Advertisement
Categories: Uncategorized

ರಕ್ಷಾಬಂಧನ ಅಂದರೆ ಸಹೋದರತೆಯ ದಿನ…..

Share

`ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡ ದಿನ’

Advertisement
Advertisement
Advertisement

ಪೌರಾಣಕ, ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿದ ‘ರಕ್ಷಾಬಂಧನ’

Advertisement

ಸಹೋದರಿಯರು ಸಹೋದರನ ರಕ್ಷಣೆಗಾಗಿ ದೇವರಲ್ಲಿ ಪ್ರಾರ್ಥಿಸಿ ಸಹೋದರ ಹಾಗೂ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಆಚರಿಸುವ ಸಂಭ್ರಮದ ಹಬ್ಬವೆಂದು ರಕ್ಷಾಬಂಧನವನ್ನು ಎಲ್ಲೆಡೆಯೂ ಆಚರಿಸುತ್ತೇವೆ. ‘ರಕ್ಷಾಬಂಧನವನ್ನು ಆಚರಣೆ ಮಾಡಲು ಹಲವಾರು ಬಗೆಯ ಕಾರಣಗಳನ್ನು ನೋಡಬಹುದು.

 

Advertisement

ಪೌರಾಣಕ ಹಿನ್ನೆಲೆ :
`ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.’

Advertisement

ಭವಿಷ್ಯಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು.

ಭಾವನಿಕ ಮಹತ್ವ :
ರಾಖಿಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟಲಾಗುತ್ತದೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು/ಪುರುಷನು ಯಾರಾದರೊಬ್ಬ ತರುಣ ಯಿಂದ/ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವ ದ್ದಾಗಿದೆ; ಇದರಿಂದ ತರುಣ ಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.

Advertisement

ರಾಖಿಯನ್ನು ಕಟ್ಟುವ ನಿಜವಾದ ಪದ್ಧತಿ:
ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಸೆರಗಿನಲ್ಲಿ ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ.

ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ.

Advertisement

ರಕ್ಷಾಬಂಧನದ ದಿನ ಮಾಡಬೇಕಾದ ಪ್ರಾರ್ಥನೆ :
ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ `ರಾಷ್ಟç ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

ರಾಖಿಯು ಹೇಗಿರಬೇಕು ?:
ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಇಬ್ಬರಿಗೂ ಲಾಭದಾಯಕವಾಗಿವೆ. ಆದುದರಿಂದ ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಈಶ್ವರೀ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವುಳ್ಳ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮ) ಧರಿಸಿದವರ ಜೀವದ ಮೇಲೆ ಪರಿಣಾಮ ಬೀರುತ್ತವೆ.

Advertisement

ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುವ ಹಿಂದಿನ ಉದ್ದೇಶ:
ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.

ತುಪ್ಪದ ನಿಲಾಂಜನದಿಂದ ಆರತಿ ಬೆಳಗುವುದು:
ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತ ರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.

Advertisement

ಆರತಿಯ ತಟ್ಟೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಿರುವ ಕಾರಣ:
ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ ತಮ ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.

ಸಹೋದರನಿಗೆ ರಾಖಿಯನ್ನು ಕಟ್ಟುವಾಗ ಸಹೋದರಿಯು ದ್ರೌಪದಿಯ ಭಾವವಿಟ್ಟುಕೊಂಡಿರಬೇಕು
ಶ್ರೀ ಕೃಷ್ಣನ ಬೆರಳಿನ ರಕ್ತಸ್ರಾವವನ್ನು ತಡೆಯಲು ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದಳು. ಸಹೋದರಿಯು ತನ್ನ ಸಹೋದರನಿಗಾಗುವ ಕಷ್ಟವನ್ನು ಸಹಿಸುವುದಿಲ್ಲ. ಅವನ ಮೇಲೆ ಬಂದಿರುವ ಸಂಕಟವನ್ನು ದೂರ ಮಾಡಲು ಅವಳು ಎಲ್ಲವನ್ನು ಮಾಡಲು ಸಿದ್ಧವಾಗುತ್ತಾಳೆ. ರಾಖಿ ಹುಣ್ಣಿಮೆಯಂದು ಪ್ರತಿಯೊಬ್ಬ ಸಹೋದರಿಯು ರಾಖಿಯನ್ನು ಕಟ್ಟುವಾಗ ಇದೇ ಭಾವವನ್ನು ಇಟ್ಟುಕೊಳ್ಳಬೇಕು.

Advertisement

ರಕ್ಷಾಬಂಧನದಂದು ಸಹೋದರಿಯು ಯಾವುದೇ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ರಾಖಿ ಕಟ್ಟುವುದರ ಮಹತ್ವ:
ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಯಾವುದೇ ವಸ್ತುವನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡರೆ, ಆ ದಿನ ಪ್ರಾಪ್ತವಾಗುವ ಆಧ್ಯಾತ್ಮಿಕ ಲಾಭದಿಂದ ವಂಚಿತಳಾಗುತ್ತಾಳೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ಕಡಿಮೆ ಮಾಡಲು ಈ ದಿನವು ಮಹತ್ವದ್ದಾಗಿದೆ.

ಇತರ ದಿನಗಳಲ್ಲಿ ಪ್ರತಿಯೊಬ್ಬರೂ ಮಾಡಬೇಕಾದ ಪ್ರಯತ್ನಗಳು:
ಈ ದಿನವನ್ನು ನೆನಪಿಟ್ಟುಕೊಂಡು ಸಹೋದರ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸಬೇಕು. ಸಮಾಜದಲ್ಲಿರುವ ಇತರರೊಂದಿಗಿರುವ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸಬೇಕು.ಈಶ್ವರನಲ್ಲಿರುವ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಬೇಕು.

Advertisement

ದೇಶದ್ರೊಹಿ ಚೈನಾ ರಾಖಿಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸದಿರೋಣ:
ಇತ್ತಿಚೆಗೆ ‘ಮೇಡ್ ಇನ್ ಚೈನಾ’ ಅಥವಾ ‘ಮೇಡ್ ಇನ್ ಪಿ.ಆರ್.ಸಿ’ ( ಪೀಪಲ್ಸ್ ರೆಪಬ್ಲಿಕ್ ಆಫ್ ಚೈನಾ) ರಕ್ಷೆಗಳು ಕೂಡ ಮಾರುಕಟ್ಟೆಗೆ ಕಾಲಿಟ್ಟಿರುವುದು ಗಮನಕ್ಕೆ ಬಂದಿರುವುದರಿಂದ ಯಾವುದೇ ಕಾರಣಕ್ಕೂ ದೇಶಪ್ರೆಮಿಗಳಾದ ನಾವು ಶತ್ರುರಾಷ್ಟ್ರ ಚಿನಾದ ರಾಖಿಯನ್ನು ಬಹಿಷ್ಕಾರ ಮಾಡೋಣ.

( ಆಧಾರ: ಸನಾತನದ ಜಾಲತಾಣ )

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯ ಮೇಲೆ ಕ್ಯಾನ್ಸರ್‌ ಅಪವಾದ | ಕ್ಲಿನಿಕಲ್‌ ಟ್ರಯಲ್‌ ಹೇಗೆ ಮಾಡುವುದು..? | ಪರಿಶುದ್ಧವಾದ ಅಡಿಕೆ ಯಾವುದು..?

ಅಡಿಕೆಯ ಮೇಲೆ ಕ್ಯಾನ್ಸರ್‌ಕಾರಕ ಎನ್ನುವ ಅಪವಾದ ನಿರಂತರವಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ…

49 mins ago

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ…

1 hour ago

ಖಾದಿಯನ್ನು ಬೆಂಬಲಿಸಿ-ಉಳಿಸಿ | ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಕ್ಕೆ ಚಾಲನೆ

ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು…

2 hours ago

ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು  ಅಧಿಕಾರಿಗಳಿಗೆ ಸೂಚಿಸಲಾಗಿದೆ | ಸಚಿವ ಕೆ.ಎಚ್. ಮುನಿಯಪ್ಪ

ಎಲ್ಲಾ ಪಡಿತರ ಕಾರ್ಡ್‌ಗಳನ್ನು ಯಥಾವತ್ತಾಗಿ ಮುಂದುವರಿಸಲು ಮುಖ್ಯಮಂತ್ರಿಯವರ ಆದೇಶದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು…

2 hours ago

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |

ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್‌ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…

13 hours ago

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |

ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…

1 day ago