ಗುತ್ತಿಗಾರು: ಅನೂಚಾನ ವಿದ್ಯಾ ಪ್ರತಿಷ್ಠಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಗಾಯತ್ರಿ ಯಜ್ಞದ ಹಾಗೂ ವಸಂತ ವೇದ ಶಿಬಿರದ ಸಮಾರೋಪ ಮತ್ತು ಗುತ್ತಿಗಾರು ಹವ್ಯಕ ವಲಯೋತ್ಸವ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬೆಳಗ್ಗೆ ಗಾಯತ್ರಿ ಯಜ್ಞದ ಪೂರ್ಣಾಹುತಿ ನಡೆದು ಮಧ್ಯಾಹ್ನ ನಂತರ ವೇದ ಶಿಬಿರದ ಸಮಾರೋಪ ಹಾಗೂ ಗುತ್ತಿಗಾರು ಹವ್ಯಕ ವಲಯೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಸಿ.ಟಿ.ಸತ್ಯನಾರಾಯಣ ಚಣಿಲ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಅಧ್ಯಕ್ಷ ಟಿ.ಕೃಷ್ಣ ಭಟ್, ಅತಿಥಿಗಳಾಗಿದ್ದರು. ಗುತ್ತಿಗಾರು ಹವ್ಯಕ ವಲಯ ಅಧ್ಯಕ್ಷ ಸೀತಾರಾಮ ಭಟ್ ಅಡಿಕೆಹಿತ್ತಿಲು ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅನೂಚಾನ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಭಟ್ ಗುಂಡಿಮಜಲು , ವೇದ ಶಿಬಿರದ ಮುಖ್ಯಗುರುಗಳಾದ ಪಿ.ವಿ.ಮಹಾಬಲೇಶ್ವರ ಭಟ್, ಗುತ್ತಿಗಾರು ಹವ್ಯಕ ವಲಯ ಕಾರ್ಯದರ್ಶಿ ಕೆ.ಸೂರ್ಯನಾರಾಯಣ ಪುಚ್ಚಪ್ಪಾಡಿ, ಅನೂಚಾನ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಶಿವರಾಮ ಕರುವಜೆ, ಪ್ರಮುಖರಾದ ಸತ್ಯನಾರಾಯಣ ಮೊಗ್ರ, ವೇ.ಮೂ.ಕರುವಜೆ ಕೇಶವ ಜೋಯಿಸರು ಮೊದಲಾದವರು ಉಪಸ್ಥಿತರಿದ್ದರು.
ಅನೂಚಾನ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…