ಸವಣೂರು : ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಸವಣೂರು ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಸಂಜೆ ದ.ಕ.ಜಿ.ಪಂ. ಸಿಇಓ ಡಾ.ಆರ್ ಸೆಲ್ವಮಣಿ ಬೇಟಿ ನೀಡಿ ಘಟಕದ ಕಾರ್ಯವನ್ನು ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಡಾ.ಸೆಲ್ವಮಣಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡಬೇಕು. ತ್ಯಾಜ್ಯ ವಿಲೇವಾರಿ ತಗಲುವ ವೆಚ್ಚವನ್ನು ತ್ಯಾಜ್ಯಸಂಗ್ರಹಿಸಿ ನೀಡುತ್ತಿರುವವರಿಂದಲೇ ಪಡೆಯಬೇಕು. ಶುಲ್ಕ ಹೆಚ್ಚಳಕ್ಕೆ ಅವಕಾಶವಿದೆ. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕ್ರಮಕೈಗೊಳ್ಳಬಹುದು. ಘಟಕಕ್ಕೆ ಆವಶ್ಯಕವಾಗಿರುವ ಮೂಲಭೂತ ವ್ಯವಸ್ಥೆಗಾಗಿ 2 ಲಕ್ಷ ಅನುದಾನ ಮಂಜೂರು ಮಾಡಲಾಗುವುದು ಎಂದರು.
ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರು, ಘಟಕಕ್ಕೆ ಆವಶ್ಯವಿರುವ ವಿದ್ಯುತ್ ಸಂಪರ್ಕ, ಕೊಳವೆ ಬಾವಿ ಕೊರೆಯಲು ಗ್ರಾ.ಪಂ.ನಿಂದ ಅನುದಾನ ಮೀಸಲಿಡಲಾಗಿದೆ ಎಂದರು. ಪಿಡಿಓ ನಾರಾಯಣ ಬಟ್ಟೋಡಿ ಅವರು ಘಟಕದ ಕಾರ್ಯ ನಿರ್ವಹಣೆಯ ಕುರಿತು ಸಿಇಓ ಅವರಿಗೆ ವಿವರಿಸಿದರು.
ಈ ಸಂದರ್ಭ ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ, ಸಿಬ್ಬಂದಿ ಪ್ರಮೋದ್ ಕುಮಾರ್ ರೈ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸ್ವಚ್ಚತಾ ನಿರ್ವಾಹಕ ಬಾಬು ಉಪಸ್ಥಿತರಿದ್ದರು.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…