ಸುಳ್ಯ:ವೇದಾಧ್ಯಯನಕ್ಕೆ ಕುಳಿತರೆ ತುಟಿಯಲ್ಲಿ ಇಂಪಾದ ವೇದಮಂತ್ರಗಳನ್ನು ಪಠಿಸುತ್ತಾ ಅಪ್ಪಟ ವೈದಿಕ ಉಡುಗೆಯಲ್ಲೇ ಕಣ್ಣು ಸೆಳೆಯುವ ಪುಟಾಣಿಗಳು ನೀರಿಗಿಳಿದರೆ ಈಜುಪಟುಗಳಂತೆ ಈಜುತ್ತಾರೆ. ಈ ದೃಶ್ಯ ಕಾಣುವುದು ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ.
ಒಂದು ಮಗುವಿನ ವಿಕಾಸ ಪ್ರಕ್ರಿಯೆಯು ಎರಡು ಹಂತದಲ್ಲಿ ನಡೆಯುತ್ತವೆ. ಮೊದಲನೆಯದ್ದು ಅಂತರಂಗವಾಗಿ ಎರಡನೆಯದ್ದು ಬಹಿರಂಗವಾಗಿ. ನೈತಿಕತೆ, ಮಾನವೀಯ ಮೌಲ್ಯಗಳು, ಸಭ್ಯತೆ ಸಂಸ್ಕಾರಗಳು, ಶಿಸ್ತು ಸಂಯಮ, ಬೌದ್ಧಿಕ ವಿಚಾರಗಳು, ಭಾವನಾತ್ಮಕ ಬದಲಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಬೆಳವಣಿಗೆಗಳೆಲ್ಲಾ ಅಂತರಂಗದ ವಿಕಸನಕ್ಕೆ ಸಂಬಂಧಿಸಿದ್ದಾದರೆ, ಕ್ರೀಡೆ, ವ್ಯಾಯಾಮ, ಯೋಗ, ಕುಸ್ತಿ, ಕರಾಟೆ ಮುಂತಾದ ಶಾರೀರಿಕ ಚಟುವಟಿಕೆಗಳ ಮೂಲಕ ಭೌತಿಕ ದೇಹದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದನ್ನು ಬಹಿರಂಗದ ವಿಕಸನದ ಪ್ರಕ್ರಿಯೆ ಎನ್ನಬಹುದು.ಇಂತಹ ಭೌತಿಕ ದೇಹದ ಬೆಳವಣಿಗೆಗೆ ಪೂರಕವಾದ ಒಂದು ಪ್ರಾಚೀನ ಕಲೆ ಈಜುಗಾರಿಕೆ.
ಈಜುಗಾರಿಕೆ ಅನ್ನುವುದು ಒಂದು ಕಲೆಯೂ ಹೌದು ಕ್ರೀಡೆಯೂ ಹೌದು. ಸಾಮಾನ್ಯವಾಗಿ ಕೆಲವೊಂದು ಕ್ರೀಡೆಗಳು ಕೇವಲ ಮನರಂಜನೆಯನ್ನು ಮಾತ್ರ ಕೊಡುತ್ತವೆ, ಇನ್ನು ಕೆಲವು ಕ್ರೀಡೆಗಳು ಕೇವಲ ಸ್ಫರ್ಧೆಗಳಿಗಷ್ಟೇ ಸೀಮಿತವಾಗಿರುತ್ತವೆ. ಹಾಗೆ ನೋಡಿದರೆ ಈಜುಗಾರಿಕೆ ಅನ್ನುವಂತದ್ದು ಎಲ್ಲಾ ಮಜಲುಗಳಲ್ಲೂ ನಮಗೆ ಲಾಭದಾಯಕವೇ ಸರಿ. ನದಿ ಕೆರೆಗಳಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಪಾಯದ ಸಂದರ್ಭದಲ್ಲಿ ಈಜುಗಾರಿಕೆಯು ಜೀವರಕ್ಷಣೆಗೆ ನೆರವಾಗುತ್ತದೆ. ಇದು ಸ್ವ ರಕ್ಷಣೆ ಮತ್ತು ಪರರ ರಕ್ಷಣೆ ಎರಡೂ ದೃಷ್ಟಿಯಿಂದ ಮುಖ್ಯ.ಈಜು ಮೈನವಿರೇಳಿಸುವ ಸಾಹಸೀ ಕ್ರೀಡೆಯಾಗಿರುವ ಕಾರಣದಿಂದ ಮಕ್ಕಳಲ್ಲಿ ಸಾಹಸೀ ಪ್ರವೃತ್ತಿಯನ್ನು ಮೈಗೂಡಿಸಲು ನೆರವಾಗುತ್ತವೆ.
