Political mirror

ರಂಗೇರಲಿದೆ ನಗರ ಪಂಚಾಯತ್ ಚುನಾವಣಾ ಕಣ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಸುಳ್ಯ ನಗರ  ಪಂಚಾಯತ್ ಆಡಳಿತ ಮಂಡಳಿಗೆ ಮೇ.29ರಂದು ಚುನಾವಣೆ ನಡೆಯಲಿದ್ದು ರಾಜಕೀಯ ಕಣ ರಂಗೇರುತಿದೆ.

Advertisement
Advertisement

ಮಾ.10 ರಂದು ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ನಗರ ಪಂಚಾಯತ್ ಚುನಾವಣೆ ಮುಂದೆ ಹೋಗಿತ್ತು. ಇದೀಗ ಚುನಾವಣೆ ಘೋಷಣೆಯಾಗಿದ್ದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಸುಳ್ಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣಾ ಕಾವು ಏರಲಿದೆ. 2013 ಮಾರ್ಚ್‍ನಲ್ಲಿ ಸುಳ್ಯ ನಗರ ಪಂಚಾಯತ್ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಆರು ವರ್ಷಗಳ ಬಳಿಕ ಮತ್ತೊಮ್ಮೆ ನಗರದ ಜನತೆ ಬೂತ್‍ನೆಡೆಗೆ ತೆರಳಲಿದ್ದಾರೆ. 2013ರಲ್ಲಿ ಚುನಾವಣೆ ನಡೆದರೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆದು ಆಡಳಿತ ಮಂಡಳಿ ಅಧಿಕಾರಕ್ಕೇರಲು ಒಂದು ವರ್ಷ ವಿಳಂಬವಾದ ಕಾರಣ ಆಡಳಿತ ಅವಧಿ 2019 ಮಾರ್ಚ್‍ನಲ್ಲಿ ಕೊನೆಗೊಂಡಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆ:

ಮತ್ತೊಮ್ಮೆ ಬಿಜೆಪಿ-ಕಾಂಗ್ರೆಸ್ ಮಧ್ಯೆಯ ಜಿದ್ದಾ ಜಿದ್ದಿಗೆ ಸುಳ್ಯದಲ್ಲಿ ವೇದಿಕೆ ಸಿದ್ಧವಾಗಿದೆ. ಸತತ ಮೂರು ಬಾರಿ ನಗರ ಪಂಚಾಯತ್ ಆಡಳಿತವನ್ನು ನಡೆಸಿರುವ ಬಿಜೆಪಿ ಮತ್ತೊಮ್ಮೆ ಪಾರಮ್ಯ ಮೆರೆಯಲು ಸಿದ್ಧತೆ ಮಾಡಿದ್ದರೆ. ಮೂರು ಬಾರಿ ಕಳೆದು ಕೊಂಡ ಆಡಳಿತವನ್ನು ಮರಳಿ ಪಡೆಯಲು ಕಾಂಗ್ರೆಸ್ ತವಕಿಸುತಿದೆ. 2004ರ ಬಳಿಕ ನಗರ ಪಂಚಾಯತ್ ನಲ್ಲಿ ಬಿಜೆಪಿ ತನ್ನ ಸಂಪೂರ್ಣ ಪಾರಮ್ಯವನ್ನು ಮುಂದುವರಿಸಿದೆ. 2004, 2008, 2013ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಹಿಡಿದಿತ್ತು. 2013ರಲ್ಲಿ 18 ವಾರ್ಡ್‍ಗಳಲ್ಲಿ 12 ಬಿಜೆಪಿ, ಐದು ಕಾಂಗ್ರೆಸ್ ಮತ್ತು ಒಂದು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದರು. 2008ರ ಚುನಾವಣೆಯಲ್ಲಿ ಒಂಭತ್ತು ಬಿಜೆಪಿ, ಆರು ಕಾಂಗ್ರೆಸ್, ಒಂದು ಜೆಡಿಎಸ್ ಮತ್ತು ಎರಡು ಪಕ್ಷೇತರರು ಜಯ ಗಳಿಸಿದ್ದರು. ಬಳಿಕ ಪಕ್ಷೇತರರು ಬಿಜೆಪಿ ಸೇರಿದ ಕಾರಣ ಬಿಜೆಪಿ ಬಲ 11ಕ್ಕೆ ಏರಿತ್ತು.

Advertisement

ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವ ನಿಲುವು ತಳೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ. ಕಳೆದ ಬಾರಿ ನಗರ ಪಂಚಾಯತ್ ನಲ್ಲಿ ಖಾತೆ ತೆರೆದದ್ದ ಎಸ್‍ಡಿಪಿಐ ಈ ಬಾರಿಯೂ ಕೆಲವು ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಸಲಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ತಣ್ಣಗಾಗಿದ್ದ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲಿದೆ.

ವಾರ್ಡ್‍ಗಳ ಸಂಖ್ಯೆ ಇಪ್ಪತ್ತಕ್ಕೆ:
18 ವಾರ್ಡ್‍ಗಳಿದ್ದ ನಗರ ಪಂಚಾಯತ್ ನಲ್ಲಿ  ಎರಡು ವಾರ್ಡ್‍ಗಳು ಏರಿಕೆಯಾಗಿದ್ದು ಒಟ್ಟು ಇಪ್ಪತ್ತು ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಆರು ತಿಂಗಳ ಹಿಂದೆಯೇ ವಾರ್ಡ್‍ಗಳ ಮರು ವಿಂಗಡಣೆ ಮೀಸಲಾತಿ ಪ್ರಕಟಗೊಂಡಿತ್ತು. ಚುನಾವಣೆಗಾಗಿ 20 ಬೂತ್‍ಗಳನ್ನು ಸಿದ್ಧಪಡಿಸಲಾಗುವುದು. ನಗರದಲ್ಲಿ ಒಟ್ಟು 2011ರ ಜನಗಣತಿಯ ಪ್ರಕಾರ 19,958 ಜನಸಂಖ್ಯೆಯಿದ್ದು 6,854 ಪುರುಷರು ಮತ್ತು 7026 ಮಹಿಳೆಯರು ಸೇರಿ 13,880 ಮತದಾರರಿದ್ದಾರೆ.

ಅಭಿವೃದ್ಧಿ ಅಜೆಂಡಾ:
ನಗರ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪ್ರತಿಷ್ಠೆಯ ಜೊತೆಗೆ ನಗರದಲ್ಲಿನ ಅಭಿವೃದ್ಧಿ ಕಾರ್ಯಗಳು ಕೂಡ ಚರ್ಚಿತ ವಿಷಯವಾಗಲಿದೆ. ನಗರದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನವಾಗದ ಒಳ ಚರಂಡಿ ಯೋಜನೆ, ನಗರದ ಚರಂಡಿಗಳು, ಕಸ ವಿಲೇವಾರಿಗೆ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಆಶ್ರಯ ವಸತಿಗೆ ಸ್ಥಳದ ಕೊರತೆ ಈ ವಿಷಯಗಳು ಕಳೆದ ಎರಡು ಚುನಾವಣೆಯಲಲಿಯೂ ಚರ್ಚಾ ವಿಷಯವಾಗಿದ್ದವು. ಆದರೆ ಈ ವಿಷಯಗಳಿಗೆ ಪರಿಪೂರ್ಣ ವಿರಾಮ ಹಾಕಲು ಇನ್ನೂ ಸಾಧ್ಯವಾಗಿಲ್ಲ. ಈ ಸಮಸ್ಯೆಗಳು ನಗರದಲ್ಲಿ ಇನ್ನೂ ಜೀವಂತವಾಗಿಯೇ ಇದೆ. ಆದುದರಿಂದ ಈ ಚುನಾವಣೆಯಲಲ್ಲಿಯೂ ಮತ್ತೊಮ್ಮೆ ಈ ವಿಚಾರಗಳು ಚರ್ಚೆಗೆ ಗ್ರಾಸವಾಗಲಿದೆ. ಈ ವಿಷಯಗಳು ಚುನಾವಣೆಯಲ್ಲಿ ಜನರ ಮುಂದೆ ತರುವುದಾಗಿ ಈಗಾಗಲೇ ಕೆಲವು ಮುಖಂಡರು ಹೇಳಿಕೊಂಡಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

4 hours ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

4 hours ago

14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ

ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…

5 hours ago

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ – ಉಪಲೋಕಾಯುಕ್ತ ಬಿ. ವೀರಪ್ಪ

ಭ್ರಷ್ಟಾಚಾರ  ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ  ಉಪಲೋಕಾಯುಕ್ತ ಬಿ.…

5 hours ago

ಇದೆಲ್ಲಾ ಹೇಗಾಗ್ತದೆ? ಇದು ನಮ್ಗೆಲ್ಲಿ ಗೊತ್ತಾಗ್ತದೆ!?

ಪಂಚಾಯತು ವಿಧಿಸುವ ವಿವಿಧ ಕರಗಳ ಬಗ್ಗೆ ನಿಮಗೆ ಅರಿವಿದೆಯೆ? ನಿಮ್ಮ ಪಂಚಾಯತುಗಳಿಗೆ ಸರಕಾರದಿಂದ…

5 hours ago