Advertisement
ಸುದ್ದಿಗಳು

ಶಾಸಕ ಅಂಗಾರರಿಗೆ ಸಚಿವ ಸ್ಥಾನ ತಪ್ಪಿಸಿ ಸಮುದಾಯಕ್ಕೆ ಅನ್ಯಾಯ- ಮೊಗೇರ ಸಮುದಾಯ ಮುಖಂಡರ ಖಂಡನೆ

Share

ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮೊಗೇರ ಸಮುದಾಯದ ಪ್ರತಿನಿಧಿಯಾದ ಶಾಸಕ ಎಸ್‌.ಅಂಗಾರ ಅವರಿಗೆ ಈ ಬಾರಿ ಸಚಿವ ಸ್ಥಾನ ತಪ್ಪುವ ಮೂಲಕ ಮೊಗೇರ ಸಮುದಾಯಕ್ಕೆ ಮತ್ತು ಸುಳ್ಯದ ಜನತೆಗೆ ಅನ್ಯಾಯವಾಗಿದೆ. ಇದನ್ನು ಮೊಗೇರ ಸಮುದಾಯವು ಖಂಡಿಸುತ್ತದೆ ಎಂದು ಮೊಗೇರ ಸಮುದಾಯದ ಮುಖಂಡರು ಹೇಳಿದ್ದಾರೆ.

Advertisement
Advertisement
Advertisement
Advertisement

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಗೇರ ಸಮುದಾಯದ ಮುಖಂಡ ಕೇಶವ ಮಾಸ್ತರ್ ಹೊಸಗದ್ದೆ
‘ಮೊಗೇರ ಸಮುದಾಯದಲ್ಲಿ ಹುಟ್ಟಿ ಬೆಳೆದು ನಿರಂತರ ಆರು ಬಾರಿ ಶಾಸಕರಾದ ಅಂಗಾರರು ತನ್ನ ಸಜ್ಜನಿಕೆಯ ನಡವಳಿಕೆ, ಸರಳ ಜೀವನ, ಅಭಿವೃದ್ಧಿ ಪರ ಕಾಳಜಿ ಹಾಗೂ ಭ್ರಷ್ಟಾಚಾರ ರಹಿತ ಕಾರ್ಯಶೈಲಿಯಿಂದ ಜನಪ್ರೀತಿ ಗಳಿಸಿದ್ದಾರೆ‌. ಅಂಗಾರರು ಈ ಎಲ್ಲಾ ಅರ್ಹತೆಯ ಆಧಾರದಲ್ಲಿ ಎಂದೋ ಸಚಿವರಾಗಬೇಕಿತ್ತು. ಆದರೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಂಗಾರರು ಮಂತ್ರಿಯಾಗುತ್ತಾರೆ ಎಂದು ತಿಳಿದು ಸಂತೋಷಗೊಂಡಿದ್ದ ನಮಗೆ ಕೊನೆಯ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದರಲ್ಲಿ ತೀವ್ರ ನೋವು, ಅಸಮಾಧಾನ, ಮತ್ತು ಆಕ್ರೋಶವಿದೆ. ಓರ್ವ ಶಾಸಕನನ್ನು ಹೀಗೆ ನಡೆಸಿಕೊಂಡ ಕಾರಣ ಅವರಿಗೆ ಮತ್ತು ಆ ಮೂಲಕ ಮೊಗೇರ ಸಮುದಾಯ ಮತ್ತು ಸುಳ್ಯಕ್ಕೆ ಅನ್ಯಾಯ ಆಗಿದೆ ಎಂದು ಅವರು ಹೇಳಿದರು.

Advertisement

ಅಂಗಾರರು ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾದರೂ ನಮ್ಮ ಸಮುದಾಯದವರು ಎನ್ನುವ ಕಾರಣಕ್ಕೆ ಸಮುದಾಯದ ಅಭಿವೃದ್ಧಿಗೆ ಆನೇಕ ವಿಧದಲ್ಲಿ ಶ್ರಮಿಸಿದ್ದಾರೆ. ಇಂಥ ನಾಯಕನನ್ನು ಸಚಿವನ್ನಾಗಿ ಮಾಡಿದ್ದರೆ ಸುಳ್ಯ ಕ್ಷೇತ್ರಕ್ಕೆ ಗೌರವ ಕೊಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದ ಮೊಗೇರ ಸಮುದಾಯಕ್ಕೂ ಗೌರವ ಕೊಟ್ಟಂತಾಗುತ್ತಿತ್ತು. ಆದರೆ ಜವಾಬ್ದಾರಿ ಉಳ್ಳವರು ಇದನ್ನು ಅರಿತುಕೊಳ್ಳದೇ ಸಮುದಾಯಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದರು.

