ಪುತ್ತೂರು: ಮಹತ್ತರವಾದ ಸಾಹಿತ್ಯಗಳು ಮೂಡಿಬರಲು, ದಾಸರ ಮೂಲಕ ಸಂಕೀರ್ತನೆಯಾಗಿ ರಚನೆಯಾಗಲು, ಭಗವಂತನೇ ಶಕ್ತಿಯನ್ನು ನೀಡಿದ್ದಾನೆ. ವೇದದ ಸಾರವನ್ನು ದಾಸರ ಮೂಲಕ ಸಾರಿದ್ದಾನೆ. ಅದರ ಸಾರವನ್ನು ತಿಳಿದು ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ. ಭಜನೆಯೊಂದಕ್ಕೆ ದೇವರನ್ನು ತಲುಪುವ ಶಕ್ತಿಯಿದೆ. ಅಂತಹ ಭಗವಂತನ ನಾಮದ ಮೆಲುಕು ಹಾಕುವುದರಿಂದ ಧನ್ಯತೆಯನ್ನು ಪಡೆಯಬಹುದು. ಇಂತಹ ಒಂದು ಮಹತ್ತರವಾದ ಕಾರ್ಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಯೋಜಿಸಲ್ಪಟ್ಟ 38ನೇ ವರುಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ದಾಸ ಸಂಕೀರ್ತನೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ನಡೆಯಿತು.
ವಿಘ್ನವಿನಾಶಕನ ಸುತ್ತಿಯೊಂದಿಗೆ ದಾಸ ಸಂಕೀರ್ತನೆಯು ಆರಂಭಗೊಡಿತು. ‘ಗಜಾನನ ಗಜಾನನ ಪಾರ್ವತಿ ಸುತ’ ಎಂದು ವಿನಾಶಕನನ್ನು ಸ್ತುತಿಸುತ್ತಾ ಬಂದ ಭಕ್ತರಲ್ಲಿ ಧನ್ಯತೆಯನ್ನು ತುಂಬುತ್ತ, ನೇರ ಭಕ್ತರು ವಿಘ್ನವಿನಾಶಕನ ಸುತ್ತಿಗೆ ಭಾಗಿಗಳಾಗುವಂತೆ ಮಾಡಿತು. ‘ಬಾರೋ ರಾಘವೇಂದ್ರ’ ಎಂದು ನೀನು ವಿನಾಶಕನೊಂದಿಗೆ ಬಂದು ಭಕ್ತರನ್ನು ಸಲಹು ಎಂದು ಬೇಡಿಕೊಳ್ಳಲಾಯಿತು. ‘ಬಾರೆ ಮಣಿ ತನಕ’, ‘ರಂಗಾ ಕೃಷ್ಣಯ್ಯನೇ ಬಾರಯ್ಯ’, ‘ಕಣ್ಣಿನೊಳಗೆ ನೋಡು ಒಳಗಣ್ಣಿನೊಳಗೆ ನೋಡು’ ಎಂದು ಭಕ್ತಿಯಿಂದ ಮಾತ್ರ ದೇವರನ್ನು ತಲುಪಲು ಸಾಧ್ಯ ಎಂದು ಸ್ತುತಿಸುತ್ತಾ ‘ಲಂಕೆ ಹರಿದ ಹನುಮಂತ’ ಹನುಮನ ರಾಮ ಭಕ್ತಿಯನ್ನು ಚಿತ್ರಿಸಿದರು. ‘ಎನ್ನ ಬಿಟ್ಟು ನೀ ಅಗಲದಿರು ಶ್ರೀನಿವಾಸ’ ಎನ್ನುವ ಹಾಡಿನ ಮೂಲಕ ಶ್ರೀನಿವಾಸನನ್ನು ಧ್ಯಾನಿಸಿದರು. ಈ ದಾಸ ಸಂಕೀರ್ತನೆಯ ಹಿಮ್ಮೇಳದಲ್ಲಿ ಕಿಶೋರ್ ಪಲ್ಯ ಮೃದಂಗದಲ್ಲಿ ಹಾಗೂ ತಬಲದಲ್ಲಿ ಗಿರೀಶ್ ಪೆರ್ಲ ಸಹಕರಿಸಿದರು.
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …