ಸಂಪಾಜೆ:ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಚುನಾವಣಾ ಕಣದಲ್ಲಿರುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನ ಮತ್ತು ಕಾಂಗ್ರೆಸ್, ಜೆಡಿಎಸ್ ಬೆಂಬಲಿತರು 2 ಸ್ಥಾನಗಳನ್ನು ಪಡೆದು ಕೊಂಡಿರುತ್ತಾರೆ.
ಬಿಜೆಪಿ-ಸಹಕಾರ ಭಾರತಿ ಬೆಂಬಲಿತರು : ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಅನಂತ್ ಉರುಬೈಲು, ದಯಾನಂದ ಪನೆಡ್ಕ, ಯಶವಂತ ಗುಂಡ, ರಾಜಾರಾಮ್ ಕಳಗಿ ಹಾಗೂ ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ ಮನೋರಮಾ ಬೊಳ್ತಾಜೆ , ವಾಣಿ ಜಗದೀಶ್ ಕೆದಂಬಾಡಿ , ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಕಿಶನ್ ಪೊನ್ನಾಟಿಯಂಡ, ರಾಮಮೂರ್ತಿ ಉಂಬಳೆ , ಪ.ಪಂಗಡ ಕ್ಷೇತ್ರದಲ್ಲಿ ಪಕ್ಕೀರ , ಪ.ವರ್ಗ ಕ್ಷೇತ್ರದಲ್ಲಿ ವಸಂತ ಕುದುರೆಪಾಯ
ಸಾಲರಹಿತ ಸಾಮಾನ್ಯ ಕ್ಷೇತ್ರದಲ್ಲಿ ದಿನೇಶ ಸಣ್ಣಮನೆ ಗೆಲುವು ಸಾಧಿಸಿದರೆ ಕಾಂಗ್ರೆಸ್ ಬೆಂಬಲಿತರು ಆದಂ ಸಂಟ್ಯಾರ್, ಗಣಪತಿ ಬಲ್ಯಮನೆ ಯವರು ವಿಜಯಶಾಲಿಯಾಗಿದ್ದಾರೆ.
ಚುನಾವಣೆಯಲ್ಲಿ ನಗೆ ಬೀರಿದ ಬಿಜೆಪಿ ಪಕ್ಷದ ವಿಜಯೋತ್ಸವ ಸಮಾರಂಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಕುಂದಲ್ಪಾಡಿಯವರು ಚುನಾಯಿತ ಪ್ರತಿನಿಧಿಗಳನ್ನು ಅಭಿನಂದಿಸಿ ಶುಭಕೋರುತ್ತ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಸಂಪಾಜೆ ಗ್ರಾಮದ ಅಭಿವೃದ್ಧಿ ಹರಿಕಾರ ದಿವಂಗತ ಬಾಲಚಂದ್ರ ಕಳಗಿಯವರನ್ನು ಸ್ಮರಿಸಿದರು..
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.