ಪುತ್ತೂರು : ಭೋಪಾಲದಲ್ಲಿ ಕಾಂಗ್ರೆಸ್ಸಿನ ಸೇವಾದಳದ ತರಬೇತಿ ಶಿಬಿರದಲ್ಲಿ ‘ವೀರ ಸಾವರಕರ-ಕಿತನೆ ‘ವೀರ’ ?’ (ವೀರ ಸಾವರಕರ ಎಷ್ಟು ವೀರರು?) ಎಂಬ ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಕೀಳುಮಟ್ಟದ ಹಾಗೂ ಕಟ್ಟುಕತೆ ಬರೆದು ಅವಹೇಳನ ಮಾಡಲಾಗಿದೆ. ಹೀಗಾಗಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ ಕಮೀಶನರ್ ಮೂಲಕ ಸರ್ಕಾರವನ್ನು ಒತ್ತಾಯಿಸಲಾಯಿತು.
ಕಾಂಗ್ರೆಸ್‌ನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳುಮಟ್ಟಕ್ಕೆ ಹೋಗಬಹುದು, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸ್ವಾ. ಸಾವರಕರರಷ್ಟೇ ಅಲ್ಲದೇ ಯಾವುದೇ ರಾಷ್ಟ್ರಪುರುಷರ ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ, ಅದಕ್ಕಾಗಿ ಕೇಂದ್ರ ಸರ್ಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಆವಶ್ಯಕತೆ ಇದೆ. ಕಾಂಗ್ರೆಸ್ ವಿತರಿಸಿದ ಪುಸ್ತಕದಿಂದ ದೇಶದಲ್ಲಿ ಕೋಮು ಹಾಗೂ ಜಾತಿಯ ಒತ್ತಡವನ್ನು ನಿರ್ಮಿಸಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ಸಂಚಿರುವುದು ಗಮನಕ್ಕೆ ಬರುತ್ತದೆ. ಇದು ಸಂಪೂರ್ಣ ಕ್ರಾಂತಿಕಾರಿ ಚಳುವಳಿಯ ದ್ವೇಷವಾಗಿದ್ದು ಈ ಆಕ್ಷೇಪಾರ್ಹ ಪುಸ್ತಕವನ್ನು ಕೂಡಲೇ ನಿಷೇಧಿಸಬೇಕು ಮತ್ತು ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ತಾಲೂಕಿನ ಸಹಾಯಕ ಕಮೀಷನರ್ ಗಳಿಗೆ ಮತ್ತು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…