ಕಾಣಿಯೂರು: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಪುತ್ತೂರು, ತಾಲೂಕು ಭಜನಾ ಪರಿಷತ್ ವತಿಯಿಂದ ಫೆ. 8ರಂದು ನಡೆಯಲಿರುವ ವಿರಾಟ್ ಭಜನೋತ್ಸವ 2020ರ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿರಾಟ್ ಭಜನೋತ್ಸವ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ಬಿಳಿಯೂರುಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬೆತ್ತೋಡಿ, ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ, ಸಮಿತಿ ಸಂಚಾಲಕ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಚಂದ್ರನ್ ತಲಪ್ಪಾಡಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ಜನಾರ್ದನ, ಸಮಿತಿ ಸದಸ್ಯರಾದ ರಾಜದೀಪಕ್ ಜೈನ್,ರಾಕೇಶ್ ರೈ ಕೆಡೆಂಜಿ, ಸವಣೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು, ವಲಯಾಧ್ಯಕ್ಷರಾದ ರಾಧಾಕೃಷ್ಣ ರೈ, ವಲಯ ಮೇಲ್ವೀಚಾರಕಿ ಅಶ್ವಿನಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಯ್ಕ್ ತೋಟ, ಸವಣೂರು ವಲಯ ಭಜನಾ ಪರಿಷತ್, ಜನಜಾಗೃತಿ ವೇದಿಕೆ, ಶ್ರೀ.ಕ್ಷೇ.ಗ್ರಾ.ಯೋಜನೆಯ ಒಕ್ಕೂಟಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಸಂಚಾಲಕರ ಆಯ್ಕೆ: ಫೆ 8ರಂದು ನಡೆಯುವ ವಿರಾಟ್ ಭಜನೋತ್ಸವ ಕಾರ್ಯಕ್ರಮದಲ್ಲಿ ಸವಣೂರು ವಲಯದ ವ್ಯಾಪ್ತಿಗಳಿಂದ ಸುಮಾರು 50 ಭಜನಾ ತಂಡಗಳು ಭಾಗವಹಿಸಲಿದ್ದು, ಈ ಭಜನಾ ತಂಡಗಳ ಯಶಸ್ವಿಗಾಗಿ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಸವಣೂರು ವಲಯದ ಸವಣೂರು ವ್ಯಾಪ್ತಿಯಿಂದ ರಾಕೇಶ್ ರೈ ಕೆಡೆಂಜಿ, ಸರ್ವೆ, ಭಕ್ತಕೋಡಿ ವ್ಯಾಪ್ತಿಯಿಂದ ರಾಧಾಕೃಷ್ಣ ರೈ, ಬೆಳಂದೂರು ವ್ಯಾಪ್ತಿಯಿಂದ ವೇಣುಗೋಪಾಲ ಕಳುವಾಜೆ, ಕಾಣಿಯೂರು ವ್ಯಾಪ್ತಿಯಿಂದ ಗಣೇಶ್ ಉದುನಡ್ಕ, ಪುಣ್ಚಪ್ಪಾಡಿ ವ್ಯಾಪ್ತಿಯಿಂದ ಸೇಷಮ್ಮ ಇವರನ್ನು ಆಯ್ಕೆ ಮಾಡಲಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…