ಬೆಳ್ಳಾರೆ : ದಕ್ಷಿಣ ಭಾರತದ ಪ್ರಸಿದ್ಧ ಸಮನ್ವಯ ವಿದ್ಯಾಕೇಂದ್ರವಾದ ರಹ್ಮಾನಿಯಾ ಅರೇಬಿಕ್ ಕಾಲೇಜು ಕಡಮೇರಿ ಇದರ ಹೊಸ ಅಧ್ಯಯನ ವರ್ಷ ದ ಪ್ರವೇಶಾತಿ ಪರೀಕ್ಷೆ ಯು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು .
ಎಸ್ ಎಸ್ ಎಲ್ ಸಿ ನಂತರ ಎಂಟು ವರ್ಷದ ಕೋರ್ಸ್ ಆಗಿರುವ, ಲೌಕಿಕ ಮತ್ತು ಧಾರ್ಮಿಕ ವಿದ್ಯೆಗಳನ್ನು ಒಳಗೊಂಡ ಸಮನ್ವಯ ವಿದ್ಯಾಭ್ಯಾಸ ವನ್ನು ನೀಡುತ್ತಿದ್ದು , 8 ವರ್ಷಗಳ ಬಳಿಕ ಎಂ ಎ ಬಿರುದಿನೊಂದಿಗೆ ರಹ್ಮಾನಿಯಾ ಬಿರುದನ್ನು ನೀಡಲಾಗುತ್ತಿದೆ .
ಇದರ ಪ್ರವೇಶಾತಿ ಪರೀಕ್ಷೆಯು ಈ ವರ್ಷ ಕರ್ನಾಟಕ ವಿದ್ಯಾರ್ಥಿ ಗಳಿಗೆ ದ ಕ ಜಿಲ್ಲೆ ಯಲ್ಲೂ ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡಲಾಗಿದೆ. ಪರೀಕ್ಷಾ ಸೂಪರ್ ವೈಸರ್ ಗಳಾಗಿ ಹಾಶಿಂ ರಹ್ಮಾನಿ ಸಾಲ್ಮರ ಮತ್ತು ಅಬ್ದುಲ್ ರಶೀದ್ ಮೌಲವಿ ಅಮ್ಚಿನಡ್ಕ ಅವರು ನೇತೃತ್ವ ವಹಿಸಿದ್ದರು .
ಈ ಸಂದರ್ಭದಲ್ಲಿ ಬೆಳ್ಳಾರೆ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ,ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ , ಅಮ್ಚಿನಡ್ಕ ಮುದರ್ರಿಸ್ ಅಶ್ರಫ್ ರಹ್ಮಾನಿ ,ಪರ್ಪುಂಜ ಮುದರ್ರಿಸ್ ಬದ್ರುದ್ದೀನ್ ರಹ್ಮಾನಿ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…