ಸುಳ್ಯ: ರೈಡ್ ಫಾರ್ ರೋಟರಿಯ 14 ದೇಶಗಳ 38 ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್ ಗೆ ಭೇಟಿ ನೀಡಿ ವಿಚಾರ ವಿನಿಮಯ ನಡೆಸಿತು. ಸೇವೆಗಾಗಿ ನಿಧಿ ಸಂಗ್ರಹ ಈ ತಂಡದ ಭೇಟಿಯ ಪ್ರಮುಖ ಉದ್ದೇಶ. ಈ ತಂಡವು ಮಂಗಳೂರಿನಿಂದ ಹೊರಟು ಮಡಿಕೇರಿ, ಮೈಸೂರು, ಊಟಿ, ವಯನಾಡು, ಕೊಯಂಬುತ್ತೂರು, ಮೂನಾರ್, ಕೊಚ್ಚಿನ್ ನಲ್ಲಿ 29 ರಂದು ಸಮಾಪನಗೊಳ್ಳಲಿದೆ.
ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ರೊ .ಡಾ. ಪುರುಷೋತ್ತಮ ಕೆ.ಜಿ. ವಿದೇಶಿ ತಂಡದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸುಳ್ಯದ ಧ್ವಜವನ್ನು ಯು ಎಸ್ ಎ, ಯು ಕೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್, ಪೋಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಕೆನಡಾ, ನೆದೆರ್ಲ್ಯಾಂಡ್, ಡೆನ್ಮಾರ್ಕ್, ಮತ್ತು ಫ್ರಾನ್ಸ್ ಮುಂತಾದ 14 ದೇಶಗಳ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ತದನಂತರ ವಿದೇಶಿ ರೋಟೇರಿಯನ್ನರ ತಂಡದ ಪರವಾಗಿ ಮಾರ್ಕೊಸ್ ಮತ್ತು ರಾಜ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೊ.ಜೋಸೆಫ್ ಮ್ಯಾಥ್ಯು, ವಲಯ 5 ರ ಅಸಿಸ್ಟಂಟ್ ಗವರ್ನರ್ ಡಾ. ಕೇಶವ ಪಿ. ಕೆ., ರೋಟರಿ ಸಿಟಿಯ ಅಧ್ಯಕ್ಷ ಭಾನುಪ್ರಕಾಶ್, ಸಂಚಾಲಕ ಎನ್.ಎ. ಜಿತೇಂದ್ರ, ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ, ಗಣೇಶ್ ಆಳ್ವ, ಪ್ರಭಾಕರ ನಾಯರ್ , ಅವಿನಾಶ್ ಡಿ. ಕೆ ಹಾಗೂ ಶ್ರೀನಿವಾಸ್ ಕೆ ಉಪಸ್ಥಿತರಿದ್ದರು. ಬಳಿಕ ಮಡಿಕೇರಿ ಕಡೆಗೆ ವಿದೇಶಿ ರೋಟೆರಿಯನ್ನರ ತಂಡ ಪ್ರಯಾಣ ಬೆಳೆಸಿತು.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…