Advertisement
ಸುದ್ದಿಗಳು

ವಿವೇಕಾನಂದ ಕಾಲೇಜಿನಲ್ಲಿ ಮೀಡಿಯಾ ವಿವೇಕ್ 2020 ಪ್ರತಿಭೋತ್ಸವ

Share

ಪುತ್ತೂರು: ವಿದ್ಯಾರ್ಥಿಗಳಿಗೆ ಇಂದು ಕಲಿಕೆಗೆ ಆಧುನಿಕ ಮಾಧ್ಯಮದಲ್ಲಿ ಅಪಾರ ವೇದಿಕೆಗಳಿವೆ. ಆದರೆ ಅದಕ್ಕೆ ಶ್ರದ್ಧೆ ಮತ್ತು ತಯಾರಿ ಮುಖ್ಯ. ನಮ್ಮ ಗುರಿಗೆ ಪೂರಕವಾಗುವಂತೆ ಪೂರ್ವ ತಯಾರಿ ಮಾಡಿಕೊಂಡರೆ ಸಾಧನೆ ಮಾಡಲು ಸಾಧ್ಯ. ಕಲಿಕೆಯ ಹಂತದಲ್ಲಿ ಭವಿಷ್ಯದ ಸಿದ್ಧತೆ ನಡೆಸಿಕೊಂಡರೆ ಬದುಕು ಯಶಸ್ಸು ಕಾಣಲು ಸಾಧ್ಯ ಎಂದು ಕಲರ್ಸ್ ಕನ್ನಡ ವಾಹಿನಿಯ ನಟ ಹಾಗೂ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ರಾಕೇಶ್ ಮಯ್ಯ ಹೇಳಿದರು.

Advertisement
Advertisement
Advertisement

ಅವರು ವಿವೇಕಾನಂದ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ರಾಜ್ಯಮಟ್ಟದ ‘ಮೀಡಿಯಾ ವಿವೇಕ್ 2020’ ಎಂಬ ಪ್ರತಿಭೋತ್ಸವವನ್ನು ಉದ್ಘಾಟಿಸಿ  ಮಾತನಾಡಿದರು. ಮಾಧ್ಯಮ ಅನ್ನುವುದು ಬಹುದೊಡ್ಡ ಸಾಗರ. ಮಾಧ್ಯಮದ ಸಂಗತಿಗಳನ್ನು ಕೆಲವು ನಿಮಿಷಗಳ ಮಾಆತಿನಿಂದ ತಿಳಿಸಿಕೊಡುವುದು ಕಷ್ಟ. ಆ ಸಾಗರದೊಳಗೆ ಅಡಿಯಿಟ್ಟಾಗ ಒಂದೊಂದೇ ಸಂಗತಿಗಳು ಅರಿವಾಗುತ್ತಾ ಹೋಗುತ್ತದೆ. ಕುತೂಹಲದಿಂದ ಮಾಧ್ಯಮ ಲೋಕಕ್ಕೆ ಅಡಿ ಇಡುವವರಿಗೆ ಅಸಂಖ್ಯ ವಿಚಾರಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಸಾಧಿಸುವ ಹಂಬಲ, ಮೂಲ ಜ್ಞಾನದೊಂದಿಗೆ ವಿದ್ಯಾರ್ಥಿಗಳು ಮುಂದೆ ಬಂದರೆ ಸಾಧ್ಯತೆಗಳು ವಿಸ್ತಾರಗೊಳ್ಳುತ್ತವೆ ಎಂದರು.

