Advertisement
ಸುದ್ದಿಗಳು

ವಿಷ ರಹಿತ ಆಹಾರದ ಅಹವಾಲಿಗೆ ದೇಶ ಕಾಯುತ್ತಿದೆ – ಆ ಶ್ರೀ ಆನಂದ್

Share

ಪುತ್ತೂರು: ವಿಷ ರಹಿತ‌ ಆಹಾರಕ್ಕೆ ಇಂದು‌ ಬೇಡಿಕೆ ಹೆಚ್ಚಾಗಿದೆ. ವಿಷ ರಹಿತ ಊಟ ಮಾಡುವ ದಿನ‌ಕ್ಕಾಗಿ ದೇಶದ ಜನ ಕಾಯುತ್ತಿದ್ದಾರೆ. ಈ ಬೇಡಿಕೆ ಪೂರೈಕೆಗೆ ಕೃಷಿಕರು ಸಜ್ಜಾಗಬೇಕು ಎಂದು‌ ಸಾವಯವ ಕೃಷಿ ಮಿಶನ್ ಅಧ್ಯಕ್ಷ ಆ ಶ್ರೀ ಆನಂದ ಹೇಳಿದರು.

ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ‌ ವೇದಿಕೆಯಲ್ಲಿ ನವಚೇತನ ಸ್ನೇಹಸಂಗಮ,‌ ಜೇಸಿಐ ಪುತ್ತೂರು ವತಿಯಿಂದ ನಡೆಯುವ 2 ದಿನಗಳ ಸಾವಯವ ಹಬ್ಬ ಉದ್ಘಾಟಿಸಿ ಮಾತನಾಡಿದರು. ಇಂದು ಕಾಯಿಲೆ ಹೊತ್ತ ಮನೆಗಳ ಸಂಖ್ಯೆ ಹೆಚ್ಚಾಗುವುದು ಏಕೆ ? ಕಾಯಿಲೆಗಳು ಬರುವುದೇಕೆ ?
ಊಟದ ಬಟ್ಟಲು ವಿಷವಾಗಲು ಕಾರಣ ವಿಷ ಸಿಂಪಡಣೆ ಕಾರಣವಾಗಿದೆ. ಇದರ‌ ಬದಲಾವಣೆಗೆ
ಸರಕಾರ, ಸಂಘಸಂಸ್ಥೆಗಳಿಂದಲೇ ಸಾಧ್ಯವಿಲ್ಲ,‌ ಕೃಷಿಕರಿಂದ ಮಾತ್ರಾ ಸಾಧ್ಯ ಎಂದರು.‌ಈ ಬಗ್ಗೆ
ಗಂಭೀರ ಯೋಚನೆ ಅಗತ್ಯ ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ ದೇಶ ಜನರ ಆರೋಗ್ಯ ಕಾಪಾಡುವಲ್ಲಿ ಕೃಷಿಕರ ಪಾತ್ರ ಬಹುಮುಖ್ಯವಾಗಿದೆ.‌ಸಾವಯವ ಕೃಷಿ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿ ‌ಸಾಗಬೇಕಾಗಿದೆ ಎಂದರು.
ಈ ಸಂದರ್ಭ ನಾ.ಕಾರಂತ ಪೆರಾಜೆ‌ ಅವರ ಜೀವಧಾನ್ಯ ಕೃತಿ ಲೋಕಾರ್ಪಣೆ ಮಾಡಲಾಯಿತು.

ಇದೇ ವೇಳೆ ನವತೇಜ ಟ್ರಸ್ಟ್‌ ಗೆ ಚಾಲನೆ ನೀಡಲಾಯಿತು. ಭತ್ತದ ಕೃಷಿಕ ದಂಪತಿಗಳಾದ ಉಷಾ ಮೆಹಂದಳೆ ಮತ್ತು ಸೀತಾರಾಮ‌ ಮೆಹಂದಳೆ ಅವರನ್ನು‌ ಸನ್ಮಾನಿಸಲಾಯಿತು.

ಜೇಸಿಐ ವಲಯ ಸಂಯೋಜಕರಾದ ಬಾದ್ ಶಾ ಸಂಬಾರತೋಟ,‌ಕೃಷಿಕರಾದ ಉಷಾ ಮೆಹಂದಳೆ ಮಾತನಾಡಿದರು.

ನವಚೇತನ‌ ಸ್ನೇಹ ಸಂಗಮ ಅಧ್ಯಕ್ಷ‌ ಅನಂತ ಪ್ರಸಾದ್ ನೈತಡ್ಕ‌ ಟ್ರಸ್ಟ್‌ ಬಗ್ಗೆ ಮಾತನಾಡಿದರು.

ಸುದಾನ ಶಿಕ್ಷಣ ಸಂಸ್ಥೆ ಸಂಚಾಲಕ ವಿಜಯ ಹಾರ್ವಿನ್ ಸಭಾಧ್ಯಕ್ಷತೆ ವಹಿಸಿದ್ದರು.

ನವಚೇತನ‌ ಸ್ನೇಹ ಸಂಗಮ ಕಾರ್ಯದರ್ಶಿ ಸುಹಾಸ ಮರಿಕೆ ಸ್ವಾಗತಿಸಿದರು. ಕೃತಿಯ ಬಗ್ಗೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮಾತನಾಡಿದರು. ‌ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಜೇಸಿಐ ಉಪಾಧ್ಯಕ್ಷ ನವೀನ್ ಕೊಯಿಲ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

12 hours ago

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು

ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…

13 hours ago

ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ

ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…

13 hours ago

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

18 hours ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

22 hours ago

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…

22 hours ago