ಮೈಸೂರು ವಾರಿಯರ್ಸ್‍ನಿಂದ ಕ್ರಿಕೆಟ್ ಪ್ರತಿಭಾನ್ವೇಷಣೆ

July 14, 2019
11:00 AM

ಮಡಿಕೇರಿ: ಕರ್ನಾಟಕದ ಗ್ರಾಮೀಣ ಪ್ರದೇಶಗಳ ಹಾಗೂ ಒಳಭಾಗಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವತನ್ನ ಬದ್ಧತೆಯ ಭಾಗವಾಗಿ, ಮೈಸೂರು ವಾರಿಯರ್ಸ್‍ನ ಮಾಲೀಕರಾಗಿರುವ ಎನ್‍ಆರ್ ಸಮೂಹ, ಕ್ರಿಕೆಟ್ ಪ್ರತಿಭಾನ್ವೇಷಣೆಯ ಆರನೇ ಆವೃತ್ತಿಯನ್ನು ಆಯೋಜಿಸಿದೆ. ಜುಲೈ 17 ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್‍ ಅಕಾಡೆಮಿಯಲ್ಲಿ ಮತ್ತು ಜುಲೈ20 ರಂದು ಮೈಸೂರಿನ ಎಸ್‍ಡಿಎನ್‍ಆರ್ ಮೈದಾನದಲ್ಲಿ ಪ್ರತಿಭಾನ್ವೇಷಣೆ ನಡೆಯಲಿದೆ. ಕರ್ನಾಟಕದ ಯಾವುದೇ ಭಾಗದ ಯುವ, ಪ್ರತಿಭಾವಂತ ಕ್ರಿಕೆಟ್‍ ಆಟಗಾರರು ಭಾಗವಹಿಸಬಹುದು. ಇಲ್ಲಿ ತಮ್ಮಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಆಟಗಾರರು 2019ರ ಕೆಪಿಎಲ್ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್‍ತಂಡವನ್ನು ಪ್ರತಿನಿಧಿಸಲಿದ್ದಾರೆ.

Advertisement
Advertisement

ಈ ಪ್ರತಿಭಾ ಅನ್ವೇಷಣೆ ಮುಖ್ಯವಾಗಿ ಕರ್ನಾಟಕದ ಕೆಎಸ್‍ಸಿಎ ನೋಂದಾಯಿತ ಕ್ಲಬ್‍ಗಳ ಕೆಎಸ್‍ಸಿಎ ನೋಂದಾಯಿತ ಸದಸ್ಯರಿಗಾಗಿ ಆಯೋಜಿಸಲಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ವಿಶೇಷ ಕೌಶಲ್ಯ ಹೊಂದಿರುವ ಅನೇಕ ಪ್ರತಿಭಾವಂತ ಆಟಗಾರರು ಇದ್ದಾರೆ. ಯುವ ಪ್ರತಿಭಾವಂತ ಕ್ರಿಕೆಟ್ ಪ್ರತಿಭೆಗಳನ್ನು ಬೆಳೆಸುವ ಜೊತೆಗೆಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿ ಪೋಷಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

Advertisement

ಸ್ಥಳ: ಮೈಸೂರನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಬರುವ ಆಟಗಾರರಿಗೆ

ಸ್ಥಳ:  ಬೆಂಗಳೂರು
ದಿನಾಂಕ: ಜುಲೈ 17, 2019
ವಿಳಾಸ ಜಸ್ಟ್ ಕ್ರಿಕೆಟ್‍ಅಕಾಡೆಮಿ
ನಂ. 1/1ಬಿ, ಸಿಂಗನಾಯಕನಹಳ್ಳಿ
ದೊಡ್ಡಬಳ್ಳಾಪುರ ರಸ್ತೆ,
ನಿತ್ಯೋತ್ಸವಕಲ್ಯಾಣ ಮಂಟಪದ ಹಿಂದೆ,
ಯಲಹಂಕ ಬೆಂಗಳೂರು– 560064
ಸಮಯ ಬೆಳಿಗ್ಗೆ 8.00 ಗಂಟೆಯ ನಂತರ
ಸಂಪರ್ಕ ಮಧುಸೂದನ: +91 9986024717
ಸೋಮಶೇಖರ: +91 9900545191

Advertisement

ಸ್ಥಳ: ಮೈಸೂರು ಭಾಗದ ಆಟಗಾರರಿಗೆ
ಸ್ಥಳ : ಮೈಸೂರು
ದಿನಾಂಕ : ಜುಲೈ 20, 2019
ವಿಳಾಸ ಎಸ್‍ಡಿಎನ್‍ಆರ್ ಮೈದಾನ
ಗಂಗೋತ್ರಿಗ್ಲೇಡ್ಸ್, ಅಕಾಡೆಮಿ ನೆಟ್ಸ್
ಮೈಸೂರು ವಿಶ್ವವಿದ್ಯಾಲಯ ಮೈಸೂರು
ಸಮಯ ಬೆಳಿಗ್ಗೆ 8.00 ನಂತರ
ಸಂಪರ್ಕ ಮಧುಸೂಧನ: +91 9986024717
ಸೋಮಶೇಖರ: +91 9900545191

ಹೆಚ್ಚಿನ ಮಾಹಿತಿಗೆ ಮೇಲಿನ ಸಂಖ್ಯೆಯನ್ನು ಸಂಪರ್ಕ ಮಾಡಬಹುದು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror