ಸವಣೂರು: ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆ ಸರ್ವೆ ಇದರ ವತಿಯಿಂದ ಪ್ರತಿ ವರ್ಷದಂತೆ ಸರ್ವೆ ಗ್ರಾಮಕ್ಕೆ ಸಂಬಂಧಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1 ನೇ ತರಗತಿಯಿಂದ 10 ನೇ ತರಗತಿ ವರೆಗಿನ ಸುಮಾರು 120 ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಶಾಲಾ ಪರಿಕರಗಳನ್ನು ರವಿವಾರ ಸಂಜೆ ಸರ್ವೆ ಸುಬ್ರಾಯ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಗಿರಿಶಂಕರ್ ಸುಲಾಯ ಅವರು,ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮುಂಡೂರು ಗ್ರಾ. ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೋಟ್ಯಾಡಿ ಶುಭಹಾರೈಸಿದರು.
ಮಂಗಳೂರಿನ ಕ್ಯಾಡ್ ಸೆಂಟರ್ ಫ್ರಾಂಚೈಸಿಯ ಸಾರಿಕ ಅನಿಲ್ ಹೆಗ್ಡೆ ಉಚಿತ ಪುಸ್ತಕ ಹಾಗೂ ಕಲಿಕಾ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದರು.
ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ,ಹಿಂ.ಜಾ.ವೇ. ಅಧ್ಯಕ್ಷ ಪದ್ಮನಾಭ ಗೌಡ ಸರ್ವೆ,ನವೀನ್ ರೈ ಸರ್ವೆ, ಯೋಗಿಶ್ ಟಿ, ಯತೀಶ್ ಸರ್ವೆ,ಗೌತಮ್ ರೈ,ಪ್ರವೀಣ್ ನಕ್ಕಿದಡ್ಕ,ದೇವಪ್ಪ ಕಾಡಬಾಗಿಲು,ಧನಂಜಯ,ಜಿತೇಶ್, ಕಿರಣ್,ಸುಂದರ,ಹರೀಶ್,ಸೌರಾಜ್ ,ಲಕ್ಷ್ಮೀಶ್ ರೈ ಸರ್ವೆ ಉಪಸ್ಥಿತರಿದ್ದರು.
ಸ್ವಸ್ತಿಕ್ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿ, ಹಿಂ.ಜಾ. ವೇ ಕಾರ್ಯದರ್ಶಿ ಜನಾರ್ದನ ಸರ್ವೆ ವಂದಿಸಿದರು.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?