ಸುಳ್ಯ: ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಮೂರು ವರ್ಷ ಪೂರೈಸಿರುವ ಎಲ್ಲಾ ವಿದ್ಯಾರ್ಥಿಗಳ ಮನೆಯಲ್ಲಿ ನಡೆಸಲ್ಪಡುವ ಸರಣಿ ಶಿವಪೂಜಾ ಅಭಿಯಾನವನ್ನು ಪ್ರಾರಂಭಿಸುವ ಸಲುವಾಗಿ ಪೋಷಕರ ಪೂರ್ವಭಾವಿ ಸಭೆಯು ಶ್ರೀ ಕೇಶವಕೃಪಾದಲ್ಲಿ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಶಿವಪೂಜೆಯ ಬಗ್ಗೆ ಮಾಹಿತಿ ಹಾಗೂ ಪ್ರಯೋಜನದೊಂದಿಗೆ ಧರ್ಮಜಾಗೃತಿಯ ಸಂದೇಶವನ್ನು ನೀಡುವ ಶಿವಾರಾಧನೆಯ ಮಹತ್ವವನ್ನು ವಿವರಿಸಿದರು.
ಈ ವರ್ಷದ ಅಭಿಯಾನದ ಪ್ರಧಾನ ಸಂಚಾಲಕರಾಗಿ ಉದಯಶಂಕರ ಭಟ್ ಕೊಡ್ಯಡ್ಕ ಹಾಗೂ ಸಹಸಂಚಾಲಕರಾಗಿ ಸತ್ಯನಾರಾಯಣ ಕರತಂಡ ಮತ್ತು ಮಹಿಳಾ ಸಂಚಾಲಕಿಯಾಗಿ ಮಮತಾ ರಾಜಾರಾಮ ಅವರನ್ನು ಆಯ್ಕೆ ಮಾಡಲಾಗಿದೆ.
ಸದ್ರಿ ವರ್ಷದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಸುಮಾರು 30 ಮನೆಗಳಲ್ಲಿ ಪ್ರತೀ ಭಾನುವಾರದಂದು ಶಿವಾರಾಧನೆ ನಡೆಯಲಿದ್ದು, ಈ ಹಿಂದಿನ ವರ್ಷಗಳಲ್ಲಿ ಒಟ್ಟು 406 ಶಿವಪೂಜಾ ನೆರವೇರಿಸಿದ್ದು, 407ನೇ ಅಭಿಯಾನದಿಂದ ಮುಂದುವರಿಯಲಿದೆ. ಸಪ್ಟಂಬರ್ ತಿಂಗಳ 15ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಸದ್ರಿ ವರ್ಷದ ಅಭಿಯಾನವು ಸಮಾರೋಪಗೊಳ್ಳಲಿದೆ.
ವೇದಿಕೆಯಲ್ಲಿ ರಾಜಗೋಪಾಲ ಭಟ್, ವೇ| ಮೂ| ಸುದರ್ಶನ ಭಟ್, ಕುಂಬ್ರ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಅಭಿಯಾನದ ನೂತನ ಸಂಚಾಲಕ ಉದಯಶಂಕರ ಭಟ್ ಕೊಡ್ಯಡ್ಕ ಎಲ್ಲರ ಸಹಕಾರವನ್ನು ಯಾಚಿಸಿ ಧನ್ಯವಾದ ಸಮರ್ಪಿಸಿದರು.
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…
ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…
ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…