ಮಡಿಕೇರಿ:ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181 ನಿಂದ “ರೀ ಬಿಲ್ಡ್ ಕೊಡಗು” ಯೋಜನೆಯಡಿ ನಿರ್ಮಿಸಲಾದ 25 ಮನೆಗಳನ್ನು ಜಲಪ್ರಳಯ ಸಂತ್ರಸ್ಥರಿಗೆ ಹಸ್ತಾಂತರಿಸಲಾಯಿತು. 3 ತಿಂಗಳಲ್ಲಿ 25 ಮನೆಗಳನ್ನು ತಲಾ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು ಸುಮಾರು 1.25 ಕೋಟಿ ರೂಪಾಯಿ ಖರ್ಚಾಗಿದೆ.
ಮನೆಗಳನ್ನು ಹಸ್ತಾಂತರಿಸಿದ ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ, ” ಭಾರತದಲ್ಲಿ ಹಲವಾರು ಮಂದಿಗೆ ಇನ್ನೂ ಸೂರು ದೊರಕಿಲ್ಲ. ಭಾರತದ ಅನೇಕ ನಗರಗಳ ರಸ್ತೆ ಬದಿಯಲ್ಲಿಯೇ ಜನ ರಾತ್ರಿ ಆಶ್ರಯ ಪಡೆಯುತ್ತಿರುವ ದೃಶ್ಯ ಮರೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೂರಿಲ್ಲದವರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ರೋಟರಿ ಮುಂದಾಗಬೇಕೆಂದು ಹೇಳಿದರು.
ರೋಟರಿ ಜಿಲ್ಲಾ ಗವರ್ನ ರ್ ಪಿ.ರೋಹಿನಾಥ್ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ಸಂತ್ರಸ್ಥರಿಗೆ ಅಗತ್ಯವಿದ್ದ ಮನೆ ನಿರ್ಮಾಣಕ್ಕೆ ರೋಟರಿ ಜಿಲ್ಲೆ 3181 ಮುಂದಾಯಿತು. ಕೇವಲ 3 ತಿಂಗಳಲ್ಲಿ 25 ಮನೆಗಳನ್ನು ತಲಾ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂತ್ರಸ್ಥರಿಗೆ ಯೋಗ್ಯ ಮನೆಗಳನ್ನು ನಿಗಥಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ ಎಂದರು.
ರೋಟರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ಧೇಶಕ ರಾಜನ್ ಸ್ಯಾಮುವೆಲ್ ಮಾತನಾಡಿ, ಭಾರತದಲ್ಲಿ ಶೇ. 40 ರಷ್ಟು ಜನರು ವಿಕೋಪ ವಿಕೋಪ ಸಂಭವಿಸಿದಾಗ ಸಂತ್ರಸ್ಥರಾಗುತ್ತಾರೆ. ಕೊಡಗಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು 25 ಮನೆಗಳನ್ನು ತಲಾ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು 10 ಕುಟುಂಬಗಳಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ರೋಟರಿಯ ರೀಬಿಲ್ಡ್ ಕೊಡಗು ಯೋಜನೆಯ ಅಧ್ಯಕ್ಷ ಡಾ.ರವಿಅಪ್ಪಾಜಿ ಮಾತನಾಡಿ, 1 ಬೆಡ್ ರೂಮ್, ಅಡುಗೆ ಕೋಣೆ, 1 ಹಾಲ್, ಶೌಚಾಲಯವನ್ನು ಹೊಂದಿರುವ 320 ಚದರ ಅಡಿ ವಿಸ್ತೀರ್ಣದ ತಲಾ 5 ಲಕ್ಷ ರೂಪಾಯಿ ವೆಚ್ಚವಾಗಿರುವ ಮನೆಗಳಿಗೆ ಮಾಚ್9 28 ರಿಂದ ಕಾಮಗಾರಿ ಪ್ರಾರಂಭಿಸಲಾಗಿದ್ದು ಕೇವಲ 3 ತಿಂಗಳಲ್ಲಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ಮಳೆಗಾಲಕ್ಕೂ ಮುನ್ನ ನೀಡಿದ ತೃಪ್ತಿಯಿದೆ ಎಂದರು. ಈವರೆಗೂ 1.26 ಕೋಟಿ ರು. ದೇಶವಿದೇಶಗಳಿಂದ ರೀಬಿಲ್ಡ್ ಕೊಡಗು ಯೋಜನೆಯ ಮನೆ ನಿರ್ಮಾಣಕ್ಕಾಗಿ ಲಭಿಸಿದೆ ಎಂದರು.
ರೋಟರಿ ಮಾಜಿ ಗವರ್ನರ್ ಕೃಷ್ಣ ಶೆಟ್ಟಿ , ರೋಟರಿ ಜಿಲ್ಲೆ 3182 ನ ಗವರ್ನರ್ ಅಭಿನಂದನ್ ಶೆಟ್ಟಿ , ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿದರು.
ರೋಟರಿಯು ನೀಡಿದ್ದ ಭರವಸೆಯಂತೆ 3 ತಿಂಗಳಲ್ಲಿ ಸಂತ್ರಸ್ಥರಿಗೆ ತಮ್ಮೂರಿನಲ್ಲಿ ಮನೆ ನಿಮಿ9ಸಿಕೊಟ್ಟಿದೆ ಎಂದು ಅಭಿನಂದಿಸಿದರು.
ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಗಳಾದ ಡಾ.ನಾಗಾರ್ಜುನ್, ದೇವದಾಸರೈ, ಮಾತಂಡ ಸುರೇಶ್ ಚಂಗಪ್ಪ, ಆರ್.ಕೃಷ್ಣ, ನಾಗೇಂದ್ರಪ್ರಸಾದ್, ಮುಂದಿನ ಸಾಲಿನ ರೋಟರಿ ಗವರ್ನರ್ ಜ್ಯೊಸೆಫ್ ಮ್ಯಾಥ್ಯು, ನಿಯೋಜಿತ ಗವರ್ನರ್ ರಂಗನಾಥ ಭಟ್ ಹಾಜರಿದ್ದರು.
ಪ್ರೇಮ ಸಂಬಂಧವು ಭಾವನಾತ್ಮಕ ಸಾಮರಸ್ಯ, ಪರಸ್ಪರ ಗೌರವ ಮತ್ತು ವಿಶ್ವಾಸದ ಮೇಲೆ ನಿಂತಿದೆ.…
ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…
ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…