ಪುತ್ತೂರು: ದೇಹದ ಆಕಾರ ಯಾವ ಸಾಧನೆಗೂ ಅಡ್ಡಿಯಾಗುವುದಿಲ್ಲ. ಕೀಳರಿಮೆಯನ್ನು ಮೆಟ್ಟಿ ನಿಂತು ಮುನ್ನಡೆದರೆ ಏನನ್ನು ಬೇಕಾದರೂ ಸಾಧಿಸಬಹುದು. ವಿಕಲಚೇತನರನ್ನು ಎಲ್ಲರೂ ಅನುಕಂಪದಿಂದ ನೋಡುತ್ತಾರೆ. ಆದರೆ ಅವರಿಗೆ ಅವಕಾಶಗಳು ಬೇಕೇ ಹೊರತು ಕನಿಕರವಲ್ಲ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವಿಶೇಷಚೇತನ ಈಜುಪಟು ವಿಶ್ವಾಸ್ ಕೆ. ಎಸ್. ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ಕನಸುಗಳು-2019’ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಕನಸು ನನಸು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಸಮಾಜ ಮತ್ತು ಕನ್ನಡಿ ನಮ್ಮ ದೊಡ್ಡಗುರು. ಬದುಕಲು ಬೇಕಾದ ಎಲ್ಲಾ ಪಾಠವನ್ನು ಅದು ಕಲಿಸುತ್ತದೆ, ಆದರೆ ನಾವು ನಮ್ಮ ಆಯ್ಕೆಗಳನ್ನು ಪ್ರೀತಿಸಬೇಕು. ಆಯ್ಕೆಗಳನ್ನು, ಅವಕಾಶಗಳನ್ನು ಕೆಲವೊಮ್ಮೆ ನಾವೇ ಬರಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಿದ ಮೇಲೆ ಅದರ ಮೇಲೆ ದೃಢನಂಬಿಕೆಯನ್ನು ಇಡಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಅದರ ಅವಲೋಕನ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಏಕೆಂದರೆ ಅದರ ಮೇಲೆ ನಮ್ಮ ಮುಂದಿನ ಭವಿಷ್ಯದ ತೀರ್ಮಾನವಾಗುತ್ತದೆ.
ಗೆದ್ದಾಗ ಎಲ್ಲರೂ ಹೊಗಳುತ್ತಾರೆ. ಆದರೆ ಅದು ನಿಮ್ಮನ್ನು ನಿರ್ಲಕ್ಷಿಸಿದವರೇ ಅಂಗೀಕರಿಸುವಂಥ ಸಾಧನೆಯಾಗಿರಬೇಕು. ಎಷ್ಟೋ ಬಾರಿ ಅಂತಃಶಕ್ತಿಯನ್ನೇ ಕುಂದಿಸುವಂತಹ ಮಾತುಗಳು, ಸಂದರ್ಭಗಳು ಎದುರಾದರೂ ಧೃತಿಗೆಡದೆ ಯಶಸ್ಸನ್ನು ಸಾಧಿಸುವ ಛಲ, ಹುಮ್ಮಸ್ಸನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಬಳಿಕ ಅವರು ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ. ಮಂಜುನಾಥ್ ಉಪಸ್ಥಿತರಿದ್ದರು. ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ದೇವಿಚರಣ್ ರೈ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಶ ಭಟ್ ವಂದಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…