರು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕು.ಅವನಿ ಕೋಡಿಬೈಲು ಅವರ ಶಿವನನ್ನು ಕುರಿತ ವರ್ಣ ಭರತನಾಟ್ಯ, ತ್ರಿನಯನ ನಾಟ್ಯಾಲಯದ ವಿದುಷಿ ಆರಾಧಿತಾ ಕಾಯರ್‍ಮಾರ್ ಅವರ ಭರತನಾಟ್ಯ, ಕನ್ನಡ ಕೋಗಿಲೆ ಪ್ರಥಮ ರನ್ನರ್‍ಅಪ್ ಅಖಿಲಾ ಪಜಿಮಣ್ಣು ತಂಡದ ಗಾನಯಾನ ಸಂಗೀತ ರಸಸಂಜೆ, ಸುಂದರ ರೈ ಮಂದಾರ ತಂಡದ ಬಲೆ ತೆಲಿಪಾಲೆ ಕಾರ್ಯಕ್ರಮ ನಡೆಯಿತು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror