ವಿಶೇಷ ವರದಿಗಳು

ಶೂನ್ಯ ನೆರಳು ದಿನ | ಖಗೋಳ ವಿದ್ಯಮಾನ ನೋಡಲು-ಅನುಭವಿಸುವ ದಿನ ನಾಳೆ | ಎ.24 ಮಂಗಳೂರು – 25 ರಂದು ಉಡುಪಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಂಗಳೂರು: ಪರಿಸರ ವೀಕ್ಷಣೆ ಮಾಡುವ, ಖಗೋಳದ ಬದಲಾವಣೆ ತಿಳಿಯುವ ಮಂದಿಗೆ ಎ.24 ಹಾಗೂ 25 ಆಸಕ್ತಿಯ ದಿನ. ಅಂದು ಕೆಲ ಹೊತ್ತು ಶೂನ್ಯ ನೆರಳು ದಿನ ಅಥವಾ ಜೀರೋ ಶ್ಯಾಡೋ ಡೇ. ಮಂಗಳೂರಿನಲ್ಲಿ ಎ.24 ರಂದು ಅಪರಾಹ್ನ 12.28 ಕ್ಕೆ ಹಾಗೂ ಉಡುಪಿಯಲ್ಲಿ ಎ.25 ರಂದು ಅಪರಾಹ್ನ 12.29 ಕ್ಕೆ ವೀಕ್ಷಿಸಬಹುದಾಗಿದೆ.

Advertisement

ಪ್ರತೀ ವರ್ಷವೂ ಈ ವಿದ್ಯಮಾನ ನಡೆಯುತ್ತದೆ. ಈಗ ಲಾಕ್ಡೌನ್ ಇರುವುದರಿಂದ ಎಲ್ಲರೂ ಈ ವಿದ್ಯಮಾನವನ್ನು ಅನುಭವಿಸಬಹುದು. ಪ್ರತೀ ವರ್ಷದಲ್ಲಿ ಎಪ್ರಿಲ್‌ ಹಾಗೂ ಆಗಸ್ಟ್‌ ತಿಂಗಳಲ್ಲಿ ಎರಡು ಬಾರಿ ಶೂನ್ಯ ನೆರಳು ಬರುತ್ತದೆ.  ಕರಾವಳಿಯಲ್ಲಿ ಎಪ್ರಿಲ್‌ 24 ಹಾಗೂ 25 ರಂದು ಶೂನ್ಯ ನೆರಳು ಸಂಭವಿಸುವ ದಿನ. ಮಂಗಳೂರಿನಲ್ಲಿ ಎ.24ರಂದು ಅಪರಾಹ್ನ 12.28ಕ್ಕೆ ಹಾಗೂ ಆಗಸ್ಟ್‌ನಲ್ಲಿ 18 ರಂದ ಅಪರಾಹ್ನ 12.33ಕ್ಕೆ ವೀಕ್ಷಿಸಬಹುದು. ಉಡುಪಿಯಲ್ಲಿ ಎ.25ರಂದು ಅಪರಾಹ್ನ 12.29ಕ್ಕೆ ಹಾಗೂ ಆಗಸ್ಟ್‌ 17 ರಂದು ಅಪರಾಹ್ನ 12.34ಕ್ಕೆ ವೀಕ್ಷಿಸಬಹುದಾಗಿದೆ.

ಬೆಂಗಳೂರಿನಲ್ಲಿ  12:17 ಕ್ಕೆ ವೀಕ್ಷಿಸಬಹುದು. ಮೂಡುಬಿದ್ರೆ, ಬಂಟ್ವಾಳ, ಸಕಲೇಶಪುರ ಹಾಗೂ ಹಾಸನದಲ್ಲಿ ಸಹ ಎ.24ರಂದು ಶೂನ್ಯ ನೆರಳು ದಿನ ಇರಲಿದೆ.

ಈ ಅಪರೂಪದ ಕ್ಷಣವನ್ನು ನೋಡಲು ಮರೆಬೇಡಿ. ಸಾಮಾನ್ಯವಾಗಿ ಬೆಳಗಿನಿಂದ ಮಧ್ಯಾಹ್ನವಾಗುತ್ತಲೇ ನೆರಳಿನ ಉದ್ದ ಕಡಿಮೆಯಾಗುತ್ತಾ, ಸಂಜೆಯಾದಂತೆ ಹೆಚ್ಚುತ್ತಾ ಹೋಗುತ್ತದೆ. ಆದರೆ ಈ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸುವುದಿಲ್ಲ. ಆಕಾಶದಲ್ಲಿ ಸೂರ್ಯ ಲಂಬವಾಗಿ ಚಲಿಸುವಾಗ ನಮ್ಮ ನೆರಳು ನಮ್ಮ ಪಾದಕ್ಕೆ ಹೊಂದಿಕೊಂಡಂತೆ ರಚನೆಯಾಗುತ್ತದೆ.   ಆಗ ನಮ್ಮ ನೆರಳು ಸರಿಯಾಗಿ ನಮ್ಮ ಕೆಳಗೆ ಇರುತ್ತದೆ. ಹಾಗಾಗಿ ಅದು ಕಾಣುವುದಿಲ್ಲ. ಇದನ್ನು ಶೂನ್ಯ ನೆರಳು ಎಂದು ಕರೆಯಲಾಗುತ್ತದೆ.

