Advertisement
ಅಂಕಣ

ಶಿಕ್ಷಣವೆಂಬ  ಜೀವನ ಧರ್ಮ

Share
ಆಮೆ ಮೊಲದ ಓಟದ ಕಥೆ, ಪುಣ್ಯ ಕೋಟಿ ಯ ಕಥೆ, ಒಗ್ಗಟ್ಟಿನಲ್ಲಿ ಬಲವಿದೆ, ದ್ರಾಕ್ಷಿ ಹುಳಿಯೆಂದ ನರಿಯ‌ ಕಥೆ , ತೆನಾಲಿ ರಾಮ, ಮಹಾಭರತ ರಾಮಾಯಣ ಮೊದಲಾದ ಕಥೆಗಳನ್ನು ಹೇಳುತ್ತಾ ವಿದ್ಯಾರ್ಥಿ ಗಳಿಗೆ ಜೀವನದ ವಿವಿಧ ಮೌಲ್ಯ ಗಳನ್ನು ಕಲಿಸುತ್ತಾ ಮುಂದಿನ ಜೀವನಕ್ಕೆ ಭದ್ರ ಅಡಿಪಾಯ ಹಾಕುವುದು ಶಿಕ್ಷಕರು. ಶಿಕ್ಷಣವೆಂಬುದು ವೃತ್ತಿಯಲ್ಲ , ಅದೊಂದು ಜೀವನ ಧರ್ಮವೆಂದು ಸುಂದರವಾಗಿ ನಮ್ಮ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರು  ತಮ್ಮ ಮಾತಿನಲ್ಲಿ ಹೇಳುತ್ತಾರೆ. ಜ್ಞಾನ ನಿಂತ ನೀರಲ್ಲ. ಅದು ಹರಿಯುತ್ತಿರ ಬೇಕು. ಕಲಿತ ವಿದ್ಯೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡಿದಾಗ ಮಾತ್ರ ಶಿಕ್ಷಣಕ್ಕೊಂದು ಅರ್ಥ ಬರುತ್ತದೆ ಎಂಬುದು ನರೇಂದ್ರ ಮೋದಿಯವರ ಅಭಿಪ್ರಾಯ ನಿಜಕ್ಕೂ ಸಮಯೋಚಿತವಾದುದು. ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬಾಳಿನಲ್ಲೂ ಮಹತ್ವದ ಸಮಯ. ಅಲ್ಲಿ ಸರಿಯಾದ ಶಿಕ್ಷಕರ ಮಾರ್ಗ ದರ್ಶನ ಸಿಕ್ಕಿದಾಗ ಒಂದು ಒಳ್ಳೆಯ ಗುರಿಯತ್ತ ಮುನ್ನಡೆಯಲು ಸಾಧ್ಯ.
ಹಿಂದಿನ ಕಾಲದಲ್ಲಿ  ಗುರುಗಳು ಸರ್ವ ಸ್ವತಂತ್ರರು.  ಪ್ರತಿಯೊಬ್ಬರಿಗೂ  ಅವರದೇ ಆದ ಇತಿಮಿತಿಗಳಿವೆ,  ಅರಿತು ಮುಂದುವರಿವುದು ಒಳ್ಳೆಯದು. ಭವಿಷ್ಯದ  ದೃೃಷ್ಟಿಯಿಂದ ಯೋಚಿಸ ಬೇಕು. ಹಿಂದೆ ಮುಂದೆ ನೋಡದೆ ಮುಂದಡಿ ಇಡಬಾರದು. ಓದುವ ಸಮಯದಲ್ಲಿ ಓದಬೇಕು. ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಹೀಗೆ ಹಲವು ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಸರಿ ಮಾಡುವ ಅವಕಾಶ ಅಂದು  ಗುರುಗಳಿಗಿತ್ತು. ತಪ್ಪು ಮಾಡಿದಾಗ ಪೆಟ್ಟು ಕೊಟ್ಟು ಬುದ್ಧಿ ಹೇಳಿ ಸರಿ ಮಾಡುತ್ತಿದ್ದರು. ಶಾಲೆಯಲ್ಲಿ ಹೊಡೆದರೆ, ಯಾಕೆ ಎತ್ತ ಎಂದು ಮನೆಯವರು ಕೇಳಿಕೊಂಡು ಬರುತ್ತಿರಲಿಲ್ಲ. ಇನ್ನೂ ಎರಡು ಕೊಡ ಬೇಕಿತ್ತು ಅನ್ನುವವರೇ ಹೆಚ್ಚಿನವರು.
