ಸುಳ್ಯ: ಎಲಿಮಲೆಯ ರಂಜನಿ ಸಂಗೀತ ಸಭಾದ ದಶಮಾನೋತ್ಸವ ಸಂಗೀತ ಸಂಭ್ರಮ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಪದ್ಮಶ್ರೀ ಕಲೈಮಾಮಣಿ ಡಾ.ಕದ್ರಿ ಗೋಪಾಲನಾಥ್ ಕಲಾವೇದಿಕೆಯಲ್ಲಿ ನಡೆದ ಸಮಾರಂಭವನ್ನು ಸುಳ್ಯದ ಆಯಶಿಲ್ಪಾದ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ವೈದಿಕ ವಿದ್ವಾಂಸ ಕರುವಜೆ ಕೇಶವ ಜೋಯಿಸ, ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೇಶವ ಹೊಸೊಳಿಕೆ, ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಸಿಎ ಗಣೇಶ್ ಭಟ್ ಭಾಗವಹಿಸಿದ್ದರು.
ರಂಜನಿ ಸಂಗೀತ ಸಭಾದ ನಿರ್ದೇಶಕರಾದ ಸತ್ಯನಾರಾಯಣ ಹೊನ್ನಡಿ, ರೇಖಾ ರೇವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ನಡೆದ ವಿದ್ವಾನ್ ಶೆಂಗೊಟ್ಟೈ ಹರಿಹರ ಸುಬ್ರಹ್ಮಣ್ಯ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತಾಸಕ್ತರ ಮನಗೆದ್ದಿತ್ತು. ವಯಲಿನ್‍ನಲ್ಲಿ ತಿರುವಿಲ್ಲಾ ವಿಜು ಎಸ್.ಆನಂದ್, ಮೃದಂಗದಲ್ಲಿ ಪಾಲಕ್ಕಾಡ್ ಮಹೇಶ್‍ಕುಮಾರ್, ಘಟಂನಲ್ಲಿ ವಾಝಪಳ್ಳಿ ಆರ್.ಕೃಷ್ಣಕುಮಾರ್ ಸಹಕರಿಸಿದ್ದರು.
ಕ್ಯಾನ್ಸರ್ ಮುಕ್ತ ಜಗತ್ತನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಬೆಂಗಳೂರು ಫ್ರೆಶ್ ಥಾನ್ ಓಟ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರು, ಬೇಸಿಗೆ ಸಮಸ್ಯೆ ಹಾಗೂ ಮಳೆಗಾಲವನ್ನು ಎದುರಿಸಲು…
ರಾಜ್ಯದಲ್ಲಿ ಜನರ ಅನುಕೂಲಕ್ಕಾಗಿ ಎರಡು ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ ಸಚಿವ…
ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ…
ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ…
ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…