ಸುಳ್ಯ: ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆಯು ಹಣ ವಸೂಲಾತಿಗಿರುವ ಸರಕಾರದ ಹೊಸ ತಂತ್ರ. ಮಸೂದೆಯಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತರ ಉದ್ಯಮಗಳಂತೆ ಮೋಟಾರು ಉದ್ಯಮಕ್ಕೂ ಮುಂದೆ ಸಂಕಷ್ಟದ ದಿನಗಳು ಬರಲಿವೆ. ಬಿ.ಎಸ್.ಎನ್.ಎಲ್, ವಿಮಾನಯಾನ ಎಲ್ಲವೂ ಸಂಕಷ್ಟದಲ್ಲಿದೆ. ಕೇಂದ್ರ ಸರಕಾರದ ಹೊಸ ಕಾಯಿದೆಯಿಂದ ವಾಹನ ಉದ್ಯಮಕ್ಕೂ ಸಮಸ್ಯೆ ಎದುರಾಗಲಿದೆ. 5 ವರ್ಷ ಮೋದಿಯ ಆಳ್ವಿಕೆಯಲ್ಲಿ ದೇಶ 15 ವರ್ಷ ಹಿಂದಕ್ಕೆ ಹೋಗಿದೆ. ಇನ್ನೂ 5 ವರ್ಷ ಕಳೆದರೆ 30 ವರ್ಷದಷ್ಟು ಹಿಂದಕ್ಕೆ ಹೋಗುತ್ತದೆ ಎಂದು ಹೇಳಿದರು.
ಸಿದ್ದಾರ್ಥ ಸಾವಿಗೆ ದೇಶದ ಆರ್ಥಿಕ ಸಂಕಷ್ಟ ಕಾರಣ:
ಕೆಫೆ ಕಾಫಿಡೇ ಮಾಲಕ ಸಿದ್ದಾರ್ಥ ಸಾವಿಗೆ ದೇಶದ ಆಡಳಿತ ಉಂಟುಮಾಡಿರುವ ಆರ್ಥಿಕ ಸಂಕಷ್ಟವೇ ಕಾರಣ ಎಂದು ವೆಂಕಪ್ಪ ಗೌಡ ಆರೋಪಿಸಿದ್ದಾರೆ. ಸಿದ್ದಾರ್ಥ ಸಾವು ಅತ್ಯಂತ ನೋವಿನ ಸಂಗತಿ. ಆದರೆ ರಾಜಕೀಯ ಮತ್ತು ವ್ಯವಹಾರ ವಲಯವನ್ನು ವಿಶ್ಲೇಷಿಸಿದರೆ ಈ ದೇಶ ಇಂದು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದು ತಿಳಿದು ಬರುತ್ತದೆ. ಹಲವು ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವು ಕಂಪೆನಿಗಳಲ್ಲಿನ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಆಡಳಿತ ತಂದಿಟ್ಟ ಆರ್ಥಿಕ ಸಂಕಷ್ಟ. ಸಿದ್ದಾರ್ಥರಂತವರು ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದರು.
ಸಿದ್ದಾರ್ಥ ಸಾವಿನಿಂದ ಇಡೀ ಕಾಫಿ ಉದ್ಯಮ ಮತ್ತು ಕಾಫಿ ಬೆಳೆಗಾರರಿಗೆ ನಷ್ಟವಾಗಿದೆ. ಕಾಫಿ ಬೆಳೆಗಾರರ ರಕ್ಷಣೆಗೆ ವಿಶೇಷ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಟಿಪ್ಪು ಜಯಂತಿ ರದ್ದು ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಟಿಪ್ಪು ಒಬ್ಬ ಹೋರಾಟಗಾರ ಎನ್ನುವ ನೆಲೆಯಲ್ಲಿ ಹಿಂದಿನ ಸರಕಾರ ಈ ಜಯಂತಿಯನ್ನು ಜಾರಿಗೆ ತಂದಿತು. ಈಗಿನ ಸರಕಾರಕ್ಕೆ ಆ ಭಾವನೆ ಇಲ್ಲದ ಕಾರಣ ಅದನ್ನು ರದ್ದುಪಡಿಸಿದೆ. ಈ ವಿಚಾರದಲ್ಲಿ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಧರ್ಮಪಾಲ ಕೊಯಿಂಗಾಜೆ, ನಂದರಜ ಸಂಕೇಶ, ಲಕ್ಷ್ಮಣ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…