ಸುಳ್ಯ: ಜೀವನದಿ ಪಯಸ್ವಿನಿ ಮಳೆಗಾಲ ತುಂಬಿ ಹರಿಯುತ್ತದೆ. ಬೇಸಗೆಯಾದಂತೆ ಈಚೆಗೆ ಬತ್ತಲು ಶುರುವಾಗಿದೆ. ಹಿಂದೆಲ್ಲಾ ಹೀಗೆ ಇರಲಿಲ್ಲ. ಸುಳ್ಯದ ಜನರಿಗೆ ಕುಡಿಯುವ ನೀರು ಲಭ್ಯವಾಗುತ್ತಿತ್ತು, ಕೃಷಿಗೂ ಸಾಕಷ್ಟು ನೀರು ಪಯಸ್ವಿನಿ ನೀಡುತ್ತಿತ್ತು. ಹೀಗಾಗಿ ಈಗ ಪಯಸ್ವಿನಿ ಉಳಿಸಿ ಆಂದೋಲನ ಶುರುವಾಗಿದೆ. ಈ ಆಂದೋಲನದಲ್ಲಿ ಈಗ ಮಕ್ಕಳೂ ತೊಡಗಿಕೊಂಡಿದ್ದಾರೆ. ಸುಳ್ಯದ ಸ್ನೇಹ ಶಾಲೆ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಈ ಮೂಲಕ ನದಿಯ ಈಗಿನ ಸ್ಥಿತಿಯ ದಾಖಲೀಕರಣ ಮಾಡಿದರು.
ಸುಳ್ಯದ ಪಯಸ್ವಿನಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಯುತ್ತಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯ ಪಾತಳಿಯಲ್ಲಿ ವಿಸ್ತಾರವಾದ ದಿಬ್ಬಗಳು ಗೋಚರಿಸತೊಡಗಿವೆ. ನದಿ ನೀರು ಬತ್ತದಂತೆ ಮಾಡಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಏನಾದರೊಂದು ಸುಧಾರಣೆ ಮಾಡಬೇಕಾಗಿದೆ. ಅದಕ್ಕಾಗಿ ಚಿತ್ರಗಳ ಮೂಲಕ ಎಚ್ಚರ ಮೂಡಿಸುವ ಪ್ರಯತ್ನವಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನದಿಯ ತಟದಲ್ಲಿ ಕುಳಿತು ಹಾಗೂ ಆಲೆಟ್ಟಿ ಸೇತುವೆಯ ಮೇಲೆ ನಿಂತು ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸಿದರು. ಪರಿಸರ, ಜಲಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ, ಜಾಗೃತಿ ಮೂಡಿಸುತ್ತಿರುವ ಸುಳ್ಯದ ಕನ್ನಡ ಮಾಧ್ಯಮ ಶಾಲೆ ಈಗ ಇನ್ನೊಂದು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಲಸಂರಕ್ಷಣೆಯ ಕಡೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿದೆ.
ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ಅಧ್ಯಾಪಕರಾದ ಸವಿತಾ , ದೇವಿಪ್ರಸಾದ್ ಸರ್ ಹಾಗೂ ದಿವ್ಯಶ್ರೀ ಸಹಕರಿಸಿದರು.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…