ವಿವಿಧ ಬಗೆಯ ಉಪಯೋಗವಿರುವ ಇಂತಹ ಕಲೆಯನ್ನು ಎಳವೆಯಲ್ಲಿಯೇ ಮಕ್ಕಳಿಗೆ ಕರಗತ ಮಾಡಿಸಿಬಿಡಬೇಕೆಂದೇ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಈ ದಿಕ್ಕಿನಲ್ಲಿ ಯೋಚಿಸಿ ಹೆಜ್ಜೆಯಿಟ್ಟಿದೆ.
ಹತ್ತಾರು ವರ್ಷಗಳಿಂದ ವೇದಶಿಬಿರ ಮತ್ತು ಸಂಸ್ಕಾರ ವಾಹಿನಿ ಶಿಬಿರಗಳ ಮೂಲಕ ಮಕ್ಕಳ ಅಂತರಂಗ ವಿಕಸನಕ್ಕೆ ಮಹತ್ತರ ಕಾಣಿಕೆ ನೀಡುತ್ತಿರುವ ಪ್ರತಿಷ್ಠಾನವು ಕಳೆದ ಕೆಲ ವರ್ಷಗಳಿಂದ ವೇದ ಶಿಬಿರದ ಜೊತೆಗೆ ಈಜು ತರಬೇತಿಯನ್ನು ಕೂಡಾ ಜೋಡಿಸಿಕೊಂಡು ಶಿಬಿರಾರ್ಥಿಗಳ ಭೌತಿಕ ವಿಕಸನಕ್ಕೆ ಮುಂದಡಿಯಿಟ್ಟಿದೆ.
ಈ ವರ್ಷದ ಈಜು ತರಬೇತಿ ಶಿಬಿರವು ಶನಿವಾರ ತೂಗು ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ವರ ಖಾಸಗಿ ಸ್ಥಳ ಕೇರ್ಪಳದ ಶಿವಗಿರಿಯಲ್ಲಿ ಆರಂಭಗೊಂಡಿದ್ದು, ಕೇಶವಕೃಪಾ ಹಿರಿಯ ವಿದ್ಯಾರ್ಥಿ ಪರಿಷದ್ ಅಧ್ಯಕ್ಷ ಬಲರಾಮ ಭಟ್ ಶಿವನಿವಾಸ ಧ್ವಜ ಹಾರಿಸುವ ಮೂಲಕ ಉದ್ಘಾಟಿಸಿ, ಗಿರೀಶ್ ಭಾರದ್ವಾಜ್ ಅವರು ಮಕ್ಕಳಿಗೆ ಶುಭವನ್ನು ಹಾರೈಸಿದರು.
ತರಬೇತುದಾರರಾಗಿ ಶಿಬಿರದ ಯೋಗ ಅಧ್ಯಾಪಕರಾದ ಆರ್.ವಿ. ಭಂಡಾರಿ ಬೆಂಗಳೂರು, ಎಂ.ಎಸ್. ನಾಗರಾಜ್ ರಾವ್, ವೇ| ಮೂ| ಅಭಿರಾಮ ಭಟ್ ಸರಳಿಕುಂಜ, ವೇ| ಮೂ| ಪ್ರಕಾಶ್ ಭಟ್ ಬಲಿಪ ಹಾಗೂ ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.
ಶಿಬಿರದ ಸುಮಾರು 120ಕ್ಕಿಂತಲೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ವಾರದ ನಿರ್ಧಿಷ್ಟ ದಿನಗಳಲ್ಲಿ ಸರದಿಯಂತೆ ಈಜು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲಿದ್ದು ಮೇ 15ರಂದು ಈಜು ಸ್ಪರ್ಧೆ ನಡೆಯಲಿದೆ.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…