ಸುಳ್ಯ: ಪ್ರೇಮ ವೈಫಲ್ಯದ ಕಾರಣದಿಂದ ಶಿವ ಗಂಗೆ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಸುಳ್ಯದ ಯುವಕರು ಸಾಹಸದಿಂದ ಬದುಕಿಸಿದ್ದಾರೆ.
ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 7 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಶಿವಂಗಂಗೆಗೆ ತೆರಳಿದ್ದರು. ಬೆಟ್ಟ ತಲಪುವ ಹೊತ್ತಿಗೆ ಯುವಕನೊಬ್ಬ ಮೇಲಿನಿಂದ ಜಿಗಿಯಲು ಸಿದ್ಧತೆ ಮಾಡಿರುವುದನ್ನು ಗಮನಿಸಿದ ಯುವಕರ ತಂಡವು ಅಲ್ಲಿನ ಅರ್ಚಕರ ಸಹಾಯದಿಂದ ರಕ್ಷಿಸಿದರು. ಈ ರಕ್ಷಣಾ ಕೆಲಸಕ್ಕೆ ಬೆಂಗಳೂರು ಯುವಕರು ಕೈಜೋಡಿಸಿದರು. ಯುವಕರನ ರಕ್ಷಿಸಿದ ಬಳಿಕ ತುಮಕೂರು ಪೊಲೀಸರಿಗೆ ಒಪ್ಪಿಸಲಾಯಿತು.
ಸುಳ್ಯದ ಯುವಕರ ತಂಡದಲ್ಲಿ ಜಯದೀಪ ಕುದ್ಕುಳಿ , ರಾಜೇಶ್ ಚೊಕ್ಕಾಡಿ, ಧನುಷ್ ಪೆರುಂಬಾರ್, ರೋಹಿತ್ ಪೇರಾಲು, ಉದಿತ್ ಕುಮಾರ್ ಅಜ್ಜಾವರ, ಲಿಖಿತ್ ಸುಳ್ಯ , ಗೌತಮ್ ಸುಳ್ಯ ಇದ್ದರು.
ಶಿವಗಂಗೆ ಬೆಟ್ಟವು ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದ್ದು ತುಮಕೂರಿನಿಂದ 20 ಕಿಮೀ ದೂರದಲ್ಲಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರದಲ್ಲಿ ಇದೆ.
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…