Advertisement
ಸುದ್ದಿಗಳು

ಜ.18 ರಿಂದ ಮಡಿಕೇರಿಯಲ್ಲಿ ನೂತನ ಕಟ್ಟಡದಲ್ಲಿ ಮುಳಿಯ ಜ್ಯುವೆಲ್ಸ್

Share

ಮಡಿಕೇರಿ: ಕಳೆದ 12 ವರ್ಷಗಳಿಂದ ಮಡಿಕೇರಿಯಲ್ಲಿ ವೈವಿಧ್ಯಮಯ ಚಿನ್ನಾಭರಣಗಳು ಹಾಗೂ ವಿಶ್ವಾಸಾರ್ಹ ವ್ಯವಹಾರದೊಂದಿಗೆ ಕೊಡಗಿನ ಜನತೆಯ ಮನಗೆದ್ದಿರುವ  ಮುಳಿಯ ಜ್ಯುವೆಲ್ಸ್ ಈಗ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಜ.18 ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಮಡಿಕೇರಿಯ ಮಹಾದೇವಪೇಟೆಯಲ್ಲಿ 12 ವರ್ಷಗಳ ಹಿಂದೆ, ಮೊತ್ತ ಮೊದಲ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ ವಿಶಾಲ ಶೋರೂಮ್ ಎನ್ನುವ ಹೆಗ್ಗಳಿಕೆಯೊಂದಿಗೆ ಆರಂಭವಾದ ಮುಳಿಯ ಜ್ಯುವೆಲ್ಸ್ ನ ಶಾಖೆ ಇದೀಗ ಸಮೀಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಬಹು ಅಂತಸ್ತಿನ ಮೂರು ಸಾವಿರ ಚದರ ಅಡಿಯ ನೂತನ ಶೋರೂಮ್ ಎಲ್ಲಾ ಅತ್ಯಾಧುನಿಕ ಹಾಗೂ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಮಾತ್ರವಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್ಮೆಂಟ್ ನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶೋರೂಮ್‍ಗೆ ಎರಡು ಕಡೆಯಿಂದ ಪ್ರವೇಶವಿದ್ದು ಗ್ರಾಹಕರು ಮಹದೇವಪೇಟೆ ಮತ್ತು ಗಣಪತಿ ಸ್ಟ್ರೀಟ್ ಕಡೆಯಿಂದ ಪ್ರವೇಶಿಸಬಹುದು.

ಮುಳಿಯ ಜ್ಯುವೆಲ್ಸ್ ಚೇರ್ಮನ್ & ಮ್ಯಾನೆಂಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ “ ಪ್ರಥಮ  ಬಾರಿಗೆ ಕೊಡಗಿನ ಪಾರಂಪರಿಕ ಆಭರಣಗಳನ್ನು ಶುದ್ಧ 916 ಬಂಗಾರದಲ್ಲಿ ತಯಾರಿಸಿ ಜಾಗತಿಕ ಮನ್ನಣೆಗಳಿಸಿದ ಹೆಗ್ಗಳಿಕೆ ಮುಳಿಯ ಜ್ಯುವೆಲ್ಸ್ ನದ್ದು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮುಳಿಯ ಸಂಸ್ಥೆ, ಕೊಡಗಿನ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿ ತನು-ಮನ-ಧನ ಸಹಾಯವನ್ನು ನೀಡಿದೆ ಎಂದರು.ಹಲವಾರು ವರ್ಷಗಳಿಂದ ಕೊಡಗಿನವರೊಂದಿಗೆ ಬೆರೆತು ಕೊಡಗಿನವರೇ ಆಗಿದ್ದೇವೆ. ಕೊಡಗಿನ ಜನತೆ ಕೂಡ ನಮ್ಮನ್ನ ತಮ್ಮವರಂತೆ ಸ್ವೀಕರಿಸಿದ್ದಾರೆ. ಎಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.

24-48 ಗಂಟೆಯೊಳಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನ್ಯಾಸ ಹಾಗೂ ತೂಕದ ಆಭರಣಗಳನ್ನು ಷರತ್ತು ಬದ್ದವಾಗಿ ತಯಾರಿಸಿಕೊಡುವುದು ಮುಳಿಯದ ವಿಶೇಷತೆ. ಕೊಡಗಿನ ಸಾಂಪ್ರದಾಯಿಕ ಆಭರಣಗಳಾದ ಕೊಕ್ಕೆತಾತಿ, ಜೋಮಾಲೆ, ಹಾಗೂ ಗಿಳಿಯೋಲೆ, ನೆಕ್ಲೇಸ್, ಉಂಗುರ, ತಾಳಿ, ಕರಿಮಣಿ, ಕಾಲ್ಗೆಜ್ಜೆ, ಬೆಳ್ಳಿ ಮತ್ತು ವಜ್ರದಾಭರಣಗಳು ಮುಳಿಯದಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

ಮುಳಿಯ ಜ್ಯುವೆಲ್ಲರ್ಸ್‍ನ ನೂತನ ಶೋರೂಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರನಟಿ ಹರ್ಷಿಕಾ ಪೂಣಚ್ಚ ಹಾಗೂ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ(ಸನ್ನಿಧಿ) ಪಾಲ್ಗೊಳ್ಳಲಿದ್ದಾರೆ. ಚಿತ್ರ ನಟಿಯರೊಂದಿಗೆ ಗ್ರಾಹಕರಿಗೆ ಸೆಲ್ಫಿತೆಗೆಯುವ ಅವಕಾಶವಿರುತ್ತದೆ.

ಸಮಾರಂಭದಲ್ಲಿ ಶಾಸಕರುಗಳಾದ  ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ  ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಕೊಡಗು ಜೆಡಿಎಸ್ ಅಧ್ಯಕ್ಷ  ಕೆ.ಎಂ.ಬಿ ಗಣೇಶ್ , ಮುಳಿಯ ಸಮೂಹ ಸಂಸ್ಥೆ ದಿಗ್ದರ್ಶಕರು ಮುಳಿಯ ಶ್ಯಾಮ ಭಟ್ ಇವರುಗಳು ಪಾಲ್ಗೊಳ್ಳಲಿದ್ದಾರೆ.

ಮುಳಿಯ ಹೊಸ ಶೋರೂಂ ವಿಶೇಷತೆಗಳು

* ವಿಶಾಲ ಹಾಗೂ ಹವಾನಿಯಂತ್ರಿತ ಶೋರೂಂ
* ಪಾರ್ಕಿಂಗ್ ವ್ಯವಸ್ಥೆ
* ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ
* ಚಿನ್ನ ಕೊಳ್ಳುವ ಅಪೂರ್ವ ಅನುಭವ
* ಮುಳಿಯದ ಎಲ್ಲಾ ಆಭರಣಗಳು 916 ಹಾಲ್‍ಮಾರ್ಕ್ ಶುದ್ಧತೆ
* ಗ್ರಾಹಕ ಸ್ನೇಹಿ, ಪ್ರಾಮಾಣಿಕ ಮತ್ತು ಪಾರದರ್ಶಕ ವಿಶ್ವಾಸಾರ್ಹ ವ್ಯವಹಾರ
* ಅಪ್ರತಿಮ ಆಯ್ಕೆ
* ಬೆಳ್ಳಿಯ ಹಾಗೂ ವಜ್ರದ ಆಭರಣಗಳ ವಿಶೇಷ ಸಂಗ್ರಹ
* ನುರಿತ, ಅನುಭವಿ ಸಿಬ್ಬಂದಿ ವರ್ಗ
* ಮದುವೆ ಆಭರಣಗಳ ಅಪ್ರತಿಮ ಆಯ್ಕೆಯ ಅವಕಾಶ
* ಕೊಡಗು ಪಾರಂಪರಿಕ ಆಭರಣಗಳ ಅಪೂರ್ವ ಸಂಗ್ರಹ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

1 hour ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

14 hours ago

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು

ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…

14 hours ago

ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ

ಇತ್ತೀಚಿನ ನೈಸರ್ಗಿಕ ವಿಪತ್ತುಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದ್ದು, ಕಾನೂನು ಮತ್ತು…

14 hours ago

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

20 hours ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

24 hours ago