Advertisement
ಕೃಷಿ

ವಿಷಮುಕ್ತ ತರಕಾರಿ ಸೇವನೆಗೆ ಕೈತೋಟ ಮತ್ತು ತಾರಸಿ ತೋಟ ಸಹಕಾರಿ

Share

ಮಂಗಳೂರು: ನಗರದಲ್ಲಿದ್ದರೂ, ಗ್ರಾಮೀಣದಲ್ಲಿದ್ದರೂ ತರಕಾರಿ ಹಾಗೂ ಆಹಾರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಇವುಗಳಿಗೆ ಮೂಲ ಆಧಾರವಾಗಿರುವುದು ಕೃಷಿ. ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯು ಮಾಯವಾಗಿ ನಗರದ ವಿಸ್ತೀರ್ಣ ಹೆಚ್ಚಾಗಿರುವಂತೆಯೇ ಉತ್ತಮ ಜೀವನ ಮಟ್ಟವನ್ನು ನಿರೀಕ್ಷಿಸಿ ಯುವ ರೈತರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

Advertisement
Advertisement

ಇತ್ತೀಚಿನ ದಿನಗಳಲ್ಲಿ ತರಕಾರಿಗೆ ಹೆಚ್ಚಿನ ಬೇಡಿಕೆ, ಉತ್ತಮ ಬೆಲೆ ಸಿಗುವುದರಿಂದ ರೈತರು ಹೆಚ್ಚು ಇಳುವರಿ ನೀಡುವ ಸುಧಾರಿತ ಮತ್ತು ಹೈಬ್ರಿಡ್ ತಳಿಗಳನ್ನು ಬೆಳೆಸುತ್ತಿದ್ದಾರೆ. ಈ ತಳಿಗಳು ಶೀಘ್ರವಾಗಿ ಕೀಟ-ರೋಗಕ್ಕೆ ತುತ್ತಾಗುವುದರಿಂದ ನಿವಾರಣೆಗೆ ಅಧಿಕ ಪ್ರಮಾಣದಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಗರವಾಸಿಗಳು ಸ್ವಯಂಪ್ರೇರಿತವಾಗಿ ಸಾಧ್ಯವಾದ ಎಲ್ಲಾ ರೀತಿಯ ತರಕಾರಿ ಮತ್ತು ಇತರೆ ಬೆಳೆಗಳನ್ನು ಬೆಳೆಯುವುದೇ ಇದಕ್ಕೆಲ್ಲಾ ಇರುವ ಪರಿಹಾರ.
ಒಂದು ಕುಟುಂಬಕ್ಕೆ ಬೇಕಾಗುವ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಪಡೆಯಲು ತಮ್ಮ ಮನೆಯ ಆವರಣ-ಹಿತ್ತಲಲ್ಲಿ ಬೆಳೆಸುವ ತೋಟವನ್ನು ಕೈತೋಟ ಎಂದು ಕರೆಯುತ್ತೇವೆ.

Advertisement

ಕೈತೋಟ ಮಾಡಲು ಸ್ಥಳ ಇಲ್ಲದೇ ಇರುವ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ, ಗ್ರೋಬ್ಯಾಗ್‍ಗಳಲ್ಲಿ ಸುಲಭವಾಗಿ ತರಕಾರಿ ಹಣ್ಣುಗಳನ್ನು ಬೆಳೆಯುವುದೇ ತಾರಸಿ ತೋಟ.

ತಾರಸಿ ತೋಟದ ಕುಂಡಗಳಲ್ಲಿ-ಗ್ರೋಬ್ಯಾಗ್‍ಗಳಲ್ಲಿ ತುಂಬುವ ಮಿಶ್ರಣ ತಯಾರಿಸುವ ವಿಧಾನ ಈ ಕೆಳಕಂಡಿರುತ್ತದೆ. ಮಣ್ಣು, ಮರಳು ಅಥವಾ ಕೋಕೋಪಿಟ್ ಮತ್ತು ಕಾಂಪೋಸ್ಟ್-ಬಯೋಮಿಕ್ಸ್ ಅನ್ನು 1:1:1 ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳುವುದು. ಈ ಮಿಶ್ರಣವನ್ನು ಕುಂಡಗಳಲ್ಲಿ-ಗ್ರೋಬ್ಯಾಗ್‍ಗಳಲ್ಲಿ ತುಂಬಿಸಿ ಬೀಜಗಳನ್ನು ಅಥವಾ ಸಸಿಗಳನ್ನು ನಾಟಿ ಮಾಡಿ, ದಿನಾಲೂ ನೀರು ಹಾಕುವುದು. ಬಳ್ಳಿಗಳು ಇರುವ ತರಕಾರಿಗೆ ಚೆನ್ನಾಗಿ ಹರಡಿಕೊಳ್ಳಲು ಆಧಾರಕೋಲು ಕೊಡುವುದು.

Advertisement

ಕೈತೋಟ ಮತ್ತು ತಾರಸಿ ತೋಟ ಬೆಳೆಸುವಾಗ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಮಹತ್ವನ್ನು ನೀಡಿ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ತೋಟವನ್ನು ಮಾಡಬೇಕಾಗುವುದು.
ಮುಖ್ಯವಾಗಿ ತರಕಾರಿ ಬೆಳೆಯುವಾಗ ಗಮನದಲ್ಲಿ ಇರಬೇಕಾದ ಅಂಶಗಳೇನೆಂದರೆ ಗಿಡಗಳಿಗೆ ಅಗತ್ಯಕ್ಕಿಂತ ಜಾಸ್ತಿ ನೀರು ಕೊಡಬಾರದು, ಗಿಡಗಳಿಗೆ ಸಾಧ್ಯವಾದಷ್ಟು ಬಿಸಿಲು ಬೀಳುವಂತೆ ನೋಡಿಕೊಳ್ಳಬೇಕು, ತರಕಾರಿ ಗಿಡಗಳಲ್ಲಿ ರೋಗದ ಲಕ್ಷಣ ಪ್ರಥಮ ಬಾರಿಗೆ ಕಂಡ ಕೂಡಲೇ ಅದನ್ನು ಅಲ್ಲಿಂದ ದೂರಕ್ಕೆ ಸ್ಥಳಾಂತರಿಸಬೇಕು ಹಾಗೂ ಬೇವಿನ ಸತ್ವದ ದ್ರಾವಣವನ್ನು ಬಳಸಿ ಪೀಡೆ ನಿವಾರಣೆಗೆ ಆದ್ಯತೆ ನೀಡಬೇಕು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ್ ಮಂಗಳೂರು ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

6 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

6 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

7 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

7 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

10 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

10 hours ago