ಸುಳ್ಯ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಎರಡನೇ ಬಾರಿ ಪ್ರಮಾನ ವಚನ ಸ್ವೀಕಾರ ಹಾಗೂ ಎರಡನೇ ಬಾರಿ ಎನ್.ಡಿ.ಎ ಸರಕಾರ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೇರುವ ಸಂಭ್ರಮವನ್ನು ಆಚರಿಸಲು ಸುಳ್ಯದಲ್ಲೂ ಕಾರ್ಯಕರ್ತರು, ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಸಾರ್ವಜನಿಕರಿಗೆ ವಿತರಿಸಲು 10 ಸಾವಿರ ಲಡ್ಡು ಸಿದ್ಧಪಡಿಸಲಾಗಿದೆ. ಮೂರು ಸಾವಿರ ಚಹಾ ವಿತರಣೆ ನಡೆಯಲಿದೆ. ಮೋದಿ ಅಭಿಮಾನಿಗಳಾದ ದಿನೇಶ್ ಎ.ಎಸ್.ನೇತೃತ್ವದ ಅಮ್ಮ ಫ್ಲವರ್ ಸ್ಟಾಲ್, ಹರಿಪ್ರಸಾದ್ ಅವರ ಕೀರ್ತನ್ ಕೆಟರರ್ಸ್, ಸತ್ಯಪ್ರಸಾದ್ ಅವರ ಜ್ಯೋತಿ ಫ್ಲವರ್ ಸ್ಟಾಲ್, ರಾಂಪ್ರಸಾದ್ ಅವರ ಪೂರ್ಣಿಮಾ ಟ್ರಾವೆಲ್ಸ್ ಜಂಟಿಯಾಗಿ ಸಂಜೆ ಲಡ್ಡು ಮತ್ತು ಚಹಾ ವಿತರಿಸುವರು. ಇದಕ್ಕಾಗಿ ಕಳೆದ ಎರಡು ದಿನಗಳಿಂದ 11 ಮಂದಿ ಸೇರಿ ಹತ್ತು ಸಾವಿರ ಲಡ್ಡು ತಯಾರಿಸಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಇವರು ಇಡೀ ನಗರದಲ್ಲಿ 15 ಸಾವಿರ ಲಡ್ಡು ಹಂಚಿದ್ದರು.
“ಮೋದಿಯವರು ಮತ್ತೆ ಪ್ರಧಾನಿಯಾಗಿ ಅಧಿಕ್ಕಾರಕ್ಕೇರುವುದು ತುಂಬಾ ಖುಷಿ ಕೊಟ್ಟಿದೆ. ಆದುದರಿಂದ ಎಲ್ಲರಿಗೂ ಸಿಹಿ ನೀಡಿ ಸಂಭ್ರಮ ಹಚ್ಚಿಕೊಳ್ಳಬೇಕು ಎಂಬ ನೆಲೆಯಲ್ಲಿ ಲಡ್ಡು ಹಂಚಲಾಗುವುದು” ಎಂದು ಜ್ಯೋತಿ ಫ್ಲವರ್ ಸ್ಟಾಲ್ ನ ಸತ್ಯಪ್ರಸಾದ್ ಸುಳ್ಯನ್ಯೂಸ್.ಕಾಂ ಗೆ ತಿಳಿಸಿದ್ದಾರೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…