Advertisement

ಮುಖ್ಯ ಅತಿಥಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಮಾತನಾಡಿ, ಪತ್ರಿಕೋದ್ಯಮ ವಿಭಾಗ ಹಲವು ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುಕೊಂಡು ಬರುತ್ತಿದೆ. ಇಂತಹ ಉತ್ಕೃಷ್ಟ ಕಾರ್ಯಕ್ರಮಗಳಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣವಾಗುತ್ತದೆ. ಮುಂದೆ ಜೀವನದ ದಾರಿಗೆ ಈ ಸ್ಪರ್ಧೆಗಳಲ್ಲಿ ಪಡೆದ ಅನುಭವ ಕೆಲಸಕ್ಕೆ ಬರುತ್ತದೆ ಇದರಿಂದ ಯಶಸ್ಸು ಪಡೆಯಬಹುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಹಲವು ವಿನೂತನವಾಗಿ ನಿರಂತರ ಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನು ಧಾರೆ ಎರೆಯುತ್ತಿದೆ. ಇಂದು ಮಾಧ್ಯಮ ಎನ್ನುವುದು ವಿಶ್ವದ ಕಣ್ಣು ಎಂದು ವ್ಯಾಖ್ಯಾನಿಸಬಹುದು. ಸಮಾಜಕ್ಕೆ ಬೇಕಾದ ಹಾಗೂ ಸಮಾಜದಲ್ಲಿ ಆಗಬೇಕಾದ ಕೆಲಸವನ್ನು ತೋರಿಸುತ್ತದೆ. ಮಾಧ್ಯಮಗಳು ಋಣಾತ್ಮಕ ಸುದ್ದಿಯನ್ನು ಪಸರಿಸುವ ಮೊದಲು ತಾವೂ ಕೂಡ ಕೆಲಸ ಮಾಡುವ ಬದಲು ಧನಾತ್ಮಕ ಸುದ್ದಿ ಅಥವಾ ಸಂಗತಿಯನ್ನು ತಿಳಿಸಬೇಕು ಎಂದರು.

Advertisement

ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಡಾ. ಶ್ರೀಧರ ಎಚ್.ಜಿ. ಮಾತನಾಡಿ, ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಧನಾತ್ಮ ಚಿಂತನೆಗಳನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಬೇಕಾದ ಪತ್ರಿಕೆ, ಮ್ಯಾಗಜಿನ್, ವಿಕಸನ ಟಿವಿ, ಸಾಕ್ಷ್ಯ ಚಿತ್ರ ಹೀಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ರಾಜ್ಯ ಇತರೆ ಪತ್ರಿಕೋದ್ಯಮ ವಿಭಾಗ ಕಾರ್ಯನಿರ್ವಹಿಸುವುದಕ್ಕಿಂತ ಮಿಗಿಲಾಗಿ ಕಾರ್ಯಪ್ರವೃತ್ತವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅಪಾರ ಅನುಭವಗಳು ವಿದ್ಯಾರ್ಥಿಗಳದಾಗುತ್ತಿದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಮಾಧ್ಯಮ ರಂಗ ಭ್ರಮಾ ಲೋಕದಲ್ಲಿರಬಾರದು. ಮಾಧ್ಯಮಗಳು ತಾವು ಪಸರಿಸುವ ವಿಷಯಗಳೇ ಕಟ್ಟಕಡೆಯದ್ದು ಎನ್ನುವ ಮೂಲಕ ಸಮಾಜವನ್ನು ಕಾಣುವುದಕ್ಕೆ ಹೊರಟರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರೊಂದಿಗೆ ಸಂವೇದನೆಯ ಕೊರತೆಯೂ ಮಾಧ್ಯಮಗಳಲ್ಲಿ ಕಾಣುತ್ತಿದೆ. ಮಾಧ್ಯಮಗಳು ಋಣಾತ್ಮಕ ವಿಷಯವನ್ನು ಕೇಂದ್ರೀಕರಿಸಿ, ಅದನ್ನೇ ವೈಭವೀಕರಿಸಿ ಮುಂದುವರೆಯಬಾರದು. ಹರೇಕಳ ಹಾಜಬ್ಬರಂತಹವರನ್ನು ಗುರುತಿಸಿದ್ದೂ ಒಂದು ಮಾಧ್ಯಮ. ಅಂತಹ ಮಾಧ್ಯಮ ಬೇಕಾಗಿದೆ ಎಂದು ನುಡಿದರು.

Advertisement

ವಿದ್ಯಾರ್ಥಿನಿ ರಚನ ಪ್ರಾರ್ಥಿಸಿದರು. ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿಗಳಾದ ಧನ್ಯಾ ಮತ್ತು ಲಿಖಿತಾ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 25-11-2024 | ಒಣ ಹವೆ ಮುಂದುವರಿಕೆ | ನವೆಂಬರ್ ಕೊನೆಯ ತನಕವೂ ಮಳೆಯ ಸಾಧ್ಯತೆ ಇಲ್ಲ |

26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

4 hours ago

ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…

12 hours ago

ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ

ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…

12 hours ago

ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…

12 hours ago

ಅಡಿಕೆಯಲ್ಲಿ ಮಿಶ್ರ ಬೆಳೆ ಏಕೆ..? ಹೇಗೆ ಮತ್ತು ಯಾವ ಬೆಳೆಯನ್ನು ಮಾಡಬಹುದು..?

ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…

13 hours ago