ಸುಳ್ಯ: ಕುಮಾರವ್ಯಾಸ ಮಹಾ ಕವಿ ವ್ಯಾಸ ಭಾರತದಿಂದ ವಸ್ತುವನ್ನು ಸ್ವೀಕರಿಸಿದರೂ ಬರವಣಿಗೆಯಲ್ಲಿ ಸ್ವತಂತ್ರತೆಯನ್ನು ರೂಢಿಸಿಕೊಂಡ ಪ್ರತಿಭಾಶಾಲಿ. ಯುಗ ಧರ್ಮಕ್ಕನುಗುಣವಾಗಿ ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದಾನೆ. ಪಾತ್ರದ ವಿಶೇಷತೆಗೆ ತಕ್ಕಂತೆ ವಸ್ತುವಿನ ವೈವಿಧ್ಯಕ್ಕೆ ಹೊಂದುವಂತೆ ಮಹತ್ವದ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾನೆ. ” ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಶ್ರೀ ವೆಂಕಟ್ರಾಮ ಭಟ್ ಸುಳ್ಯ ಅವರು ಹೇಳಿದರು.
ಅವರು ನೆಹರು ಮೆಮೋರಿಯಲ್ ಪಿ. ಯು ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾದ ಕುಮಾರ ವ್ಯಾಸ ಭಾರತ ಕೃತಿಯ ಆಯ್ದ ಭಾಗದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲಕರಾದ ಲಕ್ಷ್ಮಣ್ ಏನೆಕಲ್ ಅವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಕು. ಬೇಬಿ ವಿದ್ಯಾ ಪ್ರಸ್ತಾವನೆ ಗೈದು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸಾಯಿ ಸಜನ್ ಸ್ವಾಗತಿಸಿ, ಶ್ರವಣ್ ವಂದಿಸಿದರು. ಯಜ್ನೇಶ್ ಕಾರ್ಯಕ್ರಮ ನಿರ್ವಹಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…