ನಮ್ಮ ಸಮುದಾಯ ರಾಜಕಾರಣದಲ್ಲಿ, ಆನೇಕ ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಶಕ್ತಿಯಾಗಿದ್ದಾರೆ. ನಮ್ಮ ಸಹನೆ ಮತ್ತು ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿದರೆ ಯಾವುದೇ ರಾಜಕೀಯ ಪಕ್ಷಗಳು ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾದ ದಿನಗಳು ದೂರವಿಲ್ಲ. ಇನ್ನಾದರೂ ನಮ್ಮ ಆಕ್ರೋಶವನ್ನು ಅರ್ಥಮಾಡಿಕೊಂಡು ಅಂಗಾರರನ್ನು ಸಚಿವರನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ ನಮ್ಮ ನಿರೀಕ್ಷೆಗೆ ತಕ್ಕ ನ್ಯಾಯ ದೊರಕುವುದಿಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ಮೊಗೇರ ಸಮುದಾಯ ಇದಕ್ಕೆಉಗ್ರ ಪ್ರತಿಭಟನೆಯನ್ನೂ ಮಾಡುತ್ತದೆ ಎಂದು ಅವರು ಹೇಳಿದರು.

Advertisement

ಶಾಸಕರ ಅಂಗಾರರು ನಿಷ್ಕಲ್ಮಶ ವ್ಯಕ್ತಿತ್ವದವರು. ಇವರಿಗೆ ಮಂತ್ರಿಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೂ ಈ ಕಡೆಗಣನೆ ನಡೆಸಿರುವುದು ಖಂಡನೀಯ. ಜಿಲ್ಲೆಯ ಇತರ ಶಾಸಕರು ಅವರ ಬೆಂಬಲಕ್ಕೆ ಬರಲಿಲ್ಲ ಎಂಬ ನೋವೂ ನಮಗೆ ಇದೆ ಎಂದು ಅವರು ಹೇಳಿದರು.

ಇನ್ನೋರ್ವ ಮುಖಂಡ ಕೃಷ್ಣ ಸುಳ್ಳಿ ಮಾತನಾಡಿ ‘ರಾಜ್ಯದಲ್ಲಿ ಮೊಗೇರ ಸಮುದಾಯದ ಮತದಾರರು ನಿರ್ಣಾಯಕ ಶಕ್ತಿಯಾಗಿದ್ದಾರೆ. ಹೀಗಾಗಿ ಇನ್ನಾದರೂ ನ್ಯಾಯ ದೊರಕಿಸಿಕೊಡುವ ಕೆಲಸವಾಗಬೇಕು. ಅಂಗಾರರು ಈ ಬಾರಿ ಮಂತ್ರಿಯಾಗಿಯೇ ಆಗುತ್ತಾರೆ ಎಂದು ನಮಗೆ ಖಂಡಿತ ಭರವಸೆ ಇತ್ತು. ಸುಳ್ಯದ ಎಲ್ಲಾ ಪಕ್ಷದವರೂ ಅವರನ್ನು ಈ ವಿಚಾರದಲ್ಲಿ ಬೆಂಬಲಿಸಿದ್ದರು ಎಂದು ಹೇಳಿದರು.

Advertisement

ಹರಿಶ್ಚಂದ್ರ ಹಾಸನಡ್ಕ ಮಾತನಾಡಿ ‘ನಮ್ಮ ನೋವನ್ನು ಮೊಗೇರ ಸಂಘದವರಿಗೂ ತಿಳಿಸಿ ಸಂಘಟನೆಯ ಮೂಲಕವೂ ಸಚಿವ ಸ್ಥಾನ ದೊರಕಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ದಾಸನಕಜೆ, ಕಿರಣ್ ಕೊನ್ನಡ್ಕ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |

ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮ ಹಾಗೂ ʼಕಲಾ…

10 hours ago

ಹವಾಮಾನ ವರದಿ | 26-12-2024 | ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡದ ವಾತಾವರಣದ | ಜನವರಿಯಲ್ಲಿ ಮಳೆಯ ಸಾಧ್ಯತೆ ಇಲ್ಲ|

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಹಿಂಗಾರು ರೀತಿ ಬೀಸುತ್ತಿರುವುದರಿಂದ…

11 hours ago

ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು…

11 hours ago

ಹವಾಮಾನ ವರದಿ | 25.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ

26.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಇಂದು ರಾಷ್ಟ್ರೀಯ ರೈತ ದಿನ | ರಾಷ್ಟ್ರ ನಿರ್ಮಾಣದಲ್ಲಿ ರೈತರ ಪಾತ್ರವೇ ದೊಡ್ಡದು |

ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…

3 days ago

ಹವಾಮಾನ ವರದಿ | 23-12-2024 | ಕೆಲವು ಕಡೆ ಮೋಡ-ಕೆಲವು ಕಡೆ ತುಂತುರು ಮಳೆ | ಜನವರಿಯಲ್ಲಿ ಮಳೆಯ ಲಕ್ಷಣವಿಲ್ಲ |

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…

3 days ago