ಶ್ರೀಕೃಷ್ಣನ ಕೆಲಸಗಳೇ ವಿಶ್ವ ಹಿಂದೂ ಪರಿಷತ್ ಗೆ ಆದರ್ಶ- ಶರಣ್ ಪಂಪ್ ವೆಲ್

August 26, 2019
9:37 PM

ಸುಳ್ಯ: ಸಮಾಜವನ್ನೂ, ದೇಶವನ್ನೂ, ಮಾತೆಯರನ್ನೂ, ಗೋಮಾತೆಯನ್ನೂ ರಕ್ಷಿಸಲು ಶ್ರೀಕೃಷ್ಣ ಅಂದು ಮಾಡಿದ್ದ ಕೆಲಸಗಳನ್ನು ಇಂದು ವಿಶ್ಚ ಹಿಂದೂ ಪರಿಷತ್ ಮತ್ತು ಭಜರಂಗದಳ ಮಾಡುತ್ತಿದೆ. ಶ್ರೀಕೃಷ್ಣ ಜಯಂತಿಯಂದು ಆರಂಭಗೊಂಡ ವಿ.ಹಿಂ.ಪ ಭಜರಂಗದಳ ಸಂಘಟನೆಗಳಿಗೆ ಶ್ರೀಕೃಷ್ಣನ ಕೆಲಸಗಳೇ ಆದರ್ಶ ಎಂದು ವಿಶ್ವ ಹಿಂದೂ ಪರಿಷತ್ ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಆರನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು‌.

Advertisement

ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕೆ.ಎಸ್‌‌.ಗೋಪಾಲಕೃಷ್ಣ ಕರೋಡಿ ಅಧ್ಯಕ್ಷತೆ ವಹಿಸಿದ್ದರು.
ವಿ.ಹಿಂ.ಪ ಪುತ್ತೂರು ಜೆಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಭಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಸುಳ್ಯಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ವಿ.ಹಿಂ.ಪ ಸುಳ್ಯ ಪ್ರಖಂಡ ಅಧ್ಯಕ್ಷ ಗಣಪತಿ ಭಟ್ ಮಜಿಗುಂಡಿ, ವಿ.ಹಿಂ.ಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್, ಮೊಸರು ಕುಡಿಕೆ ಉತ್ಸವ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ಪಿ.ರಂಜಿತ್ ಕುಮಾರ್, ಮಾತೃಶಕ್ತಿ ಪ್ರಮುಖ್ ಬಿ.ಲೀಲಾವತಿ ಬಳ್ಳಡ್ಕ, ದುರ್ಗಾವಾಹಿನಿ ಸಂಯೋಜಕಿ ನಮಿತ ಪ್ರವೀಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲತೀಶ್ ಗುಂಡ್ಯ ಸ್ವಾಗತಿಸಿ, ಭಜರಂಗದಳ ಸಂಯೋಜಕ್ ನಿಕೇಶ್ ಉಬರಡ್ಕ ವಂದಿಸಿದರು. ಶ್ರೀದೇವಿ ನಾಗರಾಜ ಭಟ್ ಮತ್ತು ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
6,100 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಚಾಲನೆ | ದೇಶದಲ್ಲಿ ಅಭಿವೃದ್ಧಿ ಪರಿಕಲ್ಪನೆಗೆ ಹೊಸ ವೇಗ
October 21, 2024
7:26 PM
by: ದ ರೂರಲ್ ಮಿರರ್.ಕಾಂ
ನಕಲಿ ದಾಖಲೆ ಕೊಟ್ಟು ಪಡಿತರ ಚೀಟಿ ಮಾಡಿಸಿದರೆ ಜೋಕೆ : ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷ ರೇಷನ್ ಕಾರ್ಡ್ ರದ್ದು : ಕಾರಣ ಏನು..?
August 2, 2024
2:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group