ಸುಳ್ಯ : ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಲಗೋರಿ ಪಂದ್ಯಾಟದಲ್ಲಿ ಮಂಗಳೂರಿನ ಹನುಮಾನ್ ಲಗೋರಿಯನ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರಿನ ಹನುಮಾನ್ ಲಗೋರಿಯನ್ ತಂಡ ಕೊಡಗು ಜಿಲ್ಲೆಯ ಯುವ ಶಕ್ತಿ ಪೆರಾಜೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
12 ತಂಡಗಳು ಭಾಗವಹಿಸಿದ್ದ ಲಗೋರಿ ಲೀಗ್ ಪಂದ್ಯಾಟದಲ್ಲಿ `ಪೂಲ್ ಎ’ ಯಿಂದ ಯುವ ಶಕ್ತಿ ಪೆರಾಜೆ ಮತ್ತು ಹನುಮಾನ್ ಲಗೋರಿಯನ್ ಮಂಗಳೂರು ಹಾಗು `ಪೂಲ್ ಬಿ’ ಯಿಂದ ಪಂಚಶ್ರೀ ಪಂಜ ಮತ್ತು ಪ್ರಗತಿ ಫ್ರೆಂಡ್ಸ್ ಕಾಣಿಯೂರು ತಂಡಗಳು ಸೆಮಿಫೈನಲ್ ಪ್ರವೇಶಿಸಿತು. ಯುವ ಶಕ್ತಿ ಪೆರಾಜೆ ತಂಡ ಪ್ರಗತಿ ಫ್ರೆಂಡ್ಸ್ ತಂಡವನ್ನು ಮತ್ತು ಮಂಗಳೂರು ಹನುಮಾನ್ ಲಗೋರಿಯನ್ ತಂಡ ಪಂಚಶ್ರೀ ಪಂಜ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಪಂಚಶ್ರೀ ಪಂಜ ತೃತೀಯ ಸ್ಥಾನ ಮತ್ತು ಪ್ರಗತಿ ಫ್ರೆಂಡ್ಸ್ ಕಾಣಿಯೂರು ಚತುರ್ಥ ಸ್ಥಾನ ಪಡೆದುಕೊಂಡಿತು. ಬೆಸ್ಟ್ ಶೂಟರ್ ಆಗಿ ರಕ್ಷಿತ್ ಪೆರಾಜೆ, ಬೆಸ್ಟ್ ಫೀಲ್ಡರ್ ಆಗಿ ಅಜಿತ್ ಮಂಗಳೂರು, ಬೆಸ್ಟ್ ಆಲ್‍ರೌಂಡರ್ ಆಗಿ ಪುನಿತ್ ಮಂಗಳೂರು ಆಯ್ಕೆಯಾದರು.
ಸಮಾರೋಪ ಸಮಾರಂಭ:
ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಲಗೋರಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ
ಚನಿಯ ಕಲ್ತಡ್ಕ ವಿಜೇತರಿಗೆ ಬಹುಮಾನ ವಿತರಿಸಿದರು. ಲಗೋರಿ ಪಂದ್ಯಾಟ ಸಂಘಟನಾ ಸಮಿತಿಯ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್, ವರ್ತಕರ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುಸ್ತಫಾ ಅತಿಥಿಗಳಾಗಿದ್ದರು.
ಲಗೋರಿ ಸಂಘಟನಾ ಸಮಿತಿಯ ಸಂಯೋಜಕ ದಿನೇಶ್ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಕೆ.ಮಾಧವ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಾಗು ಪಂದ್ಯಾಟದ ಪ್ರಧಾನ ಸಂಯೋಜಕ ದೊಡ್ಡಣ್ಣ ಬರೆಮೇಲು ವಂದಿಸಿದರು. ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು. ಲಗೋರಿ ನಿಯಮಗಳ ಕುರಿತು ಪುಸ್ತಕ ರಚಿಸಿದ ಮತ್ತು ಪಂದ್ಯಾಟದ ರುವಾರಿ ದೊಡ್ಡಣ್ಣ ಬರೆಮೇಲು ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಮಟ್ಟದ ಲಗೋರಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾದ ಮಂಗಳೂರು ಹನುಮಾನ್ ಲಗೋರಿಯನ್ ತಂಡ
ರಾಜ್ಯ ಮಟ್ಟದ ಲಗೋರಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನಿಯಾದ ಯುವಶಕ್ತಿ ಪೆರಾಜೆ ತಂಡ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…