Advertisement

ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ‘ಶೂನ್ಯ ನೆರಳಿನ ದಿನ’ ಕಾಣಬಹುದು. ಅಂದರೆ ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುವಾಗ ಅದು 23.5 ಡಿಗ್ರಿ ದಕ್ಷಿಣ ಅಕ್ಷಾಂಶ (ಮಕರ ಸಂಕ್ರಾಂತಿ ವೃತ್ತ) ಮತ್ತು 23.5 ಡಿಗ್ರಿ ಉತ್ತರ (ಕರ್ಕಾಟಕ ವೃತ್ತ) ಇವುಗಳ ನಡುವೆ ಹಾದು ಹೋಗುವ ಸಂದರ್ಭದಲ್ಲಿ ಶೂನ್ಯ ನೆರಳಿನ ದಿನ ಉಂಟಾಗುತ್ತದೆ. ಈ ವೃತ್ತಗಳಿಂದಾಚೆ ಇರುವ ಪ್ರದೇಶಗಳಲ್ಲಿ ಶೂನ್ಯ ನೆರಳು ಉಂಟಾಗುವುದೇ ಇಲ್ಲ ಎಂದು ಖಗೋಳ ವಿಜ್ಞಾನಿಗಳು ಹೇಳುತ್ತಾರೆ.

Advertisement

ಹೀಗೂ ಗುರುತಿಸಬಹುದು : ಶೂನ್ಯ ನೆರಳಿನ ದಿನ ಗಮನಿಸಲು ಒಂದು  ಲೋಟ ಅಥವಾ ಯಾವುದಾದರೂ ಉದ್ದವಾದ ಕಂಬವನ್ನು  ಬಿಸಿಲಿನಲ್ಲಿ ನೆಟ್ಟು ಇದನ್ನು ಪತ್ತೆ ಹಚ್ಚಬಹುದಾಗಿದೆ. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳುವುದಿಲ್ಲ. ಪ್ರತಿಯೊಬ್ಬರು ಇದನ್ನು ಪರೀಕ್ಷಿಸಬಹುದು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ

ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸೋಗಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ…

5 hours ago

ಉತ್ತರಕಾಶಿಯ ಮೇಘಸ್ಫೋಟದಿಂದ ಭಾರಿ ಪ್ರವಾಹ | ಶೋಧ, ರಕ್ಷಣಾ ಕಾರ್ಯ ಮುಂದುವರಿಕೆ

ಉತ್ತರಾಖಂಡದ ಉತ್ತರಕಾಶಿಯ ಮೇಘಸ್ಫೋಟದಿಂದ ದಿಡೀರ್ ಭಾರೀ ಪ್ರವಾಹಕ್ಕೆ ತುತ್ತಾದ  ದರಾಲಿ, ಮತ್ತು ಹರ್ಸಿಲ್…

5 hours ago

ಬೆಳಗಾವಿ : ಗೊಣ್ಣೆಹುಳು ಕಾಟದಿಂದ ಬೆಳೆ ಭೀತಿಯಲ್ಲಿ ರೈತರು | ಕೀಟ ಬಾಧೆಗೆ ತುತ್ತಾಗಿ ಅಪಾರ ನಷ್ಟ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದಲ್ಲಿ ಗೊಣ್ಣೆ ಹುಳ್ಳುಗಳ ಕಾಟ ಶುರುವಾಗಿದ್ದು, ರೈತರು…

5 hours ago

ಹವಾಮಾನ ವರದಿ | 08-08-2025 | ಸಾಮಾನ್ಯ ಮಳೆ ಸಾಧ್ಯತೆ | ಆ.15 ರಿಂದ ಎಲ್ಲೆಲ್ಲಾ ಮತ್ತೆ ಮಳೆಯಾಗಬಹುದು..?

ಈಗಿನಂತೆ ಆಗಸ್ಟ್ 10 ರಿಂದ ಮಳೆ ಕಡಿಮೆಯಾಗುವ ಸಾಧ್ಯತೆಗಳಿದ್ದರೂ ಆಗಸ್ಟ್ 16ರಿಂದ ಕರಾವಳಿಗೆ…

14 hours ago

ಅಡಿಕೆ ವಹಿವಾಟಿನಲ್ಲಿ ವಂಚನೆ | ಮುಂಬೈ ಉದ್ಯಮಿಗೆ 30 ಲಕ್ಷ ಪಂಗನಾಮ

ಅಡಿಕೆ ವಹಿವಾಟಿನಲ್ಲಿ ಈಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾತ್ರವಲ್ಲ…

20 hours ago

ರಾಜ್ಯದ ಐವರು ನೇಕಾರರಿಗೆ ಪ್ರಶಸ್ತಿ ಪ್ರದಾನ – ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ   11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ  ಕಾರ್ಯಕ್ರಮದಲ್ಲಿ  ಐವರು  ನೇಕಾರರಿಗೆ  ರಾಜ್ಯ…

21 hours ago