ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಲಘು ಉದ್ಯೋಗ ಭಾರತಿ ಹಾಗೂ ಕ್ಯಾಂಪ್ಕೋ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನ.30 ಹಾಗೂ ಡಿ.1ರಂದು ನಡೆದ ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೃಷಿ ಪೂರಕ ಆವಿಷ್ಕಾರಗಳ ಮೇಳದಲ್ಲಿ ಸುಮಾರು 350 ಮಾದರಿಗಳು ಗಮನಸೆಳೆದರೆ ಅವುಗಳಲ್ಲಿ ಲಘು ಉದ್ಯೋಗ ಭಾರತಿಯಿಂದ ಆಯ್ದ ಮೂವತ್ತನ್ನು ಒಂದು ವರ್ಷದೊಳಗೆ ಅಭಿವೃದ್ಧಿಪಡಿಸುವ ಮಾದರಿಗಳ ಪಟ್ಟಿ ಇಲ್ಲಿದೆ.
ಗಾಯತ್ರಿ ಕೆ. ಭಟ್ ಬಡೆಕ್ಕಿಲ ಇವರ ಬೆಳೆ ಸಂರಕ್ಷಣಾ ಮಾದರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅನಘ ವಿಶ್ರಾಂತ ಇವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಮೃತ ಹಾಗೂ ಅನನ್ಯ ಇವರ ಪೋರ್ಟೆಬಲ್ ಟ್ರಾಲಿ ಮಾದರಿಯು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಜಯಂತ ಹಾಗೂ ರಂಗರಾಜು ಇವರ ಕಳೆ ತೆಗೆಯುವ ಯಂತ್ರ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮಿಥುನ್ ಹಾಗೂ ಕ್ಷಿತೀಶ್ ಇವರ ಸ್ಮಾರ್ಟ್ ಫಾರ್ಮಿಂಗ್ ಎಂಬ ಮಾದರಿಯು, ದೇವದತ್ತ ಭಟ್ ಧನುಷ್ ಘಾಟೆ ಇವರ ಕೀಟನಾಶಕ ಮಾದರಿ, ವಿಖಿಲ್ ಕೆ. ಹಾಗೂ ರವಿಶಂಕರ ಇವರ ಅಡಿಕೆ ಮರದ ಔಷಧಿ ಸಿಂಪಡಣೆ ಯಂತ್ರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ಪಿ. ಹಾಗೂ ಜಾನ್ವಿ ಶೆಟ್ಟಿ ಅವರ ಸೌರಶಕ್ತಿ ಆಧಾರಿತ ನೀರಾವರಿ ಮಾದರಿ, ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ವಿಘ್ನೇಶ್ ಹಾಗೂ ಚರಿತ್ ಇವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಶಾಲೆಯ ಹೃತಿಕ್ ಹಾಗೂ ರಿಹಾನ್ ಇವರ ಚಾಲಕ ರಹಿತ ಉಳುಮೆ ಯಂತ್ರ ಆಯ್ಕೆ ಮಾಡಲಾಗಿದೆ.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಧೂರ ಪಿ. ಶೆಟ್ಟಿ ಇವರ ಪರಿಸರ ಸ್ನೇಹಿ ಉಪಕರಣಗಳು, ಚರಣ್ ಇವರ ಅಟೋ ಆರ್ಮ್, ವೈಭವ ಹಾಗೂ ಶ್ರೀಯಸ್ ಅವರ ಕಡಿಮೆ ಖರ್ಚಿನ ಹೈಡ್ರೋ ಫೋನಿಕ್ಸ್, ಎಸ್.ಡಿ.ಎಂ. ಸಿಬಿಎಸ್ಸಿ ಶಾಲೆ ಶರಧಿ ಬಿ.ಎಸ್. ಹಾಗೂ ಲಕ್ಷ್ಮಿ ಇವರ ತಂಬಾಕು ಆಧಾರಿತ ಕೀಟನಾಶಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೇಕ್ಷಣ್ ಹಾಗೂ ತಮನ್ ಇವರ ಅಡಿಕೆ ಸಂರಕ್ಷಣಾ ಮಾದರಿ, ಸೈಂಟ್ ಫಿಲೋಮಿನಾ ಪ್ರೌಢ ಶಾಲೆಯ ಆಶ್ಮೀ ಅವರ ಸ್ನೇಕ್ ಗಾರ್ಡ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸನ್ಮಿತ್ ಹಾಗೂ ಪ್ರತೀಕ್ ಇವರ ಬಯೋಮ್ಯಾಟ್, ನೇಹಾ ಭಟ್ ಹಾಗೂ ಆಶ್ರಯ ಭಟ್ ಇವರ ಪರಿಸರ ಸ್ನೇಹಿ ಕೀಟನಾಶಕ ಸಿಂಪಡಣೆಯ ಯಂತ್ರ, ರಾಕೇಶ್ ಕೃಷ್ಣ ಅವರ ಬೀಜ ಬಿತ್ತುವ ಯಂತ್ರ, ಕೃಷ್ಣ ಪ್ರಸಾದ್ ಇವರ ಅರೇಕಾ ಸ್ಪ್ರೇಯರ್, ನರೇಂದ್ರ ಪದವಿ ಪೂರ್ವ ಕಾಲೇಜಿನ ಹೃದಯ್ ಇವರ ಪ್ರಾಣಿಗಳ ದೇಹದ ಕೀಟಗಳನ್ನು ತಡೆಯುವ ಮಾದರಿ, ಸೈಂಟ್ ಫಿಲೋಮಿನ ಪ್ರೌಢ ಶಾಲೆಯ ಸುಹಾನ್ ಬೈಲಾಡಿ ಇವರ ರೋಬೋ ಆರ್ಮ್ ಎಂಬ ಮಾದರಿ, ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಸ್ ಹಾಗೂ ಪ್ರಖ್ಯಾತ್ ತಂಡದ ಬಹೂಪಯೋಗಿ ನೀರಾವರಿ ಮಾದರಿ, ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಜ್ವಲ್ ಹಾಗೂ ಅಭಿಷೇಕ್ ರೂಪಿಸಿದ ಅಡಿಕೆ ಸಂರಕ್ಷಕ ಮಾದರಿಗಳನ್ನು ಆಯ್ಕೆ ಮಾಡಲಾಗಿದೆ.
ದನ ಎತ್ತುವ ಯಂತ್ರ: ಈ ಮೇಳದಲ್ಲಿ ಹೈನುಗಾರರಿಗೆ ಸಹಕಾರಿಯಾಗುವಂತಹ ಯಂತ್ರವನ್ನು ಪುತ್ತೂರಿನ ರಮೇಶ್ ಅಡ್ಯಾಲು ಇವರ ದನ ಎತ್ತುವ ಯಂತ್ರವನ್ನು ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯು ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿರುತ್ತದೆ. ಇದರಿಂದ ಕೃಷಿಕರಿಗೆ ಉಪಕಾರಿಯಾಗಲಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…