ವಿಶೇಷ ವರದಿಗಳು

ವಾರದಿಂದ ಸುಳ್ಯದಲ್ಲಿ ಕಸ ಸಂಗ್ರಹ ಸ್ಥಗಿತ……!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ನಗರದಲ್ಲಿ ಕಸ ಸಂಗ್ರಹ ಕಾರ್ಯ ಕಳೆದ ಕೆಲವು ದಿನಗಳಿಂದ ನಿಂತಿದೆ. ಹೀಗಾಗಿ ಸಾರ್ವಜನಿಕರು ಕಸ ವಿಲೇವಾರಿಗೆ ಏನು ಮಾಡುವುದು  ಎಂಬ ಚಿಂತೆಯಲ್ಲಿದ್ದಾರೆ. ವಾರದ ನಿರ್ದಿಷ್ಟ ದಿನಗಳಲ್ಲಿ ನಗರದ ಬೇರೆ ಭಾಗಗಳಿಗೆ ವಾಹನ ತೆರಳಿ ಕಸ ಸಂಗ್ರಹಿಸಲಾಗುತ್ತಿತ್ತು. ಇದೀಗ ಒಂದು ವಾರದಿಂದ ನಗರದಲ್ಲಿ ಕಸ ಸಂಗ್ರಹಕ್ಕೆ ಯಾವುದೇ ವಾಹನ ಬಂದಿಲ್ಲ  ಸಾರ್ವಜನಿಕರು ದೂರಿದ್ದಾರೆ.

Advertisement

ಸಾರ್ವಜನಿಕರು ನೀಡಿದ ಮಾಹಿತಿಯಂತೆ ನಗರದ ಕುರುಂಜಿಭಾಗ್‍ಗೆ ಐದು ದಿನಗಳಿಂದ ಕಸ ಸಂಗ್ರಹ ವಾಹನ ತೆರಳಿಲ್ಲ. ಇಲ್ಲಿ ಶೇಖರವಾಗುವ ಕಸಗಳು ಮನೆಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಉಳಿದಿದೆ. ನಗರದ ಜಟ್ಟಿಪಳ್ಳ, ಕನಿಕರಪಳ್ಳ ಭಾಗಕ್ಕೆ ವಾರದಿಂದ ಕಸ ಸಂಗ್ರಹ ವಾಹನ ತೆರಳಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಾವೂರು ವಾರ್ಡ್‍ಗಳಿಗೆ ವಾರಕ್ಕೆ ಮೂರು ಬಾರಿ ಕಸ ಸಂಗ್ರಹ ವಾಹನ ತೆರಳಿ ಕಸ ಸಂಗ್ರಹ ಮಾಡುತ್ತಿದ್ದರೂ ಕಳೆದ ವಾರದಲ್ಲಿ ಒಮ್ಮೆಯೂ ತೆರಳಿಲ್ಲ. ಅದೇ ರೀತಿ ವಿವಿಧ ವಾರ್ಡ್‍ಗಳಲ್ಲಿಯೂ ಕಸ ಸಂಗ್ರಹ ಆಗದೆ ಸಮಸ್ಯೆ ತಲೆದೋರಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸುಳ್ಯ ನಗರ ಪಂಚಾಯತ್ ಸಮೀಪದ ಕಟ್ಟಡದಲ್ಲಿ ಕಳೆದ ಹಲವಾರು ತಿಂಗಳಿನಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯ ನಡೆಯುತಿದೆ. ನಗರದಲ್ಲಿ ಕಸ ಸಂಗ್ರಹ ಮಾಡುವ ಕಾರ್ಮಿಕರು ನ.ಪಂ.ಕಟ್ಟಡದಲ್ಲಿ ಶೇಖರಗೊಂಡಿರುವ ಕಸವನ್ನು ಬೇರೆ ಕಡೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿರುವುದರಿಂದ ನಗರದ ಕಸ ಸಂಗ್ರಹಕ್ಕೆ ಹಿನ್ನಡೆಯಾಗಿದೆ ಎಂಬುದು ನಗರ ಪಂಚಾಯತ್ ಅಧಿಕಾರಿಗಳು ನೀಡುವ ಸ್ಪಷ್ಟನೆ. ಆದರೆ ನಗರ ಪಂಚಾಯತ್ ಬಳಿಯ ಕಸ ಸಾಗಾಟದ ನೆಪವೊಡ್ಡಿ ವಾರ್ಡ್‍ಗಳ ಮನೆಗಳಿಂದ ಕಸ ಸಂಗ್ರಹ ಸ್ಥಗಿತ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ನಗರ ಪಂಚಾಯತ್ ಕಟ್ಟಡ ಸಮೀಪದಲ್ಲಿ ಸಂಗ್ರಹ ವಾಗಿರುವ ಕಡೆ ವಿಲೇವಾರಿ ಮಾಡುವ ಕಾರಣ ಕೆಲವೆಡೆ ಕಸ ಸಂಗ್ರಹಕ್ಕೆ ತೊಡಕಾಗಿದೆ. ನಾಳೆಯಿಂದ ಎಂದಿನಂತೆ ಕಸ ಸಂಗ್ರಹ ಆರಂಭಿಸಲಾಗುವುದು ಎಂದು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ತಿಳಿಸಿದ್ದಾರೆ.

Advertisement

ನಗರ ಸಮೀಪದ ಕಟ್ಟಡದಲ್ಲಿರುವ ಕಸವನ್ನು ಒಮ್ಮೆ ಪೂರ್ತಿಯಾಗಿ ವಿಲೇವಾರಿ ಮಾಡುವ ಕೆಲಸ ನಡೆಯುತಿದೆ. ಇದರಿಂದ ನಗರದ ಕೆಲವು ಭಾಗಗಳಲ್ಲಿ ಕಸ ಸಂಗ್ರಹ ಕಾರ್ಯಕ್ಕೆ ಸ್ವಲ್ಪ ಹಿನ್ನಡೆ ಆಗಿದೆ. ಕಸ ಸಂಗ್ರಹ ವಾಹನಗಳು ನಾಳೆಯಿಂದ ವಾರ್ಡ್‍ಗಳಿಗೆ ಕಳುಹಿಸಲಾಗವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ.

 

Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!

ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶದ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಸ್ಥಗಿತವಾಗಿದೆ. 

14 minutes ago

ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….

ನಾವೊಂದು ಯೋಚನೆ ಮಾಡಿದ್ದೇವೆ.  ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…

4 hours ago

ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ

ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…

8 hours ago

ಒಂದು ಸೇತುವೆಯ ಹೋರಾಟದ ಕತೆ | ಕೊನೆಗೂ ಕೈಗೂಡಿತು ಬೃಹತ್‌ ಸೇತುವೆ | ಅದು ಅಂಬಾರಗೂಡ್ಲು-ಕಳಸವಳ್ಳಿ ಸೇತುವೆ |

ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್‌ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…

15 hours ago

ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನ ವಿತರಿಸುವ ‘ತರಂಗಿಣಿ’ ಕಾರ್ಯಕ್ರಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…

15 hours ago