ಇಂದು ಭಾರತ ಒಂದು ಸೂಕ್ಷ್ಮ ತಿರುವಿನಲ್ಲಿ ನಿಂತಿದೆ. ದೇಶದ ಮೇಲೆ ಅಂತರ-ಬಾಹ್ಯದಿಂದಲೂ ಸಂಕಟಗಳ ಮಾಲಿಕೆ ಪ್ರಾರಂಭವಾಗಿದೆ. ಇಂತಹ ಪರಿಸ್ಥಿತಿ ಸ್ವತಂತ್ರ ಭಾರತದಲ್ಲಿ ಎಂದಿಗೂ ಬಂದಿರಲಿಲ್ಲ.
ಒಂದೆಡೆ ದೇಶದಲ್ಲಿ ಕೊರೋನಾ ಪಿಡುಗು ತಾಂಡವವಾಡುತ್ತಿದೆ. ಈ ಪಿಡುಗನ್ನು ತಡೆಗಟ್ಟಲು ಭಾರತ ಸರಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕಳೆದ 4 ತಿಂಗಳಿನಿಂದ ದೇಶದಲ್ಲಿ ಲಾಕ್‌ಡೌನ್ ಇದೆ. ಎಲ್ಲ ವ್ಯವಸ್ಥೆಗಳು ಸಕ್ರಿಯವಿದ್ದರೂ ಅಪೇಕ್ಷಿತವಿರುವಂತೆ ಯಶಸ್ಸು ದೊರೆಯುತ್ತಿರುವಂತೆ ಕಾಣಿಸುತ್ತಿಲ್ಲ. ಈ ರೀತಿಯ ಆರೋಗ್ಯ ಸಮಸ್ಯೆಯು ದೇಶಾದ್ಯಂತ ಕೋಟ್ಯವಧಿ ಜನತೆಗೆ ಕೆಲಸವಿಲ್ಲದಂತೆ ಮಾಡಿರುವುದರಿಂದ ಅರ್ಥವ್ಯವಸ್ಥೆ ಹದಗೆಟ್ಟಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದ್ದು, ಅಭಿವೃದ್ಧಿಯ ವೇಗ ಸ್ಥಗಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿಯೇ ದೇಶದ ಮೇಲೆ ಬಾಹ್ಯ ಆಕ್ರಮಣಗಳು ಪ್ರಾರಂಭವಾಗಿವೆ. ಪಕ್ಕದ ರಾಷ್ಟ್ರ ಚೀನಾ ಭಾರತದ ವಿರುದ್ಧ ಎದ್ದು ನಿಂತಿದೆ. ಗಲವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ನುಸುಳಿ, ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ ಭಾರತದ 20 ಸೈನಿಕರು ಹುತಾತ್ಮರಾದರು; ಆದರೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಕೊಂದು, ಅವರಿಗೆ ತಕ್ಕ ಪಾಠ ಕಲಿಸಿದರು. ಇದರಿಂದ ಚೀನಾದ ಅಹಂಕಾರಕ್ಕೆ ಪೆಟ್ಟು ಬಿದ್ದಿತು.
ಈಗ ಭಾರತಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ. ಇದಕ್ಕಾಗಿ ಹಿಂದೂಗಳೇ ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮದ ಉತ್ಥಾನಕ್ಕಾಗಿ ಕಾರ್ಯನಿರತರಾಗಬೇಕಾಗಿದೆ. ಮುಖ್ಯವಾಗಿ ಇದೇ ಕಾರಣಕ್ಕಾಗಿಯೇ ಹಿಂದೂ ಜನಜಾಗೃತಿ ಸಮಿತಿಯು ಕಳೆದ 8 ವರ್ಷಗಳಿಂದ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಈ ಬಾರಿ ಕೊರೊನಾ ಸೋಂಕು ಹರಡಿರುವುದರಿಂದ ಜುಲೈ 30 ರಿಂದ ಪ್ರಾರಂಭವಾಗುವ ಈ ಅಧಿವೇಶನ ಆನ್‌ಲೈನ್ ಇರಲಿದೆ. ಈ ನಿಮಿತ್ತದಿಂದ ದೇಶ-ವಿದೇಶದ ಹಿಂದುತ್ವನಿಷ್ಠರು ನಿವಾಸದಲ್ಲಿದ್ದುಕೊಂಡೇ ಈ ಅಧಿವೇಶನದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲಿದ್ದಾರೆ. ಹಾಗೆಯೇ ಒಂದೇ ಸಮಯದಲ್ಲಿ ಸಾವಿರಾರು ಹಿಂದುತ್ವನಿಷ್ಠರು, ರಾಷ್ಟ್ರಾಭಿಮಾನಿಗಳು, ಧರ್ಮಾಭಿಮಾನಿಗಳು, ಜಿಜ್ಞಾಸುಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಅಧಿವೇಶನವು ಜುಲೈ 30 ರಿಂದ 2 ಆಗಸ್ಟ್ ಹಾಗೂ 6 ರಿಂದ 9 ಆಗಸ್ಟ್ ವರೆಗೆ ಜರುಗಲಿದೆ.
ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಫೇಸಬುಕ್ ಪೇಜ್ ಮತ್ತು ‘ಯು-ಟ್ಯೂಬ್ ಚಾನಲ್ ಮೇಲೆ ನೋಡಬಹುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ತಿಳಿಸಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…