ಸುಳ್ಯ: ಕಾರ್ಗಿಲ್ ವಿಜಯ ದಿವಸ್. ಈ ದಿನವನ್ನು ವಿವಿದೆಡೆ ವಿವಿಧ ಮಾದರಿಯಲ್ಲಿ ಆಚರಿಸಲಾಗುತ್ತದೆ. ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡದಿಂದ ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ತಂಡದ ಮಕ್ಕಳು ಒಂದು ಆಸನವನ್ನು ಮಾಡುವ ಮೂಲಕ ಯೋಧರಿಗೆ ಸಮರ್ಪಿಸಿದರು. ಈ ಮೂಲಕ ಕಾರ್ಗಿಲ್ ದಿನವನ್ನು ಮಕ್ಕಳು ನೆನಪಿಸುವಂತೆ ಸುಳ್ಯದ ಯೋಗೇನ ಚಿತ್ತಸ್ಯ ಯೋಗಾ ಯೋಗಾ ತಂಡ ಮಾಡಿತು.
ಸುಳ್ಯದ ಯೋಗಗುರು ಸಂತೋಷ್ ಮುಂಡಕಜೆ ಅವರು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ತಂಡದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಸುಳ್ಯದಲ್ಲಿ ಯೋಗ ತರಬೇತಿ ನೀಡುತ್ತಿದ್ದರು. ಲಾಕ್ಡೌನ್ ಕಾರಣದಿಂದ ಸುಳ್ಯದಲ್ಲಿ ಯೋಗ ತರಬೇತಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಆನ್ ಲೈನ್ ಮೂಲಕ ಮಕ್ಕಳಿಗೆ ಯೋಗ ಪಾಠ ಮಾಡುತ್ತಿದ್ದಾರೆ. ಸುಮಾರು 15 ರಿಂದ 20 ವಿದ್ಯಾರ್ಥಿಗಳು ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರತೀ ದಿನ ಕೂಡಾ ವಿನೂತನ ರೀತಿಯಲ್ಲಿ ಯೋಗದ ತರಬೇತಿ ನೀಡುವ ಸಂತೋಷ್ ಮುಂಡಕಜೆ ಅವರು ಕಾರ್ಗಿಲ್ ವಿಜಯ ದಿವಸದಂದು ಮಕ್ಕಳಿಗೆ ಕಾರ್ಗಿಲ್ ದಿನದ ಬಗ್ಗೆ ತಿಳಿಯುವ ಉದ್ದೇಶದಿಂದ ಕಾರ್ಗಿಲ್ ಯೋಧರಿಗಾಗಿ ಒಂದು ಆಸನವನ್ನು ಮಾಡಿ ವಿಡಿಯೋವನ್ನು ಯೋಗೇನ ಚಿತ್ತಸ್ಯ ಯೋಗಾ ಯೋಗಾ ಎಂಬ ಪೇಸ್ ಬುಕ್ ಪೇಜ್ ಗೆ ಅಪ್ಲೋಡ್ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲೂ ಯೋಗದ ಜಾಗೃತಿ ಜೊತೆಗೆ ಕಾರ್ಗಿಲ್ ದಿನವನ್ನು ನೆನಪಿಸಿದ್ದಾರೆ. ಈ ಹಿಂದೆಯೂ ಯೋಗ ಹಾಗೂ ರಾಷ್ಟ್ರದ ಬಗ್ಗೆ ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ಜಾಗೃತಿ ಹಾಗೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಸಿದ್ದರು.
ಯೋಗಾ ಯೋಗಾ ಪೇಸ್ ಬುಕ್ ಪೇಜ್
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…