ಧರ್ಮಸ್ಥಳ: ಶಿವನನ್ನು ಲಯಕರ್ತ ಎಂದು ಕರೆಯುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಆದಿಯಿಂದ ಅಂತ್ಯದೆಡೆಗೆ ಹೋಗುತ್ತದೆ. ಶಾಶ್ವತವಾಗಿ ಈ ಪ್ರಪಂಚದಲ್ಲಿ ಯಾವುದೇ ಚರಾಚರ ವಸ್ತುಗಳು ಇರಲು ಸಾಧ್ಯವಿಲ್ಲ. ಎಲ್ಲವೂ ನಾಶವಾಗುವುದು ಸ್ವಾಭಾವಿಕ, ಇದು ಶಿವನ ತತ್ವ. ಪ್ರಪಂಚದಲ್ಲಿ ನಾನಾ ಧರ್ಮಗಳು ಚಾಲ್ತಿಯಲ್ಲಿದೆ. ಆದರೆ ಎಲ್ಲಾ ಧರ್ಮಗಳ ತಾತ್ಪರ್ಯವು ಮಾನವೀಯತೆ ಆಗಿದೆ. ಆದ ರೆಜನರು ಧರ್ಮವನ್ನು ಅರ್ಥೈಸಿಕೊಳ್ಳುವುದರಲ್ಲಿ ವ್ಯತ್ಯಾಸವಾಗುವ ಕಾರಣ ಧಾರ್ಮಿಕ ಕ್ಲೇಶಗಳು ಸಮಾಜದಲ್ಲಿ ಉಂಟಾಗುತ್ತದೆ. ಧಾರ್ಮಿಕ ಮುಖಂಡರುಗಳು ಈ ವ್ಯತ್ಯಾಸಗಳನ್ನು ಹೊಗಲಾಡಿಸಲು ಪ್ರಯತ್ನಿಸಬೇಕಾಗಿದೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ ದಿ ಯುನೈಡೆಡ್ ಮೆಥೊಡಿನಸ್ಸ್ ಚರ್ಚ್’ ವತಿಯಿಂದ ಶ್ರೀಕ್ಷೇತ್ರಕ್ಕೆ ಅಮೇರಿಕಾದಿಂದ ಬಂದಂತಹ ವಿದ್ಯಾರ್ಥಿಗಳ ತಂಡವನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳವು ನಡೆಸುತ್ತಿರುವ ಜನಕಲ್ಯಾಣ ಕಾರ್ಯಕ್ರಮಗಳ ಅಧ್ಯಯನಕ್ಕೆ ಈ ತಂಡವು ಆಗಮಿಸಿತ್ತು. ಶ್ರೀ ಕ್ಷೇತ್ರದ ವಿವಿಧ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರು. ತಂಡದಲ್ಲಿ ಡಾ. ಇ.ವಿ.ಎಸ್ ಮಾಬೆನ್, ಪ್ರೊಫೆಸರ್, ಎ.ಜೆ. ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಕಲಾ ಸಾಯನ್ಸ್, ಬಿಷಬ್ ಸುದರ್ಶನ್ ದೇವಾಧಾರ್, ಮೆಥೋಡಿಸ್ಟ್ ಚರ್ಚ್, ನ್ಯೂ ಇಂಗ್ಲೆಂಡ್ ಕಾನ್ಪರೆಸ್ಸ್, ಬಿಷಬ್ ಈಸ್ಟರ್‍ಲಿಂಗ್ , ಟೆಡ್‍ಆಂಡರ್‍ಸನ್ ಮತ್ತು ಮೇರಿ ಆಂಡರ್‍ಸನ್ ಇವರು ವಿದ್ಯಾರ್ಥಿಗಳ ತಂಡವನ್ನು ಪ್ರತಿನಿಧಿಸಿದರು.
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…