ಲಾಕ್ಡೌನ್ ನಡುವೆ ಧೈರ್ಯ ತುಂಬುವ, ಭರವಸೆ ನೀಡುವ ಸಂಗತಿ ಇದು. ದೇಶದಲ್ಲಿ ಇಂತಹ ನೂರಾರು ಸಂಗತಿಗಳು ನಡೆದಿದೆ. ಇದುವರೆಗೂ ಕೊರೊನಾ ವೈರಸ್ ಭಯವೇ ತುಂಬಿತೇ ಹೊರತು ಜಾಗೃತಿ ಇನ್ನೂ ಸರಿಯಾಗಿ ಮೂಡಿಲ್ಲ. ಈ ನಡುವೆಯೇ ಅನೇಕ ಧೈರ್ಯ ತುಂಬುವ ಸಂಗತಿಗಳು ನಡೆದು ಹೋದವು. ಅದಕ್ಕೀಗ ಮನ್ನಣೆ ಸಿಕ್ಕಿದೆ……
Advertisement Advertisement
ಮಧುರೈ: ಶಿಕ್ಷಣಕ್ಕಾಗಿ ತಂದೆ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣವನ್ನು ಲಾಕ್ಡೌನ್ ಸಮಯದಲ್ಲಿ ಬಡವರಿಗೆ ನೀಡುವಂತೆ ತಂದೆಗೆ ಸೂಚಿಸಿ ಅನುಷ್ಠಾನ ಮಾಡಿದ ತಮಿಳುನಾಡಿನ ಮಧುರೈ ನಿವಾಸಿ ಸೆಲೂನ್ ಮಾಲಕ ಮೋಹನ್ ಅವರ ಪುತ್ರಿ 13 ವರ್ಷದ ನೇತ್ರಾ ಎಂಬಾಕೆಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇಮಕ ಮಾಡಲಾಗಿದೆ.
ತಮಿಳುನಾಡಿನ ಮಧುರೈಯಲ್ಲಿರುವ 13 ವರ್ಷದ ನೇತ್ರಾ, ಕೊರೊನಾ ವೈರಸ್ ಸಂದರ್ಭದಲ್ಲಿ ಬಡವರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವಂತೆ ತನ್ನ ತಂದೆಗೆ ಮನವಿ ಮಾಡಿದ್ದಳು. ನೇತ್ರಾಳ ತಂದೆ ಸೆಲೂನ್ ನಡೆಸುತ್ತಿದ್ದು ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಿದ್ದರು. ಕೊರೊನಾ ಲಾಕ್ಡೌನ್ ಸಂದರ್ಭ ಬಡವರ ಸಂಕಷ್ಟ ನೋಡಿದ ನೇತ್ರಾ ನಾಗರಿಕ ಸೇವೆ ಮಾಡಲು ತನ್ನ ವಿದ್ಯಾಭ್ಯಾಸಕ್ಕಾಗಿ ಸಂಗ್ರಹಿಸಿದ್ದ ಹಣವನ್ನು ನೀಡುವಂತೆ ತಂದೆಯಲ್ಲಿ ಮನವಿ ಮಾಡಿದ್ದಳು. ಇದಕ್ಕೆ ಸ್ಪಂದಿಸಿದ ಮನೆಯವರು ಮಗಳ ಬೇಡಿಕೆಯನ್ನು ಈಡೇರಿಸಲು ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನು ಬಳಸಿಕೊಂಡು ಲಾಕ್ಡೌನ್ ಮಧ್ಯೆ 600 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸಿದರು. ಇದರ ಫಲವಾಗಿ ಇದೀಗ ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇತ್ರಾಳನ್ನು ನೇಮಕ ಮಾಡಿದೆ.
ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ (ಯುಎನ್) ಸಮಾವೇಶಗಳಲ್ಲಿ ಮತ್ತು ಜಿನೀವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್‌ಎಡಿಎಪಿ ಘೋಷಣೆ ಮಾಡಿದೆ. ಇದೇ ಸಂದರ್ಭ ವಿಶ್ವ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾತನಾಡಲು ಆಕೆಗೆ ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ, ಇನ್ನಷ್ಟು ಬಡವರನ್ನು ತಲುಪಲು ಸಹಕಾರ ಮಾಡಲಾಗುತ್ತದೆ ಎಂದೂ ಹೇಳಿದೆ.
ಕೊರೊನಾ ಲಾಕ್ಡೌನ್ ಸಂದರ್ಭ ಎರಡು ತಿಂಗಳುಗಳ ಕಾಲ ಸೆಲೂನ್ ಮುಚ್ಚಲಾಗಿತ್ತು, ಯಾವುದೇ ಆದಾಯ ಇರಲಿಲ್ಲ. ಹೀಗಿದ್ದರೂ ಈ ನಿಸ್ವಾರ್ಥ ಸೇವೆ ಮಾಡಿರುವ ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.
ಇದೀಗ 13 ವರ್ಷದ ನೇತ್ರಾ ಸೇವೆಯ ಮೂಲಕ ಗ್ರಾಮ ಮಟ್ಟದಿಂದ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾಳೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…