ಸುಳ್ಯ: ದ ಕ ಜಿಲ್ಲಾ ವಿಖಾಯ ಸಮಿತಿ ಹಾಗೂ ಸುಳ್ಯ ಝೋನ್ ವಿಖಾಯ ಸಮಿತಿಯ ವತಿಯಿಂದ ಮಂಗಳೂರಿನಿಂದ ಸುಳ್ಯಕ್ಕೆ ವಿಖಾಯ ಮೆಡಿ ಚೈನ್ ಮೂಲಕ ಔಷಧಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸುಳ್ಯದ ಮೆಡಿಕಲ್ ಶಾಪ್ ಗಳಲ್ಲಿ ಸಿಗದಂತಹ ಔಷಧಗಳನ್ನು ವಿಖಾಯ ಕಾರ್ಯಕರ್ತರಿಗೆ ತಿಳಿಸಿದಾಗ, ಮಂಗಳೂರು ವಿಖಾಯ ಕಾರ್ಯಕರ್ತರು ಅಲ್ಲಿನ ಮೆಡಿಕಲ್ ಗಳಿಂದ ಖರೀದಿಸಿ ಬೆಳಿಗ್ಗೆ 10 ಗಂಟೆಗೆ ಬಿ,ಸಿ,ರೋಡ್ ತಲುಪಿಸಲಾಗುತ್ತದೆ. ಅಲ್ಲಿಂದ ಚೈನ್ ಸಿಸ್ಟಮ್ ಮೂಲಕ ಮಾಣಿ, ಕಬಕ, ಪುತ್ತೂರು, ಕುಂಬ್ರ, ತಿಂಗಳಾಡಿ ,ಮಾಡಾವು, ಬೆಳ್ಳಾರೆ, ಪೈಚಾರ್, ಮೂಲಕ ಸುಳ್ಯಕ್ಕೆ ಬರಲಿದೆ. ಸುಳ್ಯಕ್ಕೆ ಬಂದ ಔಷಧಗಳನ್ನು ಸುಳ್ಯದ ವಿಖಾಯ ಸ್ವಯಂ ಸೇವಕರು ನೇರವಾಗಿ ರೋಗಿಗಳ ಮನೆಯವರೆಗೆ ತಲುಪಿಸುತ್ತಾರೆ.
ಸುಳ್ಯ ನಗರದಿಂದ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಇದೇ ರೀತಿ ಚೈನ್ ಸಿಸ್ಟಮ್ ಮೂಲಕ ಔಷಧಗಳನ್ನು ತಲುಪಿಸಲಾಗುತ್ತಿದೆ. ಇಂದು ಮಂಗಳೂರಿನಿಂದ,ಬೆಳ್ಳಾರೆಯ ಒಬ್ಬ ರೋಗಿಗೆ,ಸುಳ್ಯದ ಒಬ್ಬರಿಗೆ ಹಾಗೂ ಕಲ್ಲುಗುಂಡಿಯ ಒಬ್ಬರಿಗೆ ಔಷಧಗಳನ್ನು ಮೆಡಿ ಚೈನ್ ಮೂಲಕ ತಲುಪಿಸಲಾಗಿದೆ. ಸುಳ್ಯದಲ್ಲಿ ಸಿಗದಂತಹ ಔಷಧಗಳನ್ನು ಮಂಗಳೂರಿನ ಮೆಡಿಕಲ್ ಗಳಿಂದ ಖರೀದಿಸಿ ಸುಳ್ಯದ ಮನೆಗಳಿಗೆ ತಲುಪಿಸಲು ಸುಳ್ಯ ಝೋನ್ ವಿಖಾಯ ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…