ಸುಂದರ ಬಿಸಿಲೆಯ ಪರಿಸರದ ಶ್ರೀ ಚಾಮುಂಡಿ ಕ್ಷೇತ್ರದ ಸುತ್ತಮುತ್ತ ಯುವಕರ ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಪರಿಸರವೂ ಸ್ವಚ್ಛವಾಗಬೇಕು, ವಾತಾವರಣವೂ ಶುಭ್ರವಾಗಿರಲಿ ಎಂದು ಸ್ವಚ್ಛತಾ ಕಾರ್ಯ ನಡೆಸಿತು.ಯಾವುದೇ ಪ್ರಚಾರ ಬಯಸದೆ ಕಳೆದ ಎರಡು ವಾರದಿಂದ ಈ ಕೆಲಸ ಮಾಡುತ್ತಿದೆ. ಈಗ ಪ್ರವಾಸಿಗರ, ಬಿಸಿಲೆ ಪ್ರದೇಶಕ್ಕೆ ತೆರಳುವವರ ಜವಾಬ್ದಾರಿ ಹೆಚ್ಚಿದೆ. ಈ ಕಡೆಗೆ ಫೋಕಸ್..
ಕಳೆದ ಕೆಲವು ಸಮಯದ ಹಿಂದೆ ಸ್ವಚ್ಛ ಸುಬ್ರಹ್ಮಣ್ಯವನ್ನು ಯುವಬ್ರಿಗೆಡ್ ತಂಡ ನಡೆಸಿದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯಗಳು, ಬಾಟಲಿಗಳು, ಕಸಗಳು ಸಿಕ್ಕಿದ್ದವು,. ಅದಾದ ಬಳಿಕ ಸದಾ ಜಾಗೃತಿ ಮೂಡಿಸಲಾಗಿತ್ತು. ಯಾತ್ರಕರ ಸಂಖ್ಯೆ ಅಪಾರ ಇರುವುದರಿಂದ ನಿರಂತರ ಜಾಗೃತಿ ಅನಿವಾರ್ಯ. ಹಾಗೆಂದು ಸ್ವಚ್ಛತಾ ಕಾರ್ಯ ಯಶಸ್ಸು ಕಂಡಿಲ್ಲ ಅಂತಲ್ಲ, ನಿತ್ಯವೂ ಜಾಗೃತಿಯೇ ಇದಕ್ಕೆ ಸದ್ಯದ ಪರಿಹಾರ.
ಇದೀಗ ನಮ್ಮ ಸುಬ್ರಹ್ಮಣ್ಯ ತಂಡ ,ಹಾಗೂ ಯುವ ಬ್ರಿಗೇಡ್ ಸಹಯೋಗದೊಂದಿಗೆ ಬಿಸಿಲೆಯ ಗಡಿ ಶ್ರೀ ಚಾಮುಂಡಿ ಕ್ಷೇತ್ರದಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಯಿತು. ಬೆಳಗ್ಗೆ ನಡೆದ ಈ ಕಾರ್ಯಕ್ರಮದಲ್ಲಿ ಯುವಕರು ಭಾಗವಹಿಸಿದರು. ಸುಂದರ ಪ್ರಕೃತಿಯ ಒಳಗೆ ಮದ್ಯ ದ ಬಾಟಲಿಗಳು, ಪ್ಲಾಸ್ಟಿಕ್ ಕಸಗಳು ಕಂಡುಬಂದವು. ಇದೆಲ್ಲಾ ಪರಿಸರವನ್ನು ಹಾಳು ಮಾಡುವುದರ ಜೊತೆಗೆ ದುರ್ನಾಥ ಬಿರುವಂತಿತ್ತು.ತಂಡವು ಬಾಟಿ ಹಾಗೂ ತ್ಯಾಜ್ಯ ಸಂಗ್ರಹಿಸಿ ಅವುಗಳನ್ನು ಸುರಕ್ಷಿತವಾದ ಪ್ರದೇಶದಲ್ಲಿ ವ್ಯವಸ್ಥೆ ಮಾಡಿತು. ಕಳೆದ ಎರಡು ವಾರದಿಂದ ಈ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಎರಡು ವಾರವೂ ಸಾಖಷ್ಟು ಪ್ರಮಾಣದಲ್ಲಿ ಕಸ ಕಂಡುಬಂದಿದೆ. ಇನ್ನೀಗ ಜಾಗೃತಿ ಕಾರ್ಯ ನಡೆಯಬೇಕಲಿದೆ. ಪರಿಸರ ಸ್ವಚ್ಛತೆ ಎಲ್ಲರ ಕಾಳಜಿ, ಜಾಗೃತಿಯಾಗಬೇಕಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.