ಪುತ್ತೂರು: ವಿಷ ರಹಿತ ಆಹಾರಕ್ಕೆ ಇಂದು ಬೇಡಿಕೆ ಹೆಚ್ಚಾಗಿದೆ. ವಿಷ ರಹಿತ ಊಟ ಮಾಡುವ ದಿನಕ್ಕಾಗಿ ದೇಶದ ಜನ ಕಾಯುತ್ತಿದ್ದಾರೆ. ಈ ಬೇಡಿಕೆ ಪೂರೈಕೆಗೆ ಕೃಷಿಕರು ಸಜ್ಜಾಗಬೇಕು ಎಂದು ಸಾವಯವ ಕೃಷಿ ಮಿಶನ್ ಅಧ್ಯಕ್ಷ ಆ ಶ್ರೀ ಆನಂದ ಹೇಳಿದರು.
ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನವಚೇತನ ಸ್ನೇಹಸಂಗಮ, ಜೇಸಿಐ ಪುತ್ತೂರು ವತಿಯಿಂದ ನಡೆಯುವ 2 ದಿನಗಳ ಸಾವಯವ ಹಬ್ಬ ಉದ್ಘಾಟಿಸಿ ಮಾತನಾಡಿದರು. ಇಂದು ಕಾಯಿಲೆ ಹೊತ್ತ ಮನೆಗಳ ಸಂಖ್ಯೆ ಹೆಚ್ಚಾಗುವುದು ಏಕೆ ? ಕಾಯಿಲೆಗಳು ಬರುವುದೇಕೆ ?
ಊಟದ ಬಟ್ಟಲು ವಿಷವಾಗಲು ಕಾರಣ ವಿಷ ಸಿಂಪಡಣೆ ಕಾರಣವಾಗಿದೆ. ಇದರ ಬದಲಾವಣೆಗೆ
ಸರಕಾರ, ಸಂಘಸಂಸ್ಥೆಗಳಿಂದಲೇ ಸಾಧ್ಯವಿಲ್ಲ, ಕೃಷಿಕರಿಂದ ಮಾತ್ರಾ ಸಾಧ್ಯ ಎಂದರು.ಈ ಬಗ್ಗೆ
ಗಂಭೀರ ಯೋಚನೆ ಅಗತ್ಯ ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ ದೇಶ ಜನರ ಆರೋಗ್ಯ ಕಾಪಾಡುವಲ್ಲಿ ಕೃಷಿಕರ ಪಾತ್ರ ಬಹುಮುಖ್ಯವಾಗಿದೆ.ಸಾವಯವ ಕೃಷಿ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕಾಗಿದೆ ಎಂದರು.
ಈ ಸಂದರ್ಭ ನಾ.ಕಾರಂತ ಪೆರಾಜೆ ಅವರ ಜೀವಧಾನ್ಯ ಕೃತಿ ಲೋಕಾರ್ಪಣೆ ಮಾಡಲಾಯಿತು.
ಇದೇ ವೇಳೆ ನವತೇಜ ಟ್ರಸ್ಟ್ ಗೆ ಚಾಲನೆ ನೀಡಲಾಯಿತು. ಭತ್ತದ ಕೃಷಿಕ ದಂಪತಿಗಳಾದ ಉಷಾ ಮೆಹಂದಳೆ ಮತ್ತು ಸೀತಾರಾಮ ಮೆಹಂದಳೆ ಅವರನ್ನು ಸನ್ಮಾನಿಸಲಾಯಿತು.
ಜೇಸಿಐ ವಲಯ ಸಂಯೋಜಕರಾದ ಬಾದ್ ಶಾ ಸಂಬಾರತೋಟ,ಕೃಷಿಕರಾದ ಉಷಾ ಮೆಹಂದಳೆ ಮಾತನಾಡಿದರು.
ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಟ್ರಸ್ಟ್ ಬಗ್ಗೆ ಮಾತನಾಡಿದರು.
ಸುದಾನ ಶಿಕ್ಷಣ ಸಂಸ್ಥೆ ಸಂಚಾಲಕ ವಿಜಯ ಹಾರ್ವಿನ್ ಸಭಾಧ್ಯಕ್ಷತೆ ವಹಿಸಿದ್ದರು.
ನವಚೇತನ ಸ್ನೇಹ ಸಂಗಮ ಕಾರ್ಯದರ್ಶಿ ಸುಹಾಸ ಮರಿಕೆ ಸ್ವಾಗತಿಸಿದರು. ಕೃತಿಯ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಜೇಸಿಐ ಉಪಾಧ್ಯಕ್ಷ ನವೀನ್ ಕೊಯಿಲ ವಂದಿಸಿದರು.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…