Advertisement
Exclusive - Mirror Hunt

ಅಡಿಕೆಕೊಯ್ಲು ಮತ್ತು ಬೋರ್ಡೊದ್ರಾವಣ ಸಿಂಪಡಣೆಗೆ ಹೈಟೆಕ್‍ ದೋಂಟಿ: ಧರ್ಮಸ್ಥಳದಲ್ಲಿ ಪ್ರಾತ್ಯಕ್ಷಿಕೆ

Share

ಧರ್ಮಸ್ಥಳ: ಅಡಿಕೆಕೊಯ್ಲು ಮತ್ತು ಬೋರ್ಡೊದ್ರಾವಣ ಸಿಂಪಡಣೆಗೆ ಅಮೇರಿಕಾದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಅವರು ಸುಧಾರಿತ ಹೈಟೆಕ್‍ದೋಂಟಿ ಸಂಶೋಧನೆ ಮಾಡಿದ್ದು  ಶುಕ್ರವಾರ ಧರ್ಮಸ್ಥಳದಲ್ಲಿರುವ ಹರ್ಪಾಡಿತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈ ವರೆಗೆ ಲಭ್ಯಇರುವಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿ ಉಪಯೋಗಿಸಬಹುದು. ಕ್ಯಾಂಪ್ಕೋದ ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ದೋಂಟಿ ಬಳಕೆಗೆ ಸೂಕ್ತ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುವುದು.ರೈತರಗೆ ಇದು ವರದಾನವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದಿಸಿದರು.

 

ದೋಂಟಿ ಸಂಶೋಧಕಹಾಗೂ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಮಾತನಾಡಿ, ಮಲೆನಾಡು ಪ್ರದೇಶದ ತೋಟಗಳಲ್ಲಿ ಈಗಾಗಲೆ ಇಪ್ಪತ್ತಕ್ಕೂ ಹೆಚ್ಚು ಇಂತಹ ದೋಂಟಿಗಳು ಬಳಕೆಯಲ್ಲಿವೆ. ಇದರಿಂದಾಗಿ ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೆ ತಿಂಗಳಿಗೆ 70,000ರೂ. ಉಳಿತಾಯವಾಗುತ್ತದೆ ಎಂದು ಹೇಳಿದರು.
ಪ್ರಸಕ್ತದೋಂಟಿಯ ಬೆಲೆ 80,000ರೂ.ಆಗಿದ್ದು ಮುಂದೆರೈತರಿಗೆಕೈಗೆಟಕುವ ಮಿತದರದಲ್ಲಿ ಸಾಧಾರಣ ಹತ್ತು ಸಾವಿರರೂ.ಗೆದೊರಕುವಂತೆ ಮಾಡಲಾಗುವುದುಎಂದು ಬಾಲಸುಬ್ರಹ್ಮಣ್ಯ ಭರವಸೆ ನೀಡಿದರು.

ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತುಕೃಷಿ ವಿಭಾಗದಮುಖ್ಯಸ್ಥ ಬಿ.ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ದೋಂಟಿಯ ವಿಶೇಷತೆಗಳು:

• ಅಡಿಕೆ ಮರಏರದೆಕೊಯ್ಲು ಹಾಗೂ ಔಷಧಿ ಸಿಂಪಡಣೆ ಮಾಡಬಹುದು.
• 60 ರಿಂದ 80 ಅಡಿ ಎತ್ತರದದೋಂಟಿಅಗತ್ಯಕ್ಕೆ ಬೇಕಾದಷ್ಟು ಎತ್ತರಿಸಿ ಲಾಕ್ ಮಾಡುವ ವ್ಯವಸ್ಥೆ.
• ನಿಂತಲ್ಲೆ 360 ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಔಷಧಿ ಸಿಂಪಡಣೆ ಸಾಧ್ಯ.
• ಫೈಬರ್  ತಂತ್ರಜ್ಞಾನ ಬಳಕೆ.  20 ವರ್ಷ ಬಾಳಿಕೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

12 hours ago

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು

ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…

12 hours ago

ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ

ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…

12 hours ago

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

18 hours ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

22 hours ago

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…

22 hours ago