ಲೋಹದ ಏಣಿಗಳ ಬಳಕೆಯಲ್ಲಿ ಎಚ್ಚರಿಕೆ ಇರಲಿ

June 6, 2019
11:35 AM

ಮಡಿಕೇರಿ : ಲೋಹದ ಏಣಿಗಳಿಂದ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಜಿಲ್ಲೆಯ ಕೃಷಿಕರು, ಬೆಳೆಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಬಳಸುವಂತೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ವಾಹಕ ಲೋಹದ ಏಣಿಗಳಿಗೆ ಪರ್ಯಾಯವಾಗಿ ವಿದ್ಯುತ್ ನಿರೋಧಕ ವಸ್ತುಗಳಾದ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ಏಣಿ ಕೃಷಿ/ ತೋಟಗಾರಿಕೆ ಮತ್ತು ಇನ್ನಿತರೆ ಯಾವುದೇ ಚಟುವಟಿಕೆಗಳಿಗೆ ಬಳಸುವ ಅನಾಹುತವನ್ನು ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

35 ಕಾರ್ಮಿಕರ ಸಾವು:

ಕೊಡಗು ಜಿಲ್ಲೆಯ ತೋಟಗಳಲ್ಲಿ ಲೋಹದ ಏಣಿಗಳನ್ನು ಬಳಸುವ ಸಂದರ್ಭ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಾಹಿಸಿದ ಮಾನವ ಜೀವಹಾನಿ ಆಗುತ್ತಿರುವ ವಿಚಾರ ವರದಿಯಾಗಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಲೋಹದ ಏಣಿಗಳ ಬಳಕೆಯಿಂದ ವಿದ್ಯುತ್ ಸ್ಪರ್ಶಗೊಂಡು 35 ಕಾರ್ಮಿಕರು ಮೃತಪಟ್ಟಿದ್ದಾರೆ.
ತೋಟಗಳಲ್ಲಿ ಬಳಸುವ ಲೋಹದ ಏಣಿಗಳು ಉತ್ತಮ ವಿದ್ಯತ್ ವಾಹಕಗಳಾಗಿದ್ದು, ಇವುಗಳು ಎತ್ತರ ಸಾಮಾನ್ಯವಾಗಿ 20 ಅಡಿಗಿಂತಲೂ ಅಧಿಕವಾಗಿರುತ್ತದೆ. ಜಿಲ್ಲೆಯ ಕೆಲವು ತೋಟ/ ಎಸ್ಟೇಟ್‍ಗಳಲ್ಲಿ ಲೋಹದಿಂದ ನಿರ್ಮಿತವಾದ ಏಣಿಗಳ ಬದಲಾಗಿ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ವಿದ್ಯುತ್ ನಿರೋಧಕ ಏಣಿಗಳನ್ನು ಬಳಸಲಾಗತ್ತಿದ್ದು, ಅಲ್ಲದೆ ಇವುಗಳು ಶಾಖ ವಾಹಕಗಳಾಗಿರದೆ, ಕಠಿಣ ಹವಾಮಾನ ಪರಿಸ್ಥಿತಿಗೆ ಉನ್ನತ ಪ್ರತಿರೋಧ ಹೊಂದಿರರುತ್ತದೆ. ಲೋಹದಿಂದ ನಿರ್ಮಿತವಾದ ಏಣಿಗಳಿಗೆ ಹೋಲಿಸಿದಲ್ಲಿ ಈ ಏಣಿಗಳ ಬಳಕೆ ಅತ್ಯಂತ ಸುರಕ್ಷಿತವಾಗಿದೆ ಮತ್ತು ವಿದ್ಯುತ್ ಆಘಾತವಾಗುವ ಯಾವುದೇ ಸಾಧ್ಯತೆಗಳಿರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಯವರು ಮತ್ತು ಸೆಸ್ಕ್ ಇಇ ಅವರು ತಿಳಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ
July 29, 2026
6:42 AM
by: ದ ರೂರಲ್ ಮಿರರ್.ಕಾಂ
ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ
200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ
July 27, 2026
11:27 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror