Advertisement
MIRROR FOCUS

ಲಿಚಿ ಒಂದು ರುಚಿಕರ ಹಣ್ಣು : “ಲಿಚಿ” ಹಣ್ಣಿನ ಮೇಲೆ ಕೋಪವೇಕೆ ?

Share

ಲಿಚಿ ಹಣ್ಣು ಈಚೆಗೆ ಭಾರೀ ಸುದ್ದಿ ಮಾಡಿತು. ಬಿಹಾರದ ಮುಜಫ್ಫರಪುರದಲ್ಲಿ 3 ವಾರದಲ್ಲಿ ಸುಮಾರು 150 ಮಕ್ಕಳ ಸಾವಿಗೆ ಲಿಚಿ ಹಣ್ಣು ತಿಂದಿರುವುದು ಕಾರಣ ಇರಬಹುದೆಂದು ಎಂಬ ಸಂದೇಹವೊಂದು ಇಡೀ ಹಣ್ಣಿನ ಮೇಲೆ ಕೋಪವಾಯಿತು. ಲಿಚಿ ಹಣ್ಣೇ ಆಪತ್ತು ಎಂಬ ಚಿತ್ರಣ ಬಂತು. ಆ ಬಳಿಕ ವೈದ್ಯರೇ ಹೇಳಿದರೂ ಲಿಚಿ ಹಣ್ಣು ಕಾರಣವಲ್ಲ. ಆದರೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಒಮ್ಮಲೇ ಈ ಹಣ್ಣು ತಿಂದರೆ ಸಮಸ್ಯೆಯಾಗಬಹುದು. ಈಗ ಕೇರಳ ಸೇರಿದಂರೆ ರಾಜ್ಯದಲ್ಲಿ  ಹರಡಿರುವುದು ಸುದ್ದಿ ಅದೇ ಮಾದರಿಯ ರಂಬುಟಾನ್ ಹಣ್ಣಿನ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ತಂತ್ರವಷ್ಟೇ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ.

Advertisement
Advertisement
Advertisement

ಚೀನಾದ ಗುವಾಂಗ್ಡಾಂಗ್ ಮತ್ತು ಫುಜಿಯನ್ ಪ್ರಾಂತ್ಯಗಳಿಗೆ ಸ್ಥಳೀಯವಾಗಿ ಉಷ್ಣವಲಯದ ಮರವಾಗಿರುವ ಲಿಚಿ ಭಾರತದಲ್ಲೂ ಉತ್ತಮ ಬೆಳೆಯಾಗಿ ಬೆಳೆಯುತ್ತದೆ. ಲಿಚಿಯು ಸಣ್ಣ ತಿರುಳಿರುವ ಹಣ್ಣುಗಳನ್ನು ಹೊಂದಿರುತ್ತದೆ. ಹಣ್ಣಿನ ಹೊರಭಾಗವು ಗುಲಾಬಿ-ಕೆಂಪು, ಒರಟಾದದು. ಅದನ್ನು ಒಡೆದು ಸಿಹಿಭಾಗವನ್ನು ತಿನ್ನುವ ಹಣ್ಣು ಅದು. ಭಾರತದಲ್ಲೂ ಈ ಹಣ್ಣಿಗೆ ಉತ್ತಮ ಬೇಡಿಕೆ ಹಾಗೂ ಮಾರುಕಟ್ಟೆಯೂ ಇದೆ.

Advertisement

ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಹೊಂದಿರುವ ಈ ಹಣ್ಣು ಚರ್ಮದ ರಕ್ಷಣೆ, ಮಕ್ಕಳ ಬೆಳವಣಿಗೆಗೆ ಸಹಕಾರಿ. ಸಿ ವಿಟಮಿನ್ ಹೇರಳವಾಗಿರುವ ಪ್ರತಿ 100 ಗ್ರಾಂ ಲಿಚಿಯಲ್ಲಿ 72 ಗ್ರಾಂ ವಿಟಮಿನ್ ‘ಸಿ’ ಇರುತ್ತದೆ.  ಬಿ ಕಾಂಪ್ಲೆಕ್ಸ್‌ನೊಂದಿಗೆ ನಾರಿನಂಶವನ್ನೂ ಹೊಂದಿರುವುದು ಈ ಹಣ್ಣಿನ ವಿಶೇಷ.

 

Advertisement

ಇತ್ತೀಚೆಗೆ  ಬಿಹಾರದ ಮುಜಫ್ಫರಪುರದಲ್ಲಿ  ಅನೇಕ ಮಕ್ಕಳು  ಸಾವನ್ನಪ್ಪಿದ್ದರು. ಇದಕ್ಕೆ ಕಾರಣ ಲಿಚಿ ಹಣ್ಣು ಎಂದು ಸುದ್ದಿ ಹರಡಲಾಯಿತು. ಈ ಹಣ್ಣನ್ನು ಮುಜಫ್ಫುರಪುರ ಪ್ರದೇಶದಲ್ಲಿ ಯಥೇಚ್ಚವಾಗಿ ಬೆಳೆಯಲಾಗುತ್ತದೆ. ಅಲ್ಲಿನ ಮಕ್ಕಳು ಈ ಹಣ್ಣನ್ನು ಯಥೇಚ್ಛವಾಗಿ ತಿನ್ನುತ್ತಾರೆ. ಪೌಷ್ಟಿಕಾಂಶದ ಕೊರತೆ ಇರುವ ಮಕ್ಕಳು ಅತಿಯಾಗಿ ಈ ಹಣ್ಣು ಸೇವಿಸಿದರೆ ಅಪಾಯ ಎಂದು ವೈದ್ಯರು ಹೇಳುತ್ತಾರೆ. ಲಿಚಿ ಹಣ್ಣಿನಲ್ಲಿರುವ ಅ ಗ್ಲೂಕೋಸ್‌ ಅನ್ನು ಅತಿ ಕಡಿಮೆ ಸಮಯದಲ್ಲಿ ಹೀರಿಬಿಡುವ ಇದರ ಗುಣವು ಮೊದಲೇ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿದ್ದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣುಗಳನ್ನು ತಿಂದಿದ್ದರಿಂದ ಅವರ ರಕ್ತದಲ್ಲಿ ಗ್ಲೂಕೋಸ್‌ ಪ್ರಮಾಣವು ತೀವ್ರ ಮಟ್ಟದಲ್ಲಿ ಕುಸಿದು, ಮೆದುಳಿನ ಉರಿಯೂತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹಾಗೆಂದು ಲಿಚಿಯೇ ಮಾರಕ ಅಲ್ಲ.

Advertisement

ಇದೊಂದೇ ಮಾಹಿತಿ ಇರಿಸಿಕೊಂಡು ಈಗ ಕೇರಳ ಹಾಗೂ ರಾಜ್ಯದ ವಿವಿಧ ಕಡೆ ಬೆಳೆಯುತ್ತಿರುವ ರಂಬುಟಾನ್ ಹಣ್ಣಿನ ಮೇಲೂ ಇದೀಗ ಅಪವಾದ ಮಾಡಲಾಗುತ್ತಿದೆ. ವಾಸ್ತವವಾಗಿ ರಂಬುಟಾನ್ ಬೇರೆ ಲಿಚಿ ಬೇರೆ. ಇದರ ಹಿಂದೆಯೂ ಲಾಬಿಗಳು ಕೆಲಸ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ. ಇತ್ತೀಚೆಗೆ ಕೇರಳ ಹಾಗೂ ರಾಜ್ಯದ ಕೆಲವು ಕಡೆ ಹೇರಳವಾಗಿ ರಂಬುಟಾನ್ ಬೆಳೆಯಲಾಗುತ್ತಿದ್ದು ದೇಶದ ವಿವಿಧ ಕಡೆಗಳಿಗೆ ರವಾನೆಯಾಗುತ್ತಿದೆ. ಉತ್ತಮ ಮಾರುಕಟ್ಟೆಯೂ ಲಭ್ಯವಾಗುತ್ತಿದೆ. ಹೀಗಾಗಿ ಲಿಚಿ ಹೆಸರಲ್ಲಿ  ರಂಬುಟಾನ್ ಹಣ್ಣನ್ನು  ಹೊಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಬೆಳೆಗಾರರು ಸಂದೇಹ ವ್ಯಕ್ತಪಡಿಸುತ್ತಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

15 hours ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

2 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

2 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

3 days ago