ಮಕ್ಕಳು ಅಡ್ಡ ದಾರಿ ಹಿಡಿಯದಂತೆ ಶಾಲೆ, ಮನೆಗಳಲ್ಲೇ ಎಚ್ಚರಿಕೆ ವಹಿಸಲಾಗುತ್ತಿತ್ತು. ಹಾಗಿದ್ದು ತಪ್ಪು ಹಾದಿ ಹಿಡಿದರೆ ಪೋಲಿಸರು ವಿಚಾರಿಸುತ್ತಿದ್ದರು. ಆದರೆ ಈಗ ಮಕ್ಕಳ ‌ಮೇಲಿನ ಕುರುಡು ನಂಬಿಕೆ ಗುರುಗಳತ್ತಲೇ ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ಈಗ ಶಾಲೆಗಳಲ್ಲಿ ಮಕ್ಕಳಿಗೆ ಹೊಡೆದು ಬುದ್ಧಿ ಹೇಳುವಂತಿಲ್ಲ. ಹಾಗೇನಾದರೂ ಮಾಡಿದರೆ ಮನೆಯಿಂದ ಫೋನ್ ‌ಮಾಡಿ ಬೈಯುತ್ತಾರೆ.  ಪಾಠ , ಪ್ರಾಜೆಕ್ಟ್, ಟಾರ್ಗೆಟ್, ಪರೀಕ್ಷೆ, ಎಂದು ಯಾವಾಗಲೂ ಓಡುತ್ತಾ  ಸಾಗುವ ಟೀಚರ್ ಗಳಿಗೂ , ಮಕ್ಕಳಿಗೂ ಪುರುಸೊತ್ತೇ ಇಲ್ಲ,. ಬುದ್ಧಿ ಹೇಳುವ ತಾಳ್ಮೆ ಅಧ್ಯಾಪಕರಿಗೂ, ಕೇಳುವ ಮನಸ್ಸು ಮಕ್ಕಳಿಗೂ ಇದ್ದಾಗ ಮಾತ್ರ ಪ್ರಯೋಜನ.
ಸೆಪ್ಟೆಂಬರ್ 5 ಒಂದು ವಿಶೇಷ ದಿನವಾಗಿದೆ. ಆ ದಿನವನ್ನು ಭಾರತದೆಲ್ಲೆಡೆ ಶಿಕ್ಷಕರ ದಿನಾಚರಣೆ ಯಾಗಿ ಆಚರಿಸಲಾಗುತ್ತದೆ. ನಮ್ಮ ದ್ವಿತೀಯ ರಾಷ್ಟ್ರಪತಿ ಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಅವರು ಮಹಾನ್ ಚೇತನವಾಗಿದ್ದರು. ಅಪಾರ ಜ್ಞಾನವಂತ, ಮಹಾ ಮೇಧಾವಿ. ಅವರು ಹಲವು ಉಪಯುಕ್ತ ಕೃತಿ ಗಳ ರಚನೆಯನ್ನು ಮಾಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರ  ಗಣನೀಯ ಕೊಡುಗೆಯನ್ನು  ಅವರ ಜನುಮ ದಿನದ  ನೆಪದಲ್ಲಿ ನೆನಪಿಸುವ ಕಾರ್ಯಕ್ರಮ ಎಲ್ಲೆಡೆ ಶಿಕ್ಷಕರ ದಿನಾಚರಣೆಯ ಮೂಲಕ ಆಚರಿಸಲಾಗುತ್ತದೆ.
ಅವರ ಪ್ರಕಾರ ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು.  ತಮ್ಮ ಜ್ಞಾನವನ್ನು ಧಾರೆಯೆರೆದು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಗೆ ಶ್ರಮಿಸುತ್ತಾರೆ. ಹಾಗಾಗಿ ಒಂದು ಸದೃಢ , ಸಮೃದ್ಧವಾದ ಸಮಾಜದ ನಿರ್ಮಾಣ ದ ಗರಿಷ್ಠ ಜವಾಬ್ದಾರಿ ಯನ್ನು ನಿಭಾಯಿಸುವ ಶಿಕ್ಷಕರ ಕಾರ್ಯ ವನ್ನು ಎಲ್ಲರೂ ಗೌರವಿಸ ಬೇಕು ಎಂಬ ಮಹತ್ತರ ಧ್ಯೇಯವನ್ನು ಈ ದಿನಾಚರಣೆಯು ಹೊಂದಿದೆ.  ಶಿಕ್ಷಕರನ್ನು ಗೌರವಿಸುವ ಸಮಾಜದಲ್ಲಿ  ಮಾತ್ರ ಜವಾಬ್ದಾರಿಯುತ , ನಿಷ್ಠಾವಂತ , ಪ್ರಾಮಾಣಿಕ, ಪ್ರಜ್ಜಾವಂತ ಪ್ರಜೆಯನ್ನು ನಾವು ನಿರೀಕ್ಷಿಸ ಬಹುದು. ಆದರ್ಶ ಸಮಾಜದ ನಿರ್ಮಾಣದಲ್ಲಿ ಸರ್ವತೋಮುಖವಾಗಿ  ತೊಡಗಿಸಿ ಕೊಳ್ಳುವ ಶಿಕ್ಷಕರಿಗೆ ,” ಶಿಕ್ಷಕರ ದಿನಾಚರಣೆಯ ಶುಭಾಶಯಗಳು”
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

1 day ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

2 days ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

4 days ago