ಮ್ಯಾಂಚೆಸ್ಟರ್: ಪ್ತಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹೋರಾಟದಲ್ಲಿ ಮಂಗಳವಾರ ಎದುರಾಗಲಿವೆ.
ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಹೈವೋಲ್ಟೇಜ್ ಕದನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಮಧ್ಯಾಹ್ನ ಮೂರಕ್ಕೆ ಆರಂಭವಾಗಲಿದೆ. ಭಾರತದ ಬಲಿಷ್ಠ ಬ್ಯಾಟಿಂಗ್ ಹಾಗೂ ಕಿವೀಸ್ ವೇಗಿಗಳ ನಡುವಿನ ಕದನವೆಂದೇ ಈ ಪಂದ್ಯವನ್ನು ವಿಶ್ಲೇಷಿಸಲಾಗುತ್ತಿದೆ. ಉಭಯ ತಂಡಗಳ ನಡುವಿನ ಲೀಗ್ ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಇದು ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಕಾದಾಟವಾಗಿದೆ. ವಿರಾಟ್ ಕೊಹ್ಲಿ ಪಡೆ ಲೀಗ್ ಹಂತದಲ್ಲಿ 7 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ಗೇರಿದ್ದರೆ, ಲೀಗ್ ಹಂತದಲ್ಲಿ ಕಡೇ ಮೂರು ಪಂದ್ಯಗಳಲ್ಲಿ ಸೋಲು ಕಂಡರೂ ರನ್ರೇಟ್ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಸೆಮಿ ಫೈನಲ್ ಗೇರಿದೆ.
ಭಾರತದ ಪಾಲಿಗೆ ರನ್ವೆುಷಿನ್ ಆಗಿರುವ ರೋಹಿತ್ ಶರ್ಮ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಸದ್ಯ 8 ಇನಿಂಗ್ಸ್ಗಳಿಂದ 647 ರನ್ ಬಾರಿಸಿರುವ ರೋಹಿತ್ ಇನ್ನು 27 ರನ್ ಸಿಡಿಸಿದರೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ (673) ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಸಚಿನ್ ತೆಂಡುಲ್ಕರ್ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದರೆ, 2007ರ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 659 ರನ್ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಎದುರು 53 ರನ್ ಬಾರಿಸಿದರೆ ವಿಶ್ವಕಪ್ನಲ್ಲಿ 700ರ ರನ್ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಲಿದ್ದಾರೆ. ಜತೆಗೆ 23 ರನ್ ಗಳಿಸಿದರೆ ವಿಶ್ವಕಪ್ನಲ್ಲಿ ಸಾವಿರ ರನ್ ಗಡಿ ದಾಟಲಿದ್ದಾರೆ.
ಲೀಗ್ ಹಂತದಲ್ಲಿ ನ್ಯೂಜಿಲೆಂಡ್ನ ಐದು ಗೆಲುವುಗಳು ಚೇಸಿಂಗ್ ಮೂಲಕವೇ ಬಂದಿತ್ತು. ಇದರಲ್ಲಿ ಬೌಲರ್ಗಳ ಪಾತ್ರವೇ ಪ್ರಮುಖವಾಗಿತ್ತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಭಾರತದ ಎದುರು ಕಿವೀಸ್ ಬೌಲರ್ಗಳಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ. 5 ಶತಕಗಳ ಸಾಧಕ ರೋಹಿತ್ ಶರ್ಮ (647), ಕನ್ನಡಿಗ ಕೆಎಲ್ ರಾಹುಲ್ (360) ಹಾಗೂ ನಾಯಕ ವಿರಾಟ್ ಕೊಹ್ಲಿ (442) ಒಳಗೊಂಡ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕಿವೀಸ್ ಬೌಲರ್ಗಳ ನಿದ್ದೆಗೆಡಿಸಿದೆ. ಈ ಮೂವರೇ ಇದುವರೆಗೂ 1447 ರನ್ ಪೇರಿಸಿದ್ದಾರೆ. ಇದರಿಂದ ಭಾರತಕ್ಕೆ ಧೋನಿ, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರಿಷಭ್ ಪಂತ್ ಒಳಗೊಂಡ ಮಧ್ಯಮ ಕ್ರಮಾಂಕ ತಂಡಕ್ಕೆ ಸಂಕಷ್ಟ ಎದುರಾದರೆ ಆಸರೆಯಾಗಬೇಕಿದೆ. ವೇಗದ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಮೊಹಮದ್ ಶಮಿ ಭಾರತದ ಬೌಲಿಂಗ್ ಬ್ರಹ್ಮಾಸ್ತ್ರಗಳಾಗಿದೆ. ಜೊತೆಗೆ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಅಥವಾ ಯೂಸವೇಂದ್ರ ಚಾಹಲ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಕಿವೀಸ್ ತಂಡದಲ್ಲಿ ಬಹುತೇಕ ಬಲಗೈ ಬ್ಯಾಟ್ಸ್ಮನ್ಗಳೇ ಇರುವುದರಿಂದ ಎಡಗೈ ಸ್ಪಿನ್ನರ್ ಕುಲದೀಪ್ಗೆ ಮಣೆ ಹಾಕಬಹುದು. ಮತ್ತೋರ್ವ ಎಡಗೈ ಸ್ಪಿನ್ನರ್ಗೆ ಮಣೆಹಾಕಿದರೆ ಜಡೇಜಾ ಅವರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗುತ್ತದೆ.
8ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿರುವ ನ್ಯೂಜಿಲೆಂಡ್ ತಂಡಕ್ಕೆ ಬ್ಯಾಟಿಂಗ್ ವಿಭಾಗದ್ದೇ ತಲೆನೋವಾಗಿದೆ. ಬೌಲರ್ಗಳು ಸಮರ್ಥ ದಾಳಿ ಮೂಲಕ ಪಂದ್ಯಕ್ಕೆ ಜೀವ ತುಂಬುತ್ತಿದ್ದರೂ ನಾಯಕ ಕೇನ್ ವಿಲಿಯಮ್ಸನ್ ಹೊರತುಪಡಿಸಿ ಇತರ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡುಬರುತ್ತಿಲ್ಲ.
ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಬಲಿಷ್ಠ ಶಕ್ತಿಯಾಗಿರುವ ರೋಹಿತ್ ಶರ್ಮ ಹಾಗೂ ಬೌಲಿಂಗ್ ವಿಭಾಗದಲ್ಲಿ ಕಿವೀಸ್ನ ಪ್ರಧಾನ ಅಸ್ತ್ರವಾಗಿರುವ ಟ್ರೆಂಟ್ ಬೌಲ್ಟ್ ಮುಖಾಮುಖಿ ಸೆಮಿಫೈನಲ್ನ ಹೈಲೈಟ್ ಆಗಲಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.
ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಮಳೆಯಿಂದ ಪಂದ್ಯ ರದ್ದುಗೊಂಡರೆ ಹೆಚ್ಚುವರಿ ದಿನವಾದ ಬುಧವಾರ ನಡೆಯಲಿದೆ. ಬುಧವಾರವೂ ಪಂದ್ಯ ರದ್ದಾದರೆ ಲೀಗ್ ಹಂತದಲ್ಲಿ ಹೆಚ್ಚು ಅಂಕ ಪಡೆದಿರುವ ಆಹಾರದಲ್ಲಿ ಭಾರತ ಪೈನಲ್ ಗೇರಲಿದೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490