Advertisement
ಸುದ್ದಿಗಳು

ಸಂಚಾರಿ ನಿಯಂತ್ರಣದಲ್ಲಿ ಸಮರ್ಥ ಸೇವೆ- ಗೃಹರಕ್ಷ ದಳದ ಪುಷ್ಪಾವತಿಗೆ ಸನ್ಮಾನ

Share

ಸುಳ್ಯ: ತುಂಬಿ ತುಳುಕುವ ಸುಳ್ಯ ನಗರದಲ್ಲಿ ವಾಹನ ಚಲಾಯಿಸುವುದು ಒಂದು ಸವಾಲು. ಅದೇ ರೀತಿ ದಿನಪೂರ್ತಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸುವುದು ನಿಜಕ್ಕೂ ಒಂದು ಸಾಹಸವೇ ಸರಿ. ಅಂತಹಾ ಸವಾಲಿನ ಕೆಲಸವನ್ನು ಅತ್ಯಂತ ಚಾಕಚಕ್ಯತೆಯಿಂದ, ಸಮರ್ಥವಾಗಿ ನಿಭಾಯಿಸುವವರು ಸುಳ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳು. ಧೋ ಎಂದು ಸುರಿಯುವ ಮಳೆಯನ್ನೂ, ಸುಡು ಬಿಸಿಲನ್ನೂ ಲೆಕ್ಕಿಸದೆ ಸುಳ್ಯ ನಗರದ ವಾಹನ ಸಂಚಾರವನ್ನು ನಿಯಂತ್ರಿಸುವುದು ಮಹಿಳೆಯರೂ ಸೇರಿದ ಗೃಹ ರಕ್ಷಕ ದಳದ ಸಿಬ್ಬಂದಿಗಳು. ಅದರಲ್ಲೂ ಕಳೆದ ಹಲವು ವರ್ಷಗಳಿಂದ ವಾಹನ ಸಂಚಾರವನ್ನು ಸಮರ್ಥವಾಗಿ ನಿಯಂತ್ರಿಸುವವರು ಗೃಹರಕ್ಷಕ ದಳದ ಸಿಬ್ಬಂದಿ ಪುಷ್ಪಾವತಿ. ನ.ಒಂದರಂದು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಪುಷ್ಪಾವತಿ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಎಸ್‌.ಅಂಗಾರ ಸನ್ಮಾನ ನೆರವೇರಿಸಿ ಇವರ ಸೇವೆಯನ್ನು ಶ್ಲಾಘಿಸಿದರು.

ಸುಳ್ಯ ನಗರದಲ್ಲಿ ಅತ್ಯಂತ ವಾಹನ ದಟ್ಟಣೆ ಉಂಟಾಗುತ್ತಿರುವುದು ಕಟ್ಟೆಕ್ಕಾರ್ ವೃತ್ತ, ಜಟ್ಟಿಪಳ್ಳ ತಿರುವು,ಜ್ಯೂನಿಯರ್ ಕಾಲೇಜು ತಿರುವು ಮತ್ತು ಜ್ಯೋತಿ ವೃತ್ತದಲ್ಲಿ ಇಲ್ಲಿ ವಾಹನ ದಟ್ಟಣೆ ಉಂಟಾಗದಂತೆ, ಅಪಘಾತ ಅಥವಾ ಯಾವುದೇ ಸಮಸ್ಯೆ ಆಗದಂತೆ ಒಂದು ನಿಮಿಷವೂ ತಡ ಮಾಡದೆ ನಾಲ್ಕು ಕಡೆಗಳಿಂದ ಹರಿದು ಬರುವ ವಾಹನಗಳನ್ನು ಅತ್ಯಂತ ನಾಜೂಕಿನಿಂದ ನಿಯಂತ್ರಿಸುತ್ತಾರೆ ಸುಳ್ಯದ ಗೃಹ ರಕ್ಷಕ ದಳದ ಸಿಬ್ಬಂದಿಗಳು. ಉಳಿದ ಎಲ್ಲಾ ನಗರಗಳಲ್ಲಿಯೂ ಟ್ರಾಫಿಕ್ ಠಾಣೆಗಳಿದ್ದು ಟ್ರಾಫಿಕ್ ಪೊಲೀಸರೇ ವಾಹನ ಸಂಚಾರ ನಿಯಂತ್ರಿಸುತ್ತಾರೆ. ಆದರೆ ಸುಳ್ಯದಲ್ಲಿ ಸಂಚಾರಿ ಪೊಲೀಸ್ ಠಾಣೆ ಇಲ್ಲದ ಕಾರಣ ನಗರದ ಸಂಚಾರಿ ವ್ಯವಸ್ಥೆಯನ್ನು ಸುಳ್ಯ ಪೊಲೀಸ್ ಠಾಣೆಯಿಂದಲೇ ನಿಯಂತ್ರಿಸಲಾಗುತ್ತದೆ. ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ಸಂಚಾರಿ ಠಾಣೆಯ ಕೆಲಸವನ್ನು ನಿಭಾಯಿಸುತ್ತಾರೆ‌. ಆದುದರಿಂದಲೇ ಗೃಹರಕ್ಷಕ ದಳ ಸಿಬ್ಬಂದಿಗಳ ಪ್ರತಿನಿಧಿಯಾಗಿ ಹಲವು ವರ್ಷಗಳಿಂದ ಸಮರ್ಥವಾಗಿ ಸಂಚಾರಿ ನಿಯಂತ್ರಣವನ್ನು ನಿರ್ವಹಿಸುವ ಪುಷ್ಪಾವತಿಯವರಿಗೆ ತಾಲೂಕು ಆಡಳಿತ ಗೌರವ ಸಲ್ಲಿಸಿದೆ. ಆದುದರಿಂದ ರಾಜ್ಯೋತ್ಸವ ದಿನದ ಬಿಗ್ ಸಲ್ಯೂಟ್ ನಗರದ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗಿರಲಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